/newsfirstlive-kannada/media/post_attachments/wp-content/uploads/2024/08/varahamahalaxmi.jpg)
ಆಗಸ್ಟ್​ 16.. ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬವನ್ನ ಬಹಳ ಸಂಭ್ರಮದಿಂದ ನಡೆದಿದೆ. ಪ್ರತಿ ತಾರೆಯರು ತಮ್ಮ ತಮ್ಮ ಮನೆಗಳಲ್ಲಿ ಬಹಳ ಅದ್ಧೂರಿಯಾಗಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಣೆ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/08/radika-pandith.jpg)
ರಾಜ್ಯದಾದ್ಯಂತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಕೈಂಕಾರ್ಯಗಳು ನಡೆಯುತ್ತಿವೆ. ಅಲ್ಲದೇ ಜನಸಾಮಾನ್ಯರು ಮನೆಯಲ್ಲಿ ಲಕ್ಷ್ಮೀ ಪೂಜೆಗೆ ಸಕಲ ಸಿದ್ಧತೆ ನಡೆಸುತ್ತಿದ್ದಾರೆ. ಜೊತೆಗೆ ಸ್ಯಾಂಡಲ್​ವುಡ್​ ತಾರೆಯರ ಮನೆಯಲ್ಲೂ ಕೂಡ ವರಮಹಾಲಕ್ಷ್ಮಿ ಹಬ್ಬವನ್ನ ಆಚರಣೆ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/08/upendra.jpg)
ಸ್ಯಾಂಡಲ್​ವುಡ್​ನ ಬ್ಯೂಟಿಫುಲ್ ನಟಿ ರಾಧಿಕಾ ಪಂಡಿತ್, ನಟಿ ಪ್ರಿಯಾಂಕಾ ಉಪೇಂದ್ರ, ನಟ ಶರಣ್, ನಟಿ ಶ್ರುತಿ, ನಟ ಲೂಸ್ ಮಾದ ಯೋಗಿ, ನಟಿ ರಾಧಿಕಾ ಕುಮಾರಸ್ಟಾಮಿ, ನಟಿ ಶ್ವೇತಾ ಶ್ರೀವಾತ್ಸವ್, ನಟಿ ಮಾಲಾಶ್ರೀ ಹೊಸದಾಗ ಮದುವೆಯಾದ ನಟಿ ಸೋನಾಲ್ ಮಂತೋರೆ ನಿವಾಸದಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಜೋರಾಗಿತ್ತು.
/newsfirstlive-kannada/media/post_attachments/wp-content/uploads/2024/08/deepika-das.jpg)
ಹೌದು, ವರವ ಕೊಡುವ ಮಹಾಲಕ್ಷ್ಮೀಯನ್ನ ಭಕ್ತರು ಆರಾಧಿಸುತ್ತಿದ್ದಾರೆ. ಎಲ್ಲೆಲ್ಲೂ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಜೋರಾಗಿತ್ತು. ಕನ್ನಡ ಸಿನಿ ತಾರೆಯರ ಮನೆಗಳಲ್ಲೂ ವರಮಹಾಲಕ್ಷ್ಮಿ ಹಬ್ಬವನ್ನ ಸಡಗರದಿಂದ ಆಚರಿಸಲಾಗಿದೆ. ಯಶ್​ ನಟಿ ರಾಧಿಕಾ ಪಂಡಿತ್ ದಂಪತಿ, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಪ್ರಿಯಾಂಕಾ ದಂಪತಿ, ನಟಿ ಅದಿತಿ ಪ್ರಭುದೇವ ದಂಪತಿ ಸೇರಿದಂತೆ ಸಾಕಷ್ಟು ಸ್ಟಾರ್​ಗಳ ಮನೆಯಲ್ಲಿ ವರಮಹಾಲಕ್ಷ್ಮಿ ದೇವಿಯನ್ನ ಕೂರಿಸಿ ವಿಶೇಷ ಪೂಜೆ ನೆರವೇರಿಸಲಾಗಿದೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಮತ್ತೊಂದು ಅನಾಚಾರ.. ಬಾಲ್ಯ ವಿವಾಹ ದಿಢೀರ್ ಹೆಚ್ಚಳ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
/newsfirstlive-kannada/media/post_attachments/wp-content/uploads/2024/08/sonal8.jpg)
ವಿಶೇಷ ಎಂದರೆ ಇತ್ತೀಚೆಗೆ ಸ್ಟಾರ್ ಡೈರೆಕ್ಟರ್​​ ತರುಣ್ ಸುಧೀರ್ ಜೊತೆ ಮದುವೆಯಾಗಿದ್ದ ನಟಿ ಸೋನಲ್ ಮೊಂತೆರೊ ಅವರು ಕೂಡ ವರಮಹಾಲಕ್ಷ್ಮಿ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಇನ್ನು, ಕಿರುತೆರೆ ನಟ ಹಾಗೂ ನಟಿಯರ ಮನೆಯಲ್ಲೂ ವರಮಹಾಲಕ್ಷ್ಮಿ ದೇವಿಯನ್ನ ಕೂರಿಸಿ ವಿಶೇಷ ಪೂಜೆ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/08/mokshitha.jpg)
ಪಾರು ಸೀರಿಯಲ್​ ಖ್ಯಾತಿಯ ಮೋಕ್ಷಿತಾ ಪೈ, ನಾಗಿಣಿ ಸೀರಿಯಲ್​ ಹಾಗೂ ಬಿಗ್​ಬಾಸ್​ ಬೆಡಗಿ ನಮ್ರತಾ ಗೌಡ, ನಟಿ ದೀಪಿಕಾ ದಾಸ್​ ಸೇರಿದಂತೆ ಸಾಕಷ್ಟು ಸ್ಟಾರ್​ಗಳ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಣೆ ಮಾಡಲಾಗಿದೆ. ಸದ್ಯ ವರಮಹಾಲಕ್ಷ್ಮಿ ಹಬ್ಬದ ಖುಷಿಯಲ್ಲಿದ್ದ ತಾರೆಯರು ಬ್ಯೂಟಿಫುಲ್​ ಫೋಟೋಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಸ್ಟಾರ್​ ನಟ ನಟಿಯರು ಆಚರಿಸಿದ ವರಮಹಾಲಕ್ಷ್ಮಿ ಹಬ್ಬಕ್ಕೆ ಅಭಿಮಾನಿಗಳು ಕೂಡ ವಿಶ್​ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us