ಕಹಿ ಘಟನೆ ನೆನೆದು ಕಣ್ಣೀರಿಟ್ಟ ನಟಿ ಬೇಬಿ ಇಂದಿರಾ; ಆ ದಿನಗಳ ಬಗ್ಗೆ ಹೇಳಿದ್ದೇನು?

author-image
Veena Gangani
Updated On
ಕಹಿ ಘಟನೆ ನೆನೆದು ಕಣ್ಣೀರಿಟ್ಟ ನಟಿ ಬೇಬಿ ಇಂದಿರಾ; ಆ ದಿನಗಳ ಬಗ್ಗೆ ಹೇಳಿದ್ದೇನು?
Advertisment
  • ಪತಿ ನಿಧನರಾದ ನಂತರ ಬಹಳ ಆರ್ಥಿಕ ಸಮಸ್ಯೆ ಎದುರಿಸಿದೆ ಎಂದು ಭಾವುಕರಾದ ನಟಿ
  • ಸಿನಿಮಾಗಳಿಂದ ದೂರವಾದ ಬಳಿಕ ತಮಿಳು ಬಾಲ ನಟನ ಜತೆ ಬೇಬಿ ಇಂದಿರಾ ಮದುವೆ
  • ಪುಟಾಣಿ ಏಜೆಂಟ್ 123, ಮಕ್ಕಳ ಭಾಗ್ಯ, ಸಿಂಹದ ಮರಿ ಸೈನ್ಯ ನಟಿ ಬೇಬಿ ಇಂದಿರಾ ನಟನೆ

ಬೇಬಿ ಇಂದಿರಾ ಯಾರಿಗೇ ತಾನೇ ಗೊತ್ತಿಲ್ಲ ಹೇಳಿ. ಬಾಲ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದರು ಬೇಬಿ ಇಂದಿರಾ. ಇದೀಗ ಬೇಬಿ ಇಂದಿರಾ ಅವರು ಬರೋಬ್ಬರಿ 35 ವರ್ಷಗಳ ಬಳಿಕ ಮತ್ತೆ ಜನರ ಎದುರು ಕಾಣಿಸಿಕೊಂಡಿದ್ದಾರೆ.  ಹೌದು, ಚಿನ್ನಾ ನಿನ್ನ ಮುದ್ದಾಡುವೆ, ಮಕ್ಕಳ ಭಾಗ್ಯ, ಸಿಂಹದ ಮರಿ ಸೈನ್ಯ, ರಾಮ ಲಕ್ಷ್ಮಣ, ಪುಟಾಣಿ ಏಜೆಂಟ್ 123 ಅಂತಹ ಸಿನಿಮಾಗಳಲ್ಲಿ ನಟಿಸಿದ್ದ ಬೇಬಿ ಇಂದಿರಾ ಅವರ ಬಗ್ಗೆ ತಿಳಿದುಕೊಳ್ಳುವ ಸಾಕಷ್ಟು ಜನರು ಹಂಬಲಿಸುತ್ತಿದ್ದರು. ಸಿನಿಮಾದಿಂದ ದೂರ ಉಳಿದುಕೊಂಡಿದ್ದ ಬಾಲ ನಟಿ ಬೇಬಿ ಇಂದಿರಾ ಅವರು ಏನ್​ ಮಾಡುತ್ತಿದ್ದಾರೆ? ಹೇಗೆ ಇದ್ದಾರೆ ಎಂಬುವುದರ ಬಗ್ಗೆ ಸಾಕಷ್ಟು ಜನರಿಗೆ ಅವರ ಬಗ್ಗೆ ತಿಳಿದುಕೊಳ್ಳುವ ಕೂತುಹಲ ಇತ್ತು.

ಇದನ್ನೂ ಓದಿ:5 ಪಂದ್ಯಗಳಲ್ಲಿ ಆರ್​​​ಸಿಬಿಗೆ ಹೀನಾಯ ಸೋಲು; ಅಸಲಿ ಕಾರಣ ಬಿಚ್ಚಿಟ್ಟ ದಿನೇಶ್​ ಕಾರ್ತಿಕ್​​

publive-image

ಚಿಕ್ಕ ವಯಸ್ಸಿನಲ್ಲೇ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡಿದ್ದ ಬೇಬಿ ಇಂದಿರಾ ಅವರ ಬಗ್ಗೆ ರಘುರಾಮ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಬರುವ ನೂರೊಂದು ನೆನಪು ವಿಶೇಷ ಕಾರ್ಯಕ್ರಮಕ್ಕೆ ಸಂದರ್ಶನ ನೀಡಿದ್ದಾರೆ. ಬೇಬಿ ಇಂದಿರಾ ಅವರು, ಕನ್ನಡ ಚಿತ್ರರಂಗದಲ್ಲಿ ನಟನೆಯ ನೆನಪು ಹಾಗೂ ಜನರ ಅಭಿಮಾನದ ಬಗ್ಗೆ ನೆನೆದು ಭಾವುಕರಾಗಿದ್ದಾರೆ. ಬೇಬಿ ಇಂದಿರಾ ಅವರು ಕನ್ನಡ, ತಮಿಳು, ತೆಲುಗು ಸೇರಿದಂತೆ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯಕ್ಕೆ ಇಂದಿರಾ ತಮಿಳುನಾಡಿನ ಚೆನ್ನೈನ ಕೊಟ್ಟಿವಾಕಮ್‌ ಕರ್ಪಗಂಬಲ್‌ ನಗರದಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದಾರಂತೆ.

ಇನ್ನು, ಸಂದರ್ಶನದ ವೇಳೆ ಮಾತಾಡಿದ ಬೇಬಿ ಇಂದಿರಾ ಅವರು, ಸಿನಿಮಾಗಳಿಂದ ದೂರ ಉಳಿದುಕೊಂಡ ಬಳಿಕ ಶ್ರೀಧರ್‌ ಎಂಬುವವರ ಜೊತೆ ನನ್ನ ಮದುವೆ ಆಯ್ತು. ಶ್ರೀಧರ್‌ ಕೂಡಾ ತಮಿಳಿನಲ್ಲಿ ಬಾಲ ಕಲಾವಿದರಾಗಿ ಹೆಸರು ಮಾಡಿದ್ದರು. ಕರ್ಣನ್‌, ಚಿತ್ರಮೇಳ, ಸ್ನೇಹಂ, ಕ್ರೋಧಂ ಸೇರಿ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ನಮಗೆ ಪ್ರಶಾಂತ್‌ ಹಾಗೂ ರಕ್ಷಿತ್‌ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಶ್ರೀಧರ್‌ 11 ಡಿಸೆಂಬರ್‌ 2013 ರಂದು ಹೃದಯಾಘಾತದಿಂದ ನಿಧನರಾದರು. ನನ್ನ ಪತಿ ನಿಧನರಾದ ನಂತರ ಬಹಳ ಆರ್ಥಿಕ ಸಮಸ್ಯೆ ಎದುರಿಸಿದೆ. ಮತ್ತೆ ಚಿತ್ರರಂಗಕ್ಕೆ ಬರಬೇಕೆಂದರೂ ಅದು ಸಾಧ್ಯವಾಗಲಿಲ್ಲ. ಬಹಳ ವರ್ಷಗಳಿಂದ ಮಾಧ್ಯಮಗಳ ಕಣ್ಣಿಗೂ ನಾನು ಕಾಣಿಸಿಕೊಂಡಿಲ್ಲ. ಆಗ ನಾನು ಸೋಷಿಯಲ್‌ ಮೀಡಿಯಾ ಕೂಡಾ ಬಳಸುತ್ತಿಲ್ಲ ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment