/newsfirstlive-kannada/media/post_attachments/wp-content/uploads/2023/11/brundavana-3.jpg)
ಕಿರುತೆರೆಯಲ್ಲಿ ಬೃಂದಾವನ ಸೀರಿಯಲ್ ತನ್ನದೆಯಾದ ಅಭಿಮಾನಿ ಬಳಗವನ್ನ ಹೊಂದಿದೆ. ವೀಕ್ಷಕರು ಈ ಕೂಡು ಕುಟುಂಬವನ್ನು ಒಳ್ಳೆ ರೀತಿಯಲ್ಲಿ ಸ್ವೀಕರಿಸಿದ್ದಾರೆ. 36 ಜನರ ತುಂಬು ಕುಟುಂಬದ ಸ್ಟೋರಿಯ ಹೊಸ ರೀತಿಯಲ್ಲಿ ತೋರಿಸವ ಪ್ರಯತ್ನದಲ್ಲಿತ್ತು ಬೃಂದಾವನ. ಮೈಸೂರಿನ ಹಲವು ಲೋಕೇಶನ್​ನಲ್ಲಿ ಪ್ರೊಮೋಗಳನ್ನ ಶೂಟ್​ ಮಾಡಿ ಸಖತ್​ ಸದ್ದು ಮಾಡಿತ್ತು. ನೆಗೆಟಿವ್​ ಪಾತ್ರನೇ ಇಲ್ಲದ ಸಂಸಾರದ ಸ್ಟೋರಿ ಪಿಕ್​ ಅಪ್​ ಆಗಲೇ ಇಲ್ಲ.
ಹೌದು, ಹಲವು ಸೂಪರ್​ ಹಿಟ್​ ಧಾರಾವಾಹಿಗಳನ್ನು ಕೊಡುಗೆ ನೀಡಿದ್ದ ನಿರ್ಮಾಪಕ ರಾಮ್​ಜಿ ಅವರ ಗರಡಿಯ ಬೃಂದಾವನ 5 ತಿಂಗಳ ಹಿಂದೆಯಷ್ಟೇ ಲಾಂಚ್​ ಆಗಿತ್ತು. ಸದ್ಯ ಮುಕ್ತಾಯವಾಗ್ತಿದೆ. ಈ ತಿಂಗಳು ಕೊನೆಯವರೆಗೂ ಮಾತ್ರ ಬೃಂದಾವನ ಪ್ರಸಾರವಾಗಲಿದೆ. ಕೆಲವೇ ದಿನಗಳಲ್ಲಿ ಧಾರಾವಾಹಿ ಅಂತಿಮ ಘಟ್ಟಕ್ಕೆ ಬರಲಿದೆ. ಇನ್ನೂ, ಇಷ್ಟು ಕಡಿಮೆ ಅವಧಿಯಲ್ಲಿ ಧಾರಾವಾಹಿಯ ಅಂತ್ಯವಾಗ್ತಿರೋದರಲ್ಲಿ ಹಲವು ಕಾರಣಗಳು ಅಡಗಿವೆ.
ಧಾರಾವಾಹಿಯ ಅನೌನ್ಸ್​ ಟೈಮ್​ನಲ್ಲೇ ಎಡವಿತ್ತು ತಂಡ. ನಾಯಕನ ಆಯ್ಕೆ ವಿಷದಲ್ಲೇ ವೀಕ್ಷಕರು ನಿರಸ ಪ್ರತಿಕ್ರಿಯೆ ನೀಡಿದ್ರು. ಮೊದಲು ಬಿಗ್​ಬಾಸ್​ ಖ್ಯಾತಿಯ ವಿಶ್ವನಾಥ್​ ಹಾವೇರಿಯವರನ್ನ ಆಯ್ಕೆ ಮಾಡಿತ್ತು. ಅದ್ಧೂರಿಯಾಗಿ ಲಾಂಚ್​ ಕೂಡ ಆಯ್ತು. ಆದ್ರೇ ನಾಯಕಿ ಅಮೂಲ್ಯಗೆ ವಿಶ್ವ ತಮ್ಮನ ರೀತಿ ಕಾಣ್ತಾನೆ. ಮೊದಲು ನಾಯಕನನ್ನ ಬದಲಾವಣೆ ಮಾಡಿ ಅಂತಾ ಕೂಗು ಕೇಳಿ ಬಂದಿತ್ತು. ಈ ವಿಷಯವನ್ನ ಪರಿಗಣಿಸಿ ರಾತ್ರೋ ರಾತ್ರಿ ಬೃಂದಾವನಕ್ಕೆ ಸೋಷಿಯಲ್​ ಮೀಡಿಯಾದಲ್ಲಿ ಫೇಮಸ್​ ಆಗಿದ್ದ ವರುಣ್​ ಗೌಡ ಅವರನ್ನು ಕರೆತರಲಾಯ್ತು. ಇದಕ್ಕೂ ಪರ ವಿರೋಧದ ಮಾತುಗಳ ಕೇಳಿ ಬಂದಿದ್ದವು.
ಇಷ್ಟೇಲ್ಲ ನಡಿತಿರ್ಬೇಕಾದ್ರೆ ತುಂಬು ಕುಟುಂಬ ಅಂತಾ ಅನೌನ್ಸ್ ಮಾಡಿದ್ದ ತಂಡ ತೆರೆಮೇಲೆ ತೋರಿಸುದ್ದು ಕೇವಲ ಕೆಲವೇ ಕೆಲವು ಜನರನ್ನ ಮಾತ್ರ. ಪ್ರೊಮೋದಲ್ಲಿ ಕಾಣಿಸಿದ್ದ 36 ಜನ ಧಾರಾವಾಹಿ ಶುರುವಾದಾಗ ಇರಲೇ ಇಲ್ಲ. ಇದು ಕೂಡ ವೀಕ್ಷಕರ ಬೇಸರಕ್ಕೆ ಕಾರಣ ಆಗಿತ್ತು. ಇದು ಟಿಆರ್​ಪಿ ಮೇಲೆ ಹೊಡೆತ ಬಿಳೋದಕ್ಕೆ ಕಾರಣ ಆಯ್ತು. ಆರಂಭದಿಂದಲ್ಲೂ ಒಂದಲ್ಲ ಒಂದು ಕಾರಣಕ್ಕೆ ಸುದ್ದಿ ಮಾಡ್ತಿದ್ದ ಬೃಂದಾವನ ಸ್ಟೋರಿ ಕೊನೆಗೊಳ್ತಿದೆ. ಮೂಲಗಳ ಪ್ರಕಾರ ಈ ತಿಂಗಳು ಮಾತ್ರ ಪ್ರಸಾರವಾಗಲಿದೆ. ಅಂದ್ಹಾಗೆ, ಈ ಸೀರಿಯಲ್​ ಮುಗಿದ ನಂತರ ಯಾವ ಸೀರಿಯಲ್ ಲಾಂಚ್ ಆಗಲಿದೆ ಎಂಬ ಪ್ರಶ್ನೆ ಮೂಡೋದು ಸಹಜ. ಈಗಾಗಲೇ ನಿನಗಾಗಿ ಸೀರಿಯಲ್​ನ ತೆರೆಗೆ ತರೋದಕ್ಕೆ ಸಕಲ ತಯಾರಿ ನಡೆಸಲಾಗುತ್ತಿದೆ. ಅದೇ ಧಾರಾವಾಹಿ ಈ ಬೃಂದಾವನ ಸ್ಲಾಟ್​ಗೆ ಬರೋ ಚಾನ್ಸ್ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ