BIGG BOSS ಗ್ರ್ಯಾಂಡ್​ ಫಿನಾಲೆಗೆ ಈ ನಾಲ್ವರು ಹೋಗೋದು ಫಿಕ್ಸ್​.. ಟಾಸ್ಕ್​ನಲ್ಲಿ ರಜತ್ ಆಯ್ಕೆ ಸರಿನಾ?

author-image
Bheemappa
Updated On
BIGG BOSS ಗ್ರ್ಯಾಂಡ್​ ಫಿನಾಲೆಗೆ ಈ ನಾಲ್ವರು ಹೋಗೋದು ಫಿಕ್ಸ್​.. ಟಾಸ್ಕ್​ನಲ್ಲಿ ರಜತ್ ಆಯ್ಕೆ ಸರಿನಾ?
Advertisment
  • ಕೊರಳಿಗೆ ಬೋರ್ಡ್ ಹಾಕಿರುವ ಪ್ರಕಾರ ಇವರು ಫಿನಾಲೆಗೆ ಬರಲ್ವಾ?
  • ಕನ್ನಡದ ಬಿಗ್​ ಶೋ ಬಿಗ್​ಬಾಸ್​ ಗ್ರ್ಯಾಂಡ್ ಫಿನಾಲೆ ಸಮೀಸುತ್ತಿದೆ
  • ಚೈತ್ರಾ, ಹನುಮಂತು ಅವರನ್ನೇ ಮೊದಲು ಟಾರ್ಗೆಟ್ ಮಾಡಿದ್ರಾ.?

ಬಿಗ್​ಬಾಸ್ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ಇನ್ನೇನು ಸಮೀಪಿಸುತ್ತಿದೆ. ಮನೆಯ ಸ್ಪರ್ಧಿಗಳು ಫುಲ್ ಅಲರ್ಟ್ ಆಗಿ ಆಡುತ್ತಿದ್ದಾರೆ. ಕ್ಯಾಪ್ಟನ್ ಪಟ್ಟ ಕೂಡ ಬದಲಾವಣೆ ಆಗಿದ್ದು ಭವ್ಯಗೌಡ ಬಳಿಕ ರಜತ್ ಕ್ಯಾಪ್ಟನ್ ಆಗಿದ್ದಾರೆ. ಇಂದಿನ ಪ್ರೋಮೋ ರಿಲೀಸ್ ಆಗಿದ್ದು ಚೈತ್ರಾ ಹಾಗೂ ನಾಯಕ ರಜತ್ ಮಧ್ಯೆ ಸಖತ್ ಟಾಕ್​ ವಾರ್ ನಡೆದಿದೆ. ಮನೆಯ ಖಳನಾಯಕ ಆಗಿರುವ ರಜತ್, ಸ್ಪರ್ಧಿಗಳ ಕೊರಳಿಗೆ ಬೋರ್ಡ್ ಹಾಕಿದ್ದು ಇವರಲ್ಲಿ ಒಬ್ಬರು ಮನೆ ಖಾಲಿ ಮಾಡುವುದು ಗ್ಯಾರಂಟಿ ಆಗಿದೆ.

ಬಿಗ್​​ಬಾಸ್ ಕೊಟ್ಟಿರುವ ಟಾಸ್ಕ್​ನಲ್ಲಿ ರಜತ್ ಅವರು ಖಳನಾಯಕ ಆಗಿ ಆಡುತ್ತಿದ್ದಾರೆ. ಆದರೆ ಮನೆಯಲ್ಲಿ ರಜತ್, ಹನುಮಂತು ಹಾಗೂ ಚೈತ್ರಾ ಮಧ್ಯೆ ಮುನಿಸು ಮುಂದುವರೆದಂತೆ ಕಾಣುತ್ತಿದೆ. ಏಕೆಂದರೆ ರಜತ್ ಅವರು ಮನೆಗೆ ಬಂದ ಮೇಲೆ ಯಾವತ್ತೂ ಹನುಮಂತು, ಚೈತ್ರಾ ಪರವಾಗಿ ಮಾತನಾಡಿಲ್ಲ ಎಂದು ಹೇಳಬಹುದು. ಅದರಂತೆ ರಜತ್ ಪರವಾಗಿಯೂ ಈ ಇಬ್ಬರು ಒಳ್ಳೆಯ ಮನಸ್ಥಿತಿ ಹೊಂದಿಲ್ಲ. ಆರಂಭದಿಂದಲೂ ಇವರಲ್ಲಿ ಮುನಿಸು ಸ್ಫೋಟವಾಗುತ್ತಲೇ ಇದೆ.

ಇದನ್ನೂ ಓದಿ: BBK11; ಚೈತ್ರಾಗೆ ಸುಳ್ಳಿ.. ಸುಳ್ಳಿ.. ಸುಳ್ಳಿ ಎಂದು ಕರೆದು ಅವಮಾನ ಮಾಡಿದ ರಜತ್ ಕಿಶನ್, ಯಾಕೆ?

publive-image

ಫಿನಾಲೆಗೆ ತಲುಪಲು ಅರ್ಹತೆ ಇಲ್ಲದ ಐವರು ಸ್ಪರ್ಧಿಗಳಿಗೆ ಟಿಕೆಟ್ ಟು ಹೋಮ್ ಫಲಕ ಕೊರಳಿಗೆ ಹಾಕಬೇಕು ಎಂದು ಬಿಗ್​ಬಾಸ್ ಹೇಳಿದ್ದಾರೆ. ಇದಕ್ಕೆ ಹನುಮಂತು, ಚೈತ್ರಾ, ಗೌತಮಿ, ಭವ್ಯಗೌಡ ಹಾಗೂ ಮೋಕ್ಷಿತಾ ಅವರ ಕೊರಳಿಗೆ ರಜತ್ ಬೋರ್ಡ್ ಹಾಕಿದ್ದಾರೆ. ಅಂದರೆ ಈ ಐವರಲ್ಲಿ ಈ ವಾರ ಒಬ್ಬರು ಹೊರ ಬರುವುದು ಪಕ್ಕಾ ಆಗಿದೆ.

ಇದರ ಜೊತೆಗೆ 5 ಸ್ಪರ್ಧಿಗಳು ಫಿನಾಲೆಗೂ ಹೋಗುವುದಿಲ್ಲ ಎನ್ನುವುದು ಖಚಿತ ಎಂದು ಹೇಳಿದಂತೆ ಆಗಿದೆ. ಅಂದರೆ ಈ 5 ಸ್ಪರ್ಧಿಗಳಿಗೆ​ ಫಿನಾಲೆಗೆ ಹೋಗುವ ಅರ್ಹತೆ ಇಲ್ಲವೆಂದು ಮೊದಲೇ ಸೂಚನೆ ಕೊಟ್ಟಂತೆ ಆಗಿದೆ. ಅಲ್ಲದೇ ಮಂಜು, ತ್ರಿವಿಕ್ರಮ್, ರಜತ್ ಹಾಗೂ ಧನರಾಜ್ ಈ 4 ಸ್ಪರ್ಧಿಗಳು ಫೈನಲ್​ಗೆ ಟಿಕೆಟ್ ಪಡೆಯುತ್ತಾರೆ ಎಂದು ಈ ಟಾಸ್ಕ್​ ಮೂಲಕ ಗೊತ್ತಾಗುತ್ತದೆ.

ಇನ್ನು ಈ ವೇಳೆ ರಜತ್ ಹಾಗೂ ಚೈತ್ರಾ ಮಧ್ಯೆ ಮಾತಿನ ಸಮರ ನಡೆದಿದ್ದು ಎಲ್ಲರ ಗಮನ ಸೆಳೆದಿದೆ. ರಜತ್ ಹಾಗೂ ಚೈತ್ರಾ ಇಬ್ಬರು ಪರಸ್ಪರ ಬೈದಾಡಿಕೊಳ್ಳುವಾಗ ಉಳಿದ ಸ್ಪರ್ಧಿಗಳು ಕುಳಿತು ನಕ್ಕು ಎಂಜಾಯ್ ಮಾಡಿದ್ದಾರೆ. ಇವರ ಇಬ್ಬರ ಮಧ್ಯೆ ಯಾರು ಬಂದಿಲ್ಲ. ಒಂದಂತೂ ನಿಜ ಟಾಸ್ಕ್​ನಲ್ಲಿ ಮನೆಯ ಖಳನಾಯಕ ರಜತ್ ಅವರು ಫಲಕ ಹಾಕಿದವರಲ್ಲಿ ಒಂದು ವಿಕೆಟ್​ ಉರುಳುವುದು ಪಕ್ಕಾ ಆಗಿದೆ. ಆದರೆ ಮನೆಯಿಂದ ಹೊರ ಬರುವುದು ಯಾರು ಎಂಬುದು ಮಾತ್ರ ಈ ವಾರದ ಕುತೂಹಲವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment