BBK11: ಕೊನೆಗೂ 5 ಕೋಟಿ ಕನ್ನಡಿಗರ ಹೃದಯ ಗೆದ್ದ ಹನುಮಂತ; ಬಿಗ್​ಬಾಸ್ ಸೀಸನ್ 11 ವಿನ್ನರ್ ಘೋಷಣೆ

author-image
Veena Gangani
Updated On
BBK11: ಕೊನೆಗೂ 5 ಕೋಟಿ ಕನ್ನಡಿಗರ ಹೃದಯ ಗೆದ್ದ ಹನುಮಂತ; ಬಿಗ್​ಬಾಸ್ ಸೀಸನ್ 11 ವಿನ್ನರ್ ಘೋಷಣೆ
Advertisment
  • ಕನ್ನಡದ ಬಿಗ್​ಬಾಸ್​ ಸೀಸನ್​ 11ರ ವಿನ್ನರ್​ ಪಟ್ಟ ಈ ಸ್ಪರ್ಧಿಗೆ
  • ಕೊನೆಯ ಕ್ಷಣದಲ್ಲಿ ವಿನ್ನರ್ ಯಾರೆಂದು ಕೂಗಿದ ಕಿಚ್ಚ ಸುದೀಪ್​
  • ಒಂದು ಕಡೆ ತ್ರಿವಿಕ್ರಮ್ ಮತ್ತೊಂದು ಕಡೆ ಹನುಮ ಇವರೇ ವಿನ್ನರ್!

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11ರ ವಿನ್ನರ್ ಯಾರಾಗಾಲಿದ್ದಾರೆ ಎಂದು ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈ ಬಾರಿಯ ಬಿಗ್​ಬಾಸ್​ ಸೀಸನ್ 11ರ ಟಾಪ್​ 5 ಸ್ಥಾನದಲ್ಲಿ ಮೋಕ್ಷಿತಾ, ತ್ರಿವಿಕ್ರಮ್​, ರಜತ್​, ಹನುಮಂತ ಹಾಗೂ ಉಗ್ರಂ ಮಂಜು ಇದ್ದರು. ಈ ಟಾಪ್​ 5 ಫೈನಲಿಸ್ಟ್​ಗಳ ಪೈಕಿ ಹಳ್ಳಿ ಹೈದ, ಗಾಯಕ ಹನುಮಂತ ಬಿಗ್​ಬಾಸ್​ ಸೀಸನ್​ 11ರ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ.

ಇದನ್ನೂ ಓದಿ: BBK11: ಬಿಗ್ ಬಾಸ್‌ ಕಟ್ಟ ಕಡೆಯ ಶೋ.. ಗ್ರ್ಯಾಂಡ್‌ ಫಿನಾಲೆಗೂ ಮುನ್ನ ಕಿಚ್ಚ ಸುದೀಪ್ ಭಾವುಕ! VIDEO

publive-image

ಹೌದು, ಈ ಬಾರಿಯ ಬಿಗ್​ಬಾಸ್ ಸೀಸನ್ 11ರ ವಿನ್ನರ್ ಯಾರಾಗಲಿದ್ದಾರೆ ಎಂದು ಎಲ್ಲರಲ್ಲೂ ಕುತೂಹಲ ಹೆಚ್ಚಾಗಿತ್ತು. ಅದರಲ್ಲೂ ಸೋಷಿಯಲ್​ ಮೀಡಿಯಾದಲ್ಲಿ ಕೆಲವೊಂದು ಹೆಸರುಗಳು ಹರಿದಾಡುತ್ತಿದ್ದವು. ಇದೀಗ ಅದೆಲ್ಲಾ ಊಹಾಪೋಹಗಳಿಗೆ ಇದೀಗ ಬ್ರೇಕ್ ಬಿದ್ದಿದೆ. 119ನೇ ದಿನಗಳ ಕಾಲ ಬಿಗ್​ಬಾಸ್​ ಮನೆಯಲ್ಲಿ ಉಳಿದುಕೊಂಡಿದ್ದ ಹನುಮಂತನಿಗೆ ಈ ಬಾರಿ ವಿನ್ನರ್ ಪಟ್ಟ ಸಿಕ್ಕಿದೆ.

publive-image

ಕೊನೆಯ ಕ್ಷಣದಲ್ಲಿ ಬಿಗ್​ಬಾಸ್​ ಮನೆಯಲ್ಲಿ ರಜತ್​, ತ್ರಿವಿಕ್ರಮ್​ ಹಾಗೂ ಹನುಮಂತ ಉಳಿದುಕೊಂಡಿದ್ದರು. ಆಗ ಬಿಗ್​ಬಾಸ್​ ಮನೆಗೆ ಒಳಗಡೆ ಹೋಗಿದ್ದ ಕಿಚ್ಚ ಸುದೀಪ್​ ಅವರು ಈ ಮೂವರನ್ನು ವೇದಿಕೆಗೆ ಕರೆದುಕೊಂಡು ಬಂದಿದ್ದಾರೆ. ಇದಾದ ಬಳಿಕ ರಜತ್ 2ನೇ ರನ್ನರ್​ ಅಪ್​ ಆಗಿ ಎಲಿಮಿನೇಟ್​ ಆದ್ರು. ನಂತರ ಕಿಚ್ಚ ಸುದೀಪ್​ ಈ ಇಬ್ಬರ ಕೈಗಳನ್ನು ಹಿಡಿದುಕೊಂಡು ನಿಂತಿದ್ದರು. ಆಗ ಒಂದು ಕಡೆ ತ್ರಿವಿಕ್ರಮ್​ ಇದ್ದರೆ, ಮತ್ತೊಂದು ಕಡೆ ಹನುಮಂತ ನಿಂತುಕೊಂಡಿದ್ದರು. ಆಗ ಈ ಬಾರಿಯ ಬಿಗ್​ಬಾಸ್​ ಸೀಸನ್ 11ರ ವಿನ್ನರ್ ಆಗಿರೋ ಹನುಮಂತನ​ ಕೈಯನ್ನು ಮೇಲಕ್ಕೆ ಘೋಷಣೆ ಮಾಡಿದ್ದಾರೆ.

publive-image

ವೈಲ್ಡ್​ ಕಾರ್ಡ್​ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದ ಹನುಮ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಶುರುವಾಗಿ 4ನೇ ವಾರಕ್ಕೆ ಎಂಟ್ರಿ ಕೊಟ್ಟಿದ್ದರು ಹನುಮಂತ. ಎಂಟ್ರಿ ಕೊಟ್ಟ ಮೊದಲ ದಿನದಿಂದಲೇ ಒಂದು ಹವಾ ಕ್ರಿಯೇಟ್ ಮಾಡಿದ್ದರು. ಹೊಸ.. ಹೊಸ ಹಾಡುಗಳನ್ನು ಹಾಡುವ ಮೂಲಕ ಬಿಗ್​ಬಾಸ್​ ಮನೆಗೆ ಮತ್ತಷ್ಟು ಮೆರಗು ತಂದುಕೊಟ್ಟರು. ಇನ್ನೂ, ಟಿಕೆಟ್​ ಟು ಫಿನಾಲೆ ವಾರಕ್ಕೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಸದ್ಯ ಇದೀಗ ಬಿಗ್​ಬಾಸ್​ ಸೀಸನ್ 11ರ ವಿನ್ನರ್​ ಆಗಿ ಹೊರ ಹೊಮ್ಮಿದ್ದಾರೆ ಹನುಮಂತ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment