newsfirstkannada.com

ಕನ್ನಡದ 2 ಹೊಸ ಸೀರಿಯಲ್​​ ಶುರು; ಹೇಗಿತ್ತು ಶ್ರಾವಣಿ ಸುಬ್ರಮಣ್ಯ, ಚುಕ್ಕಿತಾರೆ ಮೊದಲ ಸಂಚಿಕೆ?

Share :

Published March 20, 2024 at 6:09am

    ಈಗತಾನೆ ಪ್ರಪಂಚ ನೋಡುತ್ತಿರೋ ಪುಟಾಣಿ ಹೆಣ್ಣು ಮಕ್ಕಳ ಕಥೆ ಇಲ್ಲಿದೆ

    ಸೀರಿಯಲ್​ನಲ್ಲಿ ಅಪ್ಪ-ಮಗಳ ಬಾಂಡಿಂಗ್​ ವೀಕ್ಷಕರನ್ನ ಭಾವುಕರಾಗಿಸುತ್ತೆ

    ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯ​ ಕಥೆ ವೀಕ್ಷಕರನ್ನ ಸೆಳೆಯುವಂತೆ ಇದೆ

2 ಹೊಸ ಸೀರಿಯಲ್​ಗಳು ಲಾಂಚ್​ ಮಾಡಲಾಗಿದೆ. ಮಕ್ಕಳ ಸೂಕ್ಷ್ಮ ಮನಸ್ಸಿನ ತಳಮಳ ಚುಕ್ಕಿತಾರೆ. ಅಪ್ಪನ ಪ್ರೀತಿಗಾಗಿ ಹಂಬಲಿಸುತ್ತಿರೋ ಶ್ರಾವಣಿ ಸುಬ್ರಮಣ್ಯ. ಎರಡು ಸ್ಟೋರಿಗೂ ಸಾಮ್ಯತೆ ಇದೆ. ಜೀವನದಲ್ಲಿ ಪ್ರೀತಿನಾ, ದುಡ್ಡಾ? ಇವರಡರ ನಡುವಿನ ಮಹತ್ವ ತಿಳಿಸೋ ಎಳೆಯನ್ನು ಹೊಂದಿರುವ ಧಾರಾವಾಹಿಗಳು. ಹಾಗಾದರೆ ಮೊದಲ ಎಪಿಸೋಡ್​ ಹೇಗಿತ್ತು?.

ಚುಕ್ಕಿತಾರೆ.. ಹೆಸರೇ ಹೇಳುವಂತೆ ಈಗತಾನೆ ಪ್ರಪಂಚ ನೋಡುತ್ತಿರೋ ಪುಟಾಣಿ ಹೆಣ್ಣುಮಕ್ಕಳ ಕಥೆ. ಬಡ ಕುಟುಂಬದ ರಾಜಕುಮಾರಿ ಒಂದು ಕಡೆ ಆದ್ರೇ, ಸಿರಿತನದಲ್ಲಿ ಪಂಜರದ ಗಿಳಿಮರಿ ಆಗಿರೋ ಭವಿಷ್ಯದ ರಾಣಿ ಮತ್ತೊಂದು ಕಡೆ. ಈ ಅಪ್ಪ-ಮಗಳ ಬಾಂಡಿಂಗ್​ ವೀಕ್ಷಕರನ್ನ ಭಾವುಕರನ್ನಾಗಿಸುತ್ತೆ. ಚುಕ್ಕಿಯ ಕಾಲು ಸರಿ ಮಾಡಲು ದಂಪತಿ ಬಡತನದಲ್ಲಿ ವದ್ದಾಡುತ್ತಿದೆ. ಮಗಳನ್ನ ಖುಷಿಯಾಗಿಡಲು ಏನೇಲ್ಲ ಪ್ರಯತ್ನ ಪಡಬಹುದೋ ಅದೆಲ್ಲವನ್ನ ಮಾಡುತ್ತಿದ್ದಾರೆ ತಂದೆ. ಏನೇ ನೋವಿದ್ರು ಎಷ್ಟೇ ಸಂಕಟ ಇದ್ರೂ ಖುಷಿ, ನೆಮ್ಮದಿ, ಸಂಭ್ರಮಕ್ಕೆ ಬರವಿಲ್ಲದ ಸಂಸಾರ ಚುಕ್ಕಿ ಕುಟುಂಬದ್ದು.

ಶ್ರೀಮಂತ ದೊಡ್ಡ ಕುಟುಂಬದ ಕುಡಿ ಇಬ್ಬನಿ. ಕರವೇ ಡೆವಲಪ್​ರ್ಸ್​ ಬ್ಯುಸಿನೆಸ್​​ ಫೀಲ್ಡ್​ನಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡ್ತಿರೋ ಹೆಸರು. ಶ್ರೀಮಂತಿಕೆಯ ಸೊಕ್ಕನ್ನ ಮೈತುಂಬಾ ತುಂಬಿಕೊಂಡಿರೋ ಯಶೋಧ ಕರವೇ ಸಾಮ್ರಾಜ್ಯದಲ್ಲಿ ಅಂತಸ್ತು, ಆಸ್ತಿನೇ ಎಲ್ಲ. ಪ್ರೀತಿ.. ಮಮತೆ.. ಕರುಣೆಗೆ ಇಲ್ಲಿ ಜಾಗ ಇಲ್ಲ. ಇಂತಹದೊಂದು ವಾತವರಣದಲ್ಲಿ ಇಬ್ಬನಿ ಕಷ್ಟ ಪಡುತ್ತಿದ್ದಾಳೆ. ಅಕ್ಷರಶಃ ಇಬ್ಬನಿ ಮಗು ಪಂಜರದಲ್ಲಿ ಸೇರೆಯಾಗಿದೆ.

ಅಪ್ಪನ ಪ್ರೀತಿಗಾಗಿ ಹಂಬಲಿಸುತ್ತಿರುವ ಶ್ರಾವಣಿ ಸುಬ್ರಮಣ್ಯ ಸೀರಿಯಲ್​ ಅನ್ನ ಕಥೆಯನ್ನ ತುಂಬಾ ಅದ್ಭುತವಾಗಿ ಹೆಣೆಯಲಾಗಿದೆ. ಅದ್ಧೂರಿಯಾಗಿ ಮೂಡಿ ಬಂದಿದೆ. ಅಪ್ಪನಿಗೆ ಮಗಳನ್ನ ಕಂಡ್ರೇ ಆಗಲ್ಲ. ಮಗಳಿಗೆ ಅಪ್ಪನೇ ಜೀವ ಎನ್ನುವ ಶ್ರಾವಣಿ. ಸೀರಿಯಲ್​ ಸ್ಟೋರಿನಲ್ಲಿ ಹೊಸ ಹೊಸ ಎಲಿಮೆಂಟ್ಸ್ ಆಡ್​ ಮಾಡಲಾಗಿದೆ. ಬಡತನ ಸಿರಿತನ ನಡುವೆ ಪ್ರೀತಿಯ ಕೊರತೆ ಹೇಗೆ ಕಾಡುತ್ತೆ ಅನ್ನೋದನ್ನ ಧಾರಾವಾಹಿ ಕಟ್ಟಿಕೊಡುತ್ತೆ. ಸುಬ್ಬು ಕುಟುಂಬ ಪ್ರೀತಿಯ ಸಂಕೇತ ಆದ್ರೆ ಇನ್ನು ಎಲ್ಲ ಇದ್ದು ಏನೂ ಇಲ್ಲದೇ ಇರುವ ಜೀವನ ಶ್ರಾವಣಿಯದ್ದು. ಚುಕ್ಕಿತಾರೆ ಸಂಜೆ 6 ಗಂಟೆಗೆ ಕಲರ್ಸ್​ ಕನ್ನಡದಲ್ಲಿ ಪ್ರಸಾರವಾದ್ರೆ ಶ್ರಾವಣಿ ಸುಬ್ರಮಣ್ಯ ರಾತ್ರಿ 9 ಗಂಟೆಗೆ ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರವಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕನ್ನಡದ 2 ಹೊಸ ಸೀರಿಯಲ್​​ ಶುರು; ಹೇಗಿತ್ತು ಶ್ರಾವಣಿ ಸುಬ್ರಮಣ್ಯ, ಚುಕ್ಕಿತಾರೆ ಮೊದಲ ಸಂಚಿಕೆ?

https://newsfirstlive.com/wp-content/uploads/2024/03/CHUKKITARA.jpg

Load More