ಶಿವಣ್ಣ ಮನೆಯಲ್ಲಿ ಒಂದೂವರೆ ಗಂಟೆ ಸಿಕ್ರೇಟ್ ಮೀಟಿಂಗ್.. ಕನ್ನಡ ಸ್ಟಾರ್​ ನಟರಿಗೆ ಒಂದು ಸಂದೇಶ..!

author-image
Ganesh
Updated On
ಶಿವಣ್ಣ ಮನೆಯಲ್ಲಿ ಒಂದೂವರೆ ಗಂಟೆ ಸಿಕ್ರೇಟ್ ಮೀಟಿಂಗ್.. ಕನ್ನಡ ಸ್ಟಾರ್​ ನಟರಿಗೆ ಒಂದು ಸಂದೇಶ..!
Advertisment
  • ಗಣೇಶ್, ದುನಿಯಾ ವಿಜಯ್, ಧ್ರುವಾ ಸಭೆಯಲ್ಲಿ ಭಾಗಿ
  • ಸಭೆ ಬಗ್ಗೆ ನರಸಿಂಹಲು ನೀಡಿದ ಮಾಹಿತಿ ಏನು..?
  • ಶಿವಣ್ಣ ಮುಂದಾಳತ್ವದಲ್ಲಿ ನಡೆದ ಮಹತ್ವದ ಸಭೆ

ಸಂಕಷ್ಟದಲ್ಲಿರುವ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಉಳಿಸಿಕೊಂಡು ಹೋಗಲು ಕೊನೆಗೂ ಸ್ಟಾರ್ ನಟರು ಮನಸ್ಸು ಮಾಡಿದಂತಿದೆ. ಶಿವಣ್ಣ ಮನೆಯಲ್ಲಿ ಇಂದು ಬೆಳಗ್ಗೆ ಸೀಕ್ರೆಟ್ ಮೀಟಿಂಗ್​ ನಡೆದಿದ್ದು, ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.

ಶಿವಣ್ಣ ಮುಂದಾಳತ್ವದಲ್ಲಿ ನಾಗವಾರದ ನಿವಾಸದಲ್ಲಿ ಸಭೆ ನಡೆದಿದೆ. ಗಣೇಶ್, ದುನಿಯಾ ವಿಜಯ್, ಧ್ರುವಾ ಸರ್ಜಾ ಸೇರಿದಂತೆ ಹಲವು ನಟರು ಭಾಗಿಯಾಗಿದ್ದರು. ಸಿನಿಮಾ ಪ್ರದರ್ಶಕರು ಮತ್ತು ವಿತರಕರು ಕೂಡ ಮೀಟಿಂಗ್​ನಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಆರೋಗ್ಯದ ಬಗ್ಗೆ ಸಿಂಗರ್ ಅರ್ಚನಾ ಉಡುಪ ಸ್ಪಷ್ಟನೆ.. ಕ್ಯಾನ್ಸರ್ ಬಗ್ಗೆ ಹೇಳಿದ್ದೇನು?

publive-image

ಕನ್ನಡ ಚಿತ್ರರಂಗ ಸದ್ಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಥೀಯೇಟರ್​ಗೆ ಜನ ಬರುತ್ತಿಲ್ಲ. ಕನ್ನಡಸಿ ನಿಮಾಗಳಿಗೆ ಥೀಯೇಟರ್ ಕೊರತೆ, ಟಿಕೆಟ್ ಬೆಲೆ ವಿಚಾರ, ದಿನೇ ದಿನೇ ಕಡಿಮೆ ಆಗುತ್ತಿರೋ ಕನ್ನಡ ಸಿನಿಮಾಗಳು, ಪ್ರೊಡ್ಯೂಸರ್​ಗಳ ಸಂಕಷ್ಟ, ವಿತರಕರು-ಪ್ರದರ್ಶಕರ ಸಂಕಷ್ಟ ಹೀಗೇ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆದಿದೆ.

ಸಭೆ ಬಳಿಕ ಮಾಹಿತಿ ನೀಡಿರುವ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು, ಥಿಯೇಟರ್ ಸಮಸ್ಯೆ ದೂರ ಮಾಡಲು, ಶಿವಣ್ಣ ಮನೇಲಿ ಸಭೆ ಇತ್ತು. ಆದಷ್ಟು ಬೇಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ನಿರ್ಧಾರ ಮಾಡಲಾಗಿದೆ. ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆದಿದೆ. ಹೀರೋಗಳು ಐದು ವರ್ಷಕ್ಕೆ ಒಂದು ಸಿನಿಮಾ ಮಾಡುವ ಬದಲು, ವರ್ಷಕ್ಕೆ ಎರಡು ಸಿನಿಮಾಗಳು ಮಾಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ಥಿಯೇಟರ್ ಮುಚ್ಚುತ್ತಿರೋದರ ಕುರಿತು ಬಹುಮುಖ್ಯವಾಗಿ ಚರ್ಚೆ ಮಾಡಲಾಗಿದೆ.

ಇದನ್ನೂ ಓದಿ: ಬೇಬಿ ಬಂಪ್ ಲುಕ್​ನಲ್ಲಿ ಕಾಣಿಸಿಕೊಂಡ ಲವ್ ಮಾಕ್ಟೇಲ್ ನಟಿ ಸುಶ್ಮಿತಾ; ಫೋಟೋಸ್ ಇಲ್ಲಿವೆ!

ಸ್ಟಾರ್ ಸಿನಿಮಾಗಳಿಂದ ಥಿಯೇಟರ್​ಗಳು ಉಳಿಯುತ್ತವೆ. ಹೀಗಾಗಿ ಸ್ಟಾರ್​ಗಳು ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡಬೇಕು. ಥಿಯೇಟರ್​ಗಳಿಗೆ ಜನ ಬರುತ್ತಿಲ್ಲ, ಇದು ದೊಡ್ಡ ಸಮಸ್ಯೆ ಆಗಿದೆ. ಥಿಯೇಟರ್​ಗಳಿಗೆ ಲ್ಯಾಂಡ್ ಟ್ಯಾಕ್ಸ್, ಸಬ್ಸಿಡಿ, ಕಡಿಮೆ ಬಡ್ಡಿಯಲ್ಲಿ ಸಾಲ ನೀಡುವಂತೆ ಸಿಎಂ ಬಳಿ ಬೇಡಿಕೆ ಇಡಲಾಗುವುದು ಎಂದು ತಿಳಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment