/newsfirstlive-kannada/media/post_attachments/wp-content/uploads/2025/01/RAJATH.jpg)
ಬಿಗ್ ಬಾಸ್ ಸೀಸನ್ 11ರಲ್ಲಿ ಈ ವಾರ ಯಾರು ಮನೆಯಿಂದ ಆಚೆ ಕಾಲಿಡುತ್ತಾರೆ ಎನ್ನುವುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. 100 ದಿನಗಳ ಸಮೀಪಕ್ಕೆ ಬರುತ್ತಿರುವ ಬಿಗ್ಬಾಸ್ ಇನ್ನು ಕೆಲವು ದಿನಗಳು ಮಾತ್ರ ನಡೆಯಬಹುದು. ಕಳೆದ ವಾರ ಐಶ್ವರ್ಯಗೆ ಗೇಟ್ ಪಾಸ್ ಕೊಡಲಾಗಿತ್ತು. ಇಷ್ಟು ದಿನ ಭವ್ಯಗೆ ಕ್ಯಾಪ್ಟನ್ಸಿ ಕೊಡಲಾಗಿತ್ತು. ಆದರೆ ಈಗ ನಾಯಕನ ಸ್ಥಾನ ರಜತ್ ಅವರು ಪಡೆದುಕೊಂಡಿದ್ದಾರೆ.
ವೈಲ್ಡ್ ಕಾರ್ಡ್ನಲ್ಲಿ ಮನೆಗೆ ಎಂಟ್ರಿ ಕೊಟ್ಟಿದ್ದ ರಜತ್ ಮೊದಲಿಗೆ ಸಖತ್ ರಫ್ ಆಗಿಯೇ ಮನೆ ಮಂದಿ ಜೊತೆ ನಡೆದುಕೊಂಡಿದ್ದರು. ಬಳಿಕ ತಮ್ಮನ್ನು ತಾವು ಅರಿತುಕೊಂಡು ಸ್ಪರ್ಧಿಗಳ ಜೊತೆ ನಿಧಾನಕ್ಕೆ ಸಮಾಧಾನವಾಗಿರಲು ಪ್ರಾರಂಭಿಸಿದ್ದರು. ಈಗ ಮನೆಯವರಿಗೆ ಹೊಂದಿಕೊಂಡಿದ್ದು, ಟಾಸ್ಕ್ಗಳಲ್ಲೂ ಒಳ್ಳೆಯ ಪರ್ಫಾಮೆನ್ಸ್ ನೀಡಿದ ಬೆನ್ನಲ್ಲೇ ರಜತ್ಗೆ ಕ್ಯಾಪ್ಟನ್ ಪಟ್ಟ ನೀಡಲಾಗಿದೆ.
ಇದನ್ನೂ ಓದಿ:BIGG BOSS; ಬಿಗ್ಬಾಸ್ನಲ್ಲಿ ಉಮ್ಮಾ ಟಾಸ್ಕ್.. ಮೂರು ತಿಂಗಳು ಆಗಿದೆ ಪ್ರ್ಯಾಕ್ಟೀಸ್ ಇಲ್ಲವೆಂದ ಧನು..!
ರಜತ್ ಕ್ಯಾಪ್ಟನ್ ಆದ ಮೇಲೆ ತಮ್ಮನ್ನು ತಾವು ಬದಲಾವಣೆ ಮಾಡಿಕೊಳ್ಳಬಹುದು. ಏಕೆಂದರೆ ರಜತ್ ಮನೆಗೆ ಬಂದ ಹೊಸತರದಲ್ಲಿ ಚೈತ್ರಾ, ಗೋಲ್ಡ್ ಸುರೇಶ್ ಹಾಗೂ ಧನರಾಜ್ ಕಂಡರೇ ಆಗುತ್ತಿರಲಿಲ್ಲ. ನಂತರ ದಿನಗಳಲ್ಲಿ ಇವರ ಜೊತೆ ಚೆನ್ನಾಯೇ ಇದ್ದಾರೆ. ನಾಯಕ ಎಂದ ಮೇಲೆ ಇಡೀ ಮನೆಯಲ್ಲಿ ಚೆನ್ನಾಗಿ ಮುಂದಕ್ಕೆ ತೆಗೆದುಕೊಂಡು ಹೋಗಬೇಕಾಗುತ್ತದೆ. ಟಾಸ್ಕ್ ಕೊಡುವುದು, ಟಾಸ್ಕ್ಗಳಲ್ಲಿ ಯಾವುದೇ ಮೋಸ ಆಗದಂತೆ ನೋಡಿಕೊಳ್ಳಬೇಕು. ಹೀಗಾಗಿ ತಮ್ಮನ್ನು ಚೇಂಜ್ ಮಾಡಿಕೊಂಡು ಟ್ರೋಫಿ ಬಳಿಗೆ ಹೋಗಲು ಯತ್ನಿಸಬೇಕು.
ರಜತ್ ಕ್ಯಾಪ್ಟನ್ ಆಗಿದ್ದಕ್ಕೆ ಕಿಚ್ಚ ಸುದೀಪ್ ಪತ್ರ ಕೂಡ ಬರೆದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹೀರೋ ಹಾಗೂ ಖಳನಾಯಕ ಈ ಇಬ್ಬರಲ್ಲಿ ವ್ಯತ್ಯಾಸ ಇಷ್ಟೇ. ಇದರಲ್ಲಿ ಒಬ್ಬರಿಗೆ ಕೋಪ ಜಾಸ್ತಿ ಇದ್ರೆ. ಇನ್ನೊಬ್ಬರಿಗೆ ತಾಳ್ಮೆ ಇರುತ್ತದೆ. ನೀವು ಏನು ಆಗಲು ಬಯಸುತ್ತೀರಾ ಎಂದು ಸುದೀಪ್ ಅವರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ನಾನು ಕಿಚ್ಚನ ಅಭಿಮಾನಿ ಎಂದು ರಜತ್ ಹೇಳಿರುವುದು ಉತ್ತರ ಕೊಟ್ಟಂತೆ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ