/newsfirstlive-kannada/media/post_attachments/wp-content/uploads/2024/12/BBK_TRIVIKRAM_MOTHER.jpg)
ಬಿಗ್​ಬಾಸ್ ಶೋ ಯಶಸ್ವಿಯಾಗಿ ಸಾಗುತ್ತಿದ್ದು ಮನೆಯಲ್ಲಿ ಹೊಸ ವರ್ಷದ ವಾತಾವರಣ ಮೂಡಿದೆ. ಎಲ್ಲರ ಮುಖದಲ್ಲಿ ಖುಷಿ ಮೂಡಿದ್ದು ಟಾಸ್ಕ್​ ನೀಡಲಾಗಿದೆ. ಸ್ಪರ್ಧಿಗಳಿಗೆ ಈ ಟಾಸ್ಕ್​ಗಳೇ ಮುಖ್ಯವಾಗಿರುತ್ತವೆ. ಏಕೆಂದರೆ ಮನೆಯಲ್ಲಿ ಏನನ್ನಾದರೂ ಪಡೆಯಬೇಕು ಎಂದರೆ ಕೊಟ್ಟಿರುವ ಟಾಸ್ಕ್​ ಪೂರ್ಣಗೊಳಿಸಲೇಬೇಕು. ಇದೇ ರೀತಿ ನಿಗಧಿತ ಸಮಯದಲ್ಲಿ ಟಾಸ್ಕ್​ ಪೂರ್ಣಗೊಳಿಸಿದ್ದೇ ತಡ ಇಬ್ಬರು ಸ್ಪರ್ಧಿಗಳ ತಾಯಂದಿರು ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಮನೆಯಲ್ಲಿ ಬಿಗ್​ಬಾಸ್​ ವಿಶೇಷ ಟಾಸ್ಕ್ ಅನ್ನು ನೀಡಿದ್ದರು. ಈ ಟಾಸ್ಕ್ ಅನ್ನು 10 ನಿಮಿಷದಲ್ಲಿ ಪೂರ್ಣಗೊಳಿಸಿದ್ರೆ ಅಮ್ಮನನ್ನು ಭೇಟಿ ಮಾಡಬಹುದು ಎಂದು ಬಿಗ್ ಬಾಸ್ ಹೇಳಿದ್ದರು. ಅದರಂತೆ ಮನೆಯಲ್ಲಿ ತ್ರಿವಿಕ್ರಮ್ ಅವರು, ಪಜಲ್ (ಒಂದು ಚಿತ್ರವನ್ನು ಜೋಡಿಸುವುದು) ಅನ್ನು ಫುಲ್ ಟೆನ್ಷನ್​​ನಲ್ಲಿ ಬೇಗ ಬೇಗ ಪೂರ್ಣಗೊಳಿಸಿದರು. ಟಾಸ್ಕ್ ಮುಗಿದಿದ್ದೆ ತಡ ಮೇನ್ ಡೋರ್ ಓಪನ್ ಆಗಿದೆ. ಮುಖ್ಯ ಬಾಗಿಲಿನಿಂದ ತ್ರಿವಿಕ್ರಮ್​ ಅವರ ತಾಯಿ ಮನೆಯೊಳಗೆ ಬಂದಿದ್ದಾರೆ.
/newsfirstlive-kannada/media/post_attachments/wp-content/uploads/2024/12/BBK_TRIVIKRAM.jpg)
ಇದನ್ನೂ ಓದಿ: BIGG BOSS; ಉಗ್ರಂ ಮಂಜು- ತ್ರಿವಿಕ್ರಮ್​ ನಡುವೆ ಬಿರುಸಿನ ಮಾತುಕತೆ.. ಟಾಸ್ಕ್ ಕೈ ಚೆಲ್ಲಿದ್ರಾ ಸ್ಪರ್ಧಿಗಳು?
ಈ ವೇಳೆ ತ್ರಿವಿಕ್ರಮ್ ಅವರ ತಾಯಿಯ ಆಶೀರ್ವಾದವನ್ನು ಎಲ್ಲ ಸ್ಪರ್ಧಿಗಳು ಪಡೆದರು. ಭವ್ಯ, ತ್ರಿವಿಕ್ರಮ್ ಅವರ ತಾಯಿಯನ್ನು ತಬ್ಬಿಕೊಂಡು ಸಂತಸ ಪಟ್ಟರು. ಬಳಿಕ ಸೋಫಾ ಮೇಲೆ ಕುಳಿತು ಇಬ್ಬರು ಮಾತನಾಡುವಾಗ, ನನ್ನ ಮಗನ ತಾಯಿಯಾಗಿ, ಫ್ರೆಂಡ್ ಆಗಿ ಎಲ್ಲ ತರದಲ್ಲೂ ಇಬ್ಬರು ಚೆನ್ನಾಗಿದ್ದೀರಿ. ರಾಧಕೃಷ್ಣನ ಥರ ಇದೀರಿ ಎಂದು ತ್ರಿವಿಕ್ರಮ್ ತಾಯಿ, ಭವ್ಯಗೆ ಹೇಳಿದ್ದಾರೆ. ಇದರಿಂದ ಭವ್ಯ ಸಖತ್ ಖುಷಿ ಖುಷಿಯಾಗಿ ನಕ್ಕಿದ್ದಾರೆ.
ಇನ್ನು ಅಮ್ಮ ಮನೆಯಿಂದ ಹೊರ ಹೋಗುವಾಗ ತ್ರಿವಿಕ್ರಮ್ ಅವರು ಇನ್ನು 10 ನಿಮಿಷ ಅನುಮತಿ ಕೊಡುವಂತೆ ಮನವಿ ಮಾಡಿದರು. ಆದರೆ ಇದಕ್ಕೆ ಬಿಗ್ ಬಾಸ್ ಅನುಮತಿಸದೇ ಇದ್ದಿದ್ದರಿಂದ ತಾಯಿ ಮನೆಯಿಂದ ಹೊರ ಹೋಗುತ್ತಿದ್ದರು. ಆಗ ತ್ರಿವಿಕ್ರಮ್​ ಕಣ್ಣೀರು ಹಾಕಿದ್ದಾರೆ. ಇದು ಅಲ್ಲದೇ ಬಿಗ್ ಬಾಸ್​ ಮನೆಗೆ ಭವ್ಯ ಅವರ ತಾಯಿ ಕೂಡ ಬಂದಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us