BBK11; ಚೈತ್ರಾ ಮತ್ತೆ ಕಣ್ಣೀರು, ಮಂಜು ಮುಖಕ್ಕೆ ಟೀ ಚೆಲ್ಲಿದ ಗೌತಮಿ.. ಇವತ್ತು ಕಿಚ್ಚನ ಪಂಚಾಯತಿ ಏನಾಗುತ್ತೆ?

author-image
Bheemappa
Updated On
BBK11; ಚೈತ್ರಾ ಮತ್ತೆ ಕಣ್ಣೀರು, ಮಂಜು ಮುಖಕ್ಕೆ ಟೀ ಚೆಲ್ಲಿದ ಗೌತಮಿ.. ಇವತ್ತು ಕಿಚ್ಚನ ಪಂಚಾಯತಿ ಏನಾಗುತ್ತೆ?
Advertisment
  • ಬಿಗ್​ಬಾಸ್​ನಲ್ಲಿ ಈ ವಾರ ಡಬಲ್ ಎಲಿಮಿನೇಷನ್ ಇದೆಯಾ?
  • ಕೊನೆ ಹಂತಕ್ಕೆ ಬಂದು ತಲುಪಿರುವ ಶೋ, ಗೆಲ್ಲೋದು ಯಾರು?
  • ಈಗಾಗಲೇ ಮೂರು ತಿಂಗಳು ಮುಗಿಸಿರುವ ಬಿಗ್​​​ಬಾಸ್​ ಶೋ

ಕನ್ನಡದ ಬಿಗ್​​ಬಾಸ್​ ಸೀಸನ್​ 11ರ ಗ್ರ್ಯಾಂಡ್​ ಫಿನಾಲೆಗೆ ಇನ್ನೇನು ಕೆಲವು ದಿನಗಳು ಬಾಕಿ ಉಳಿದಿವೆ. ಮನೆ ಒಳಗೆ ಸ್ಪರ್ಧಿಗಳ ಮಧ್ಯೆ ಪೈಪೋಟಿ ಹೆಚ್ಚಿದ್ದು ಈ ವಾರ ಮನೆಯಿಂದ ಗೇಟ್ ಪಾಸ್​ ಯಾರಿಗೆ ಎಂಬುದು ಮಾತ್ರ ಕೂತುಹಲ ಮೂಡಿಸಿದೆ. ಡಬಲ್ ಎಲಿಮಿನೇಷನ್ ಇದೆ ಎನ್ನಲಾಗ್ತಿದೆ. ಆದರೆ ಇದು ಅನೌನ್ಸ್ ಆದಾಗಲೇ ಎಲ್ಲ ಗೊತ್ತಾಗುತ್ತೆ. ಸದ್ಯ ಬಿಡುಗಡೆಗೊಂಡ ಫ್ರೋಮೋದಲ್ಲಿ ಸ್ಪರ್ಧಿಗಳಿಗೆ ರೆಸಾರ್ಟ್​ ಗೇಮ್ ನೀಡಲಾಗಿದೆ.

ಸದ್ಯ​ ಮನೆಯಲ್ಲಿ 10 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಭವ್ಯಗೌಡ, ತ್ರಿವಿಕ್ರಮ್, ಮಂಜು, ಗೌತಮಿ, ಮೋಕ್ಷಿತಾ, ರಜತ್​, ಧನರಾಜ್​, ಚೈತ್ರಾ ಕುಂದಾಪುರ, ಹನುಮಂತ ಹಾಗೂ ಐಶ್ವರ್ಯಾ ಇದ್ದಾರೆ. ಇವರಲ್ಲಿ ಈ ವಾರ 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದು ಮನೆ ಖಾಲಿ ಮಾಡುವರು ಯಾರು ಎಂಬುದು ಇಂದು ಅಥವಾ ನಾಳೆ ಗೊತ್ತಾಗಲಿದೆ.

ಧನರಾಜ್, ಮೋಕ್ಷಿತಾ, ಚೈತ್ರಾ, ಗೌತಮಿ​, ತ್ರಿವಿಕ್ರಮ್​, ಹನುಮಂತು, ಮಂಜು ಇವರೆಲ್ಲಾ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಯಾರು ಔಟ್ ಆಗುತ್ತಾರೆ ಎನ್ನುವುದು ಮಾತ್ರ ಊಹೆ ಮಾಡಲಾಗುತ್ತಿಲ್ಲ. ಇದಕ್ಕಾಗಿ ಬಿಗ್​ಬಾಸ್​ ಶೋವನ್ನೇ ಇಂದು ಹಾಗೂ ನಾಳೆ ವೀಕ್ಷಣೆ ಮಾಡಲೇಬೇಕಾಗಿದೆ. ಕಿಚ್ಚ ಸುದೀಪ್ ಅವರು ಯಾರ ಆಟಕ್ಕೆ ಫುಲಿಸ್ಟಾಪ್ ಇಡುತ್ತಾರೆ ಎನ್ನುವುದು ಗೊತ್ತಾಗಲಿದೆ. ಒಂದು ವೇಳೆ ಇಬ್ಬರು ಮನೆಯಿಂದ ಹೋದರೇ 10 ಸ್ಪರ್ಧಿಗಳಲ್ಲಿ 8 ಜನರು ಮಾತ್ರ ಉಳಿದುಕೊಳ್ಳಲಿದ್ದಾರೆ.

publive-image

ಇದನ್ನೂ ಓದಿ:BBK11; ಯಾವ ಸ್ಪರ್ಧಿ ಆಟಕ್ಕೆ ಬೀಳುತ್ತೆ ಕಿಚ್ಚನ ಫುಲ್​ಸ್ಟಾಪ್.. ಮನೆಯಿಂದ ಹೊರ ಬರೋದು ಯಾರು?

ರೆಸಾರ್ಟ್​ ಗೇಮ್​ನಲ್ಲಿ ಯಾವ ಆರೋಪಕ್ಕೆ ಈ ರೀತಿ ನನ್ನನ್ನು ಮಾಡುತ್ತಿದ್ದಾರೆ ಎಂದು ಚೈತ್ರಾ ಕತ್ತಲಿನಲ್ಲಿ ಕಣ್ಣೀರು ಹಾಕಿದ್ದಾರೆ. ಮಂಜು ಹಾಗೂ ಚೈತ್ರಾ ನಡುವೆ ಏನೋ ಗಲಾಟೆ ನಡೆದಂತೆ ಕಾಣುತ್ತಿದೆ. ಆದರೆ ಏನಾಗಿದೆ ಎಂದು ಗೊತ್ತಿಲ್ಲ. ರಜತ್​ ಗೋಡೆಗೆ ಹೊಡೆದು ನೋಡ್​ ನಾನು ಏನ್ ಅಂತ ತೋರಿಸಿಲ್ಲ ಎಂದರೆ ಅಂತ ಹೇಳಿದ್ದಾರೆ. ತ್ರಿವಿಕ್ರಮ್​ ಕಾಲುಗಳನ್ನು ಚೈತ್ರಾ ತೊಳೆದಿದ್ದಾರೆ. ರಜತ್ ಹಾಗೂ ಇನ್ನೊಬ್ಬ ಸ್ಪರ್ಧಿ ಬಟ್ಟೆ ವಾಶ್ ಮಾಡಿರುವುದು ತೋರಿಸಲಾಗಿದೆ. ಧನ್​ರಾಜ್ ಬೆಡ್​ಶೀಟ್ ಎತ್ತಿ ಬಿಸಾಕಿ ಕೂಗಾಡಿದ್ದಾರೆ.

ರೆಸಾರ್ಟ್​ ಮ್ಯಾನೇಜರ್ ಆಗಿರುವ ಮೋಕ್ಷಿತಾ ಮೇಲೆ ಉಗ್ರಂ ಮಂಜು ಫುಲ್ ಗರಂ ಆಗಿದ್ದಾರೆ. ಎಚ್ಚೆತ್ತುಕೊಳ್ಳಿ ಎಂದು ಮಂಜು ಮುಖಕ್ಕೆ ಗೌತಮಿ ಟೀ ಚೆಲ್ಲಿರುವುದು ಆಶ್ಚರ್ಯ ಮೂಡಿಸಿದೆ. ಇಂದಿನ ಎಪಿಸೋಡ್​ನಲ್ಲಿ ಕಿಚ್ಚ ಸುದೀಪ್​ ಸ್ಪರ್ಧಿಯನ್ನು ಮೆನಯಿಂದ ಕಳಿಸ್ತಾರಾ ಅಥವಾ ನಾಳೆಗೆ ಮುಹೂರ್ತ ಇಡುತ್ತಾರಾ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment