/newsfirstlive-kannada/media/post_attachments/wp-content/uploads/2025/01/BHAVYA-3.jpg)
ಬಿಗ್​ಬಾಸ್​ನಲ್ಲಿ ರೋಚಕ ಟಾಸ್ಕ್​ಗಳು ಆರಂಭವಾಗಿವೆ. ಗೆಲ್ಲಲು ಎಲ್ಲರೂ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಈ ರೀತಿ ಆಡುವಾಗ ಸ್ಪರ್ಧಿಗಳು ಆಟದ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರಾ ಎನ್ನುವ ಅನುಮಾನಗಳು ಕಾಡಲಾರಂಭಿಸಿವೆ. ಇದಕ್ಕೆಲ್ಲಾ ವಾರದ ಕೊನೆಯಲ್ಲಿ ಕಿಚ್ಚ ಸುದೀಪ್ ಅವರು ಬಿಗ್ ಟಚ್ ಕೊಡಲಿದ್ದಾರೆ. ಅಲ್ಲಿವರೆಗೆ ಸ್ಪರ್ಧಿಗಳು ಆಟ ಹೇಗೆ ಆಡಿದ್ದಾರೆ ಎಂಬುದು ಯಾರಿಗೂ ಗೊತ್ತಗಲ್ಲ.
ಸರಣಿ ಟಾಸ್ಕ್​ಗಳು ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿದ್ದು ಕ್ಯಾಪ್ಟನ್ ರಜತ್ ಅವರು ತಾವು ಗೆಲ್ಲುವುದರ ಜೊತೆಗೆ ಸ್ಪರ್ಧಿಗಳ ಜೊತೆ ಎಚ್ಚರಿಕೆಯಿಂದ ಆಡಬೇಕಿದೆ. ನಿಯಮಗಳನ್ನು ಮೀರಿದಾಗ ರಜತ್ ಎಲ್ಲಿ, ಹೇಗೆ, ಯಾಕೆ ತಪ್ಪಾಗಿದೆ ಎಂದು ಹೇಳಬೇಕು. ಆದರೆ ಈ ರೀತಿ ಹೇಳಲು ರಜತ್ ಮುಂದಾದಗ ಸ್ಪರ್ಧಿಗಳು ಯಾರೂ ಮಾತು ಕೇಳುತ್ತಿಲ್ಲ. ಹೀಗಾಗಿ ರಜತ್ ನಾಯಕನಾದರೂ ಕೆಲ ಸನ್ನಿವೇಶಗಳಲ್ಲಿ ಸುಮ್ಮನೇ ಇರಬೇಕಾಗಿದೆ.
/newsfirstlive-kannada/media/post_attachments/wp-content/uploads/2025/01/RAJATH_MANJU.jpg)
ಬಿಗ್ ಬಾಸ್ ಇಂದಿನ ಟಾಸ್ಕ್​ನಲ್ಲಿ ಒಂದು ಸಂಖ್ಯೆಯನ್ನು ಸೂಚಿಸುತ್ತಾರೆ. ಆ ಸಂಖ್ಯೆಗೆ ಮೀಸಲಿರುವ ಚೆಂಡುಗಳನ್ನು ತೆಗೆದುಕೊಂಡು ಸ್ಪರ್ಧಿಗಳು ತಮ್ಮ ಟೀಮ್​ನ ಬಾಸ್ಕೆಟ್​ನಲ್ಲಿ ಹಾಕಬೇಕಾಗಿದೆ. ಒಂದು ತಂಡದಲ್ಲಿ ಮೂವರು ಎನ್ನುವಂತೆ 2 ಟೀಮ್​ಗಳನ್ನು ರೆಡಿ ಮಾಡಿದ್ದು ಅವರ ಕಾಲಿಗೆ ಹಗ್ಗಗಳನ್ನು ಕಟ್ಟಲಾಗಿದೆ. ಈ ಗೇಮ್ ಆಡುವಾಗ ಭವ್ಯ ಅವರನ್ನು ಮಂಜು ತಳ್ಳಿದ್ದು ಇದಕ್ಕೆ ಭವ್ಯ ಕೋಪಗೊಂಡಿದ್ದಾರೆ. ಮೂಗಿಗೆ ಭವ್ಯ ಹೊಡೆದಿರುವುದನ್ನ ಮಂಜು ಪ್ರಶ್ನೆ ಮಾಡಿದ್ದಕ್ಕೆ ಬೇರೆಯವರಿಗೆ ಹೇಳುವುದಕ್ಕೂ ಮುಂಚೆ, ನೀವು ಮೊದಲು ಕರೆಕ್ಟ್ ಆಗಿ ಆಟ ಆಡಿ ಎಂದು ಗಟ್ಟಿ ಧ್ವನಿಯಲ್ಲೇ ಭವ್ಯ ಹೇಳಿದ್ದಾರೆ. ಇದಕ್ಕೆ ಮಂಜು ನನಗೆ ಜ್ಞಾನ ಇದೆ ರಜತ್ ಎಂದಿದ್ದಾರೆ.
ಮಂಜು ಎಲ್ಲರನ್ನು ಓವರ್​​ ಟೇಕ್ ಮಾಡಿ ಚೆಂಡುಗಳನ್ನು ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಆದರೆ ಈ ವೇಳೆ ಕ್ಯಾಪ್ಟನ್ ರಜತ್ ನೀನು ಆಡುತ್ತಿರುವುದು ತಪ್ಪು ಎಂದು ಹೇಳಿದ್ದಾರೆ. ಎಲ್ಲ ಸ್ಪರ್ಧಿಗಳು ಚೆಂಡಿಗಾಗಿ ಒಬ್ಬರ ಮೇಲೆ ಒಬ್ಬರು ಬಿದ್ದು ಟಾಸ್ಕ್​ ಪೂರ್ಣಗೊಳಿಸಲು ಹರಸಾಹಸ ಪಡುತ್ತಿದ್ದಾರೆ. ಆದರೆ ಈ ಟಾಸ್ಕ್​ನಲ್ಲಿ ಚೆನ್ನಾಗಿ ಆಡಿದವರಿಗೆ ಫೈನಲ್​ ಟಿಕೆಟ್ ಕನ್​ಫರ್ಮ್ ಆಗಲಿದೆ. ಹೀಗಾಗಿ ಎಲ್ಲರೂ ಸಂಬಂಧಗಳನ್ನ ಪಕ್ಕಕ್ಕಿಟ್ಟು ಗೆಲುವು ಒಂದನ್ನೇ ಮುಂದೆ ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us