BBK11; ವೀಲ್​ಚೇರ್​ ಮೇಲಿದ್ದ ತಮ್ಮನನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತ ಮೋಕ್ಷಿತಾ.. ಅಕ್ಕನನ್ನೇ ಮರೆತನಾ ಸಹೋದರ?

author-image
Bheemappa
Updated On
BBK11; ವೀಲ್​ಚೇರ್​ ಮೇಲಿದ್ದ ತಮ್ಮನನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತ ಮೋಕ್ಷಿತಾ.. ಅಕ್ಕನನ್ನೇ ಮರೆತನಾ ಸಹೋದರ?
Advertisment
  • ಸ್ವಂತ ಅಕ್ಕನನ್ನೇ ಮರೆತು ಹೋದನಾ ಮೋಕ್ಷಿತಾ ಅವರ ಸಹೋದರ?
  • ಮೋಕ್ಷಿತಾ ತಮ್ಮ ಬಂದಿದ್ದಕ್ಕೆ ಮನೆಯಲ್ಲಿನ ಸ್ಪರ್ಧಿಗಳ ಕಣ್ಣುಗಳಲ್ಲಿ ನೀರು
  • ಮನೆಯಲ್ಲಿ ಮೋಕ್ಷಿತಾ ಅಳುತ್ತಿದ್ದಂತೆ ಸ್ಪರ್ಧಿ ಗೌತಮಿ ಕೂಡ ಅತ್ತಿದ್ದಾರೆ

ಕಿಚ್ಚ ಸುದೀಪ್ ಅವರು ನಡೆಸಿ ಕೊಡುವ ಕನ್ನಡದ ಬಿಗ್ ರಿಯಾಲಿಟಿ ಶೋ ಕನ್ನಡಿಗರ ಮನ ಗೆದ್ದಿದೆ. ವಾರದಿಂದ ವಾರಕ್ಕೆ ಹೆಚ್ಚು ಹೆಚ್ಚು ಜನರನ್ನು ಸೆಳೆಯುತ್ತ ಯಶಸ್ವಿಯಾಗಿ ಸಾಗುತ್ತಿದೆ. ನ್ಯೂ ಇಯರ್ ಹಿನ್ನೆಲೆಯಲ್ಲಿ ಮನೆಯಲ್ಲಿರುವ ಎಲ್ಲ ಸ್ಪರ್ಧಿಗಳ ಕುಟುಂಬಸ್ಥರು ಬಂದು ನೋಡಿಕೊಂಡು ಹೋಗುತ್ತಿದ್ದಾರೆ. ಇದೇ ರೀತಿ ಮೋಕ್ಷಿತಾಗೆ ಬಿಗ್​ಬಾಸ್ ಬಿಗ್​ ಸರ್​ಪ್ರೈಸ್​ ಕೊಟ್ಟಿದ್ದಾರೆ. ಆದರೆ ತಮ್ಮನನ್ನು ನೋಡಿ ಅಕ್ಕ ಮೋಕ್ಷಿತಾ ಕಣ್ಣೀರು ಹಾಕಿರುವುದು ಎಲ್ಲರ ಕರುಳು ಚುರುಕ್ ಅನ್ನುತ್ತೆ.

ಹೊಸ ವರ್ಷ ಬಿಗ್​ಬಾಸ್​ ಮನೆಯಲ್ಲೂ ಅದ್ಧೂರಿಯಾಗಿ ಸೆಲೆಬ್ರೆಷನ್ ಮಾಡಲಾಗಿದೆ. ಎಲ್ಲ ಸ್ಪರ್ಧಿಗಳು ಸಖತ್ ಆಗಿಯೇ ಕುಣಿದು ಕುಪ್ಪಳಿಸುತ್ತಿದ್ದರು. ಮೋಕ್ಷಿತಾ ಕೂಡ ನಾನೇನು ಕಮ್ಮಿ ಇಲ್ಲ ಎನ್ನುವಂತೆ ಬಿಗ್​ಬಾಸ್​ಗೆ ಬಂದ ಮೇಲೆ ಪ್ರೀತಿಯ ಸಹೋದರನ್ನು ಮರೆತು ಡ್ಯಾನ್ಸ್​ ಮಾಡುತ್ತಿದ್ದರು. ಆದರೆ ಈ ವೇಳೆ ನೋಡಿ ಫುಲ್ ಶಾಕ್ ಆಗಿರೋದು. ಬಿಗ್​ಬಾಸ್​ ಮನೆಗೆ ಕುಟುಂಬ ಬರುತ್ತಿದ್ದಂತೆ ತಮ್ಮನನ್ನು ನೋಡಿ ಮೋಕ್ಷಿತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

publive-image

ಇದನ್ನೂ ಓದಿ: BIGG BOSS; ಅಮ್ಮನನ್ನು ತಬ್ಬಿಕೊಂಡು ಭವ್ಯ ಕಣ್ಣೀರು.. ತ್ರಿವಿಕ್ರಮ್ ಅತ್ತಿದ್ದು ಯಾಕೆ?

ಇಷ್ಟು ದಿನ ಬಿಟ್ಟು ಇದ್ದಿದ್ದೆ. ತುಂಬಾ ಮಿಸ್​ ಮಾಡಿಕೊಳ್ಳುತ್ತಿದ್ದೆ. ಪುಟಾಣಿ ಎಂದು ಕರೆದರೂ ವೀಲ್ ಚೇರ್ ಮೇಲಿದ್ದ ಸಹೋದರ, ಮೋಕ್ಷಿತಾರನ್ನ ಯಾರೆಂದು ಗುರುತಿಸಲಿಲ್ಲ. ಅದಕ್ಕೆ ನನ್ನನ್ನು ಮರೆತು ಹೋಗಿದ್ದಾನೆ. ಇಷ್ಟು ದಿನ ಮನೆಯಲ್ಲಿ ಇರದಿದ್ದಕ್ಕೆ ನನ್ನನ್ನು ಮರೆತು ಹೋಗಿ ಬಿಟ್ಟಿದ್ದಾನೆ ಎಂದು ಮೋಕ್ಷಿತಾ, ತಮ್ಮನನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ. ಇದೇ ವೇಳೆ ಮೋಕ್ಷಿತಾ ತಂದೆ, ತಾಯಿ ಕೂಡ ಕಣ್ಣೀರು ಹಾಕಿರುವುದು ಎಲ್ಲರನ್ನೂ ಮೂಕವಿಸ್ಮಿತರಾಗಿ ಮಾಡುತ್ತದೆ.

ಮೋಕ್ಷಿತಾ ತಮ್ಮನ ಪರಿಸ್ಥಿತಿಯನ್ನು ನೋಡಿ ಮನೆಯಲ್ಲಿರುವ ಎಲ್ಲ ಸ್ಪರ್ಧಿಗಳು ಬೆರಗಾಗಿದ್ದರು. ಗೌತಮಿಯಂತೂ ದುಃಖಿಸಿರುವುದು ಎಲ್ಲರ ಮನ ಕದಡುವಂತೆ ಇತ್ತು. ಚೈತ್ರಾ, ಮಂಜು, ರಜತ್, ಹನುಮಂತು, ತ್ರಿವಿಕ್ರಮ್, ಧನರಾಜ್ ಎಲ್ಲರ ಮುಖದಲ್ಲಿನ ಭಾವ ಕೂಡ ಏನೋ ಹೇಳುವಂತೆ ಇತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment