/newsfirstlive-kannada/media/post_attachments/wp-content/uploads/2025/01/RAJATH_1.jpg)
ಕನ್ನಡದ ಬಿಗ್ಬಾಸ್ ಟಾಸ್ಕ್ನಲ್ಲಿ ಮನೆಯ ಖಳನಾಯಕ ಆಗಿರುವ ವೈಲ್ಡ್ ಕಾರ್ಡ್ ಎಂಟ್ರಿ ರಜತ್ ಅವರು ಗ್ರ್ಯಾಂಡ್ ಫಿನಾಲೆಗೆ ತಲುಪಲು ಅರ್ಹತೆ ಇಲ್ಲದ ಐವರು ಸ್ಪರ್ಧಿಗಳಿಗೆ ಟಿಕೆಟ್ ಟು ಹೋಮ್ ಫಲಕ ಕೊರಳಿಗೆ ಹಾಕಬೇಕು. ಹೀಗಂತ ಪ್ರೋಮೋದಲ್ಲಿ ಬಿಗ್ ಬಾಸ್ ಹೇಳುತ್ತಿದ್ದಂತೆ ರಜತ್ ಅವರು ಸಖತ್ ಖುಷಿಯಲ್ಲಿ ಡ್ಯಾನ್ಸ್ ಮಾಡುತ್ತ ಐವರು ಸ್ಪರ್ಧಿಗಳ ಕೊರಳಿಗೆ ಟಿಕೆಟ್ ಟು ಹೋಮ್ ಫಲಕ ಹಾಕಿದ್ದಾರೆ.
ಹನುಮಂತು, ಚೈತ್ರಾ, ಗೌತಮಿ, ಭವ್ಯಗೌಡ ಹಾಗೂ ಮೋಕ್ಷಿತಾ ಅವರ ಕೊರಳಿಗೆ ರಜತ್ ಅವರು ಬೋರ್ಡ್ ಅನ್ನು ನೇತು ಹಾಕಿದ್ದಾರೆ. ಅಂದರೆ ಈ 5 ಸ್ಪರ್ಧಿಗಳಿಗೆ ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆಗೆ ಹೋಗುವ ಅರ್ಹತೆ ಇಲ್ಲವೆಂದು ಹೇಳಿದಂತೆ ಆಗಿದೆ. ಇನ್ನು ಈ ವೇಳೆ ರಜತ್ ಹಾಗೂ ಚೈತ್ರಾ ಮಧ್ಯೆ ಸಖತ್ ಮಾತಿನ ಸಮರ ನಡೆದಿದ್ದು ಎಲ್ಲರ ಗಮನ ಸೆಳೆದಿದೆ.
ಇದನ್ನೂ ಓದಿ: BIGG BOSS; ಬಿಗ್ಬಾಸ್ನಲ್ಲಿ ಉಮ್ಮಾ ಟಾಸ್ಕ್.. ಮೂರು ತಿಂಗಳು ಆಗಿದೆ ಪ್ರ್ಯಾಕ್ಟೀಸ್ ಇಲ್ಲವೆಂದ ಧನು..!
ಚೈತ್ರಾ ವಿರುದ್ಧ ಉರಿದು ಬಿದ್ದ ರಜತ್, ನೀವು ಟಾಸ್ಕ್ನಲ್ಲಿ ಝೀರೋ ಆಗಿರುತ್ತೀರಿ. ಮಾತನಾಡಿಕೊಂಡು ಮನೆಗೆ ಹೋಗಿ. ಇಲ್ಲಿರುವವರು ಆದರೂ ಆಡಿಕೊಂಡು ಫೈನಲ್ ಗೆಲ್ಲಲಿ ಎಂದು ಕೋಪ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಟಾಂಗ್ ಕೊಟ್ಟ ಚೈತ್ರಾ ಮೊದಲನೇ ದಿನವೇ ನೀವು ಬಿಗ್ಬಾಸ್ ಮನೆಗೆ ಬಂದಿದ್ದರೇ ಐದೇ 5 ದಿನಕ್ಕೆ ವಾಪಸ್ ಹೋಗುತ್ತಿದ್ದೀರಿ. 50 ದಿನ ಕಳೆದ ಮೇಲೆ ಬಂದಿದ್ದೀರಿ ಅದಕ್ಕೆ ನೀವು ಅದೃಷ್ಟ ಮಾಡಿದ್ದೀರಿ ಎಂದು ರಜತ್ಗೆ ಹೇಳಿದ್ದಾರೆ.
50 ದಿನ ಆದಮೇಲೆ ಬಂದಿದ್ದೇನೆ ಎಂದರೆ ಅದು ನಿಮ್ಮ ಅದೃಷ್ಟ. ನಾನು ಆರಂಭದಲ್ಲೇ ಬಂದಿದ್ದೇ ಅಂದರೆ ನಿಮ್ಮನ್ನ ಈಗಾಗಲೇ ಮನೆಗೆ ಕಳಿಸಿಬಿಡುತ್ತಿದ್ದೆ ಎಂದು ರಜತ್ ಹೇಳಿದ್ದಾರೆ. ಈ ಮಧ್ಯೆ ಇಬ್ಬರ ಮಧ್ಯೆ ಬಿಗ್ ಟಾಕ್ ವಾರ್ ನಡೆದಿದ್ದು ಚೈತ್ರಾ ಅವರನ್ನು ಸುಳ್ಳಿ.. ಸುಳ್ಳಿ.. ಸುಳ್ಳಿ.. ಎಂದು ರಜತ್ ಅವರು ಕರೆದು ಕಿಚಾಯಿಸಿದ್ದಾರೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಸ್ಪರ ಬೈದಾಡಿಕೊಂಡಿರುವುದು ಎಂದು ಹೇಳಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ