ದೇವಿ ಅವತಾರ ತೊಟ್ಟಿದ್ದ ಡ್ಯಾನ್ಸರ್​​ಗೆ ಆ ಕ್ಷಣ ಆಗಿದ್ದೇನು? ಈ ಬಗ್ಗೆ ಮೋನಿಷಾ ಏನಂದ್ರು?

author-image
Veena Gangani
Updated On
ದೇವಿ ಅವತಾರ ತೊಟ್ಟಿದ್ದ ಡ್ಯಾನ್ಸರ್​​ಗೆ ಆ ಕ್ಷಣ ಆಗಿದ್ದೇನು? ಈ ಬಗ್ಗೆ ಮೋನಿಷಾ ಏನಂದ್ರು?
Advertisment
  • ಚಾಮುಂಡಿ ಲುಕ್​ನಲ್ಲಿ ಕಾಣಿಸಿಕೊಂಡ ಡ್ಯಾನ್ಸ್​ ಕೊರಿಯೋಗ್ರಾಫರ್​
  • ಶುಕ್ರವಾರವೇ ನಾನು ತಾಯಿಯ ಗೆಟಪ್​ ಆಗಿದ್ದು ಖುಷಿ ಕೊಟ್ಟಿದೆ!
  • ಕಾರ್ಯಕ್ರಮದಲ್ಲಿ ನರೆದಿದ್ದವರ ಮೈ ಜುಂ ಎನ್ನುವಂತೆ ಮಾಡಿದ್ರು ಡ್ಯಾನ್ಸ್​

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದುಕೊಂಡವರು ಡ್ಯಾನ್ಸ್​ ಕೊರಿಯೋಗ್ರಾಫರ್​ ಮೋನಿಷಾ ಪೊನ್ನು. ಕೇವಲ ಡ್ಯಾನ್ಸ್ ಅಲ್ಲದೇ ಹಲವು ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ ಮೋನಿಷಾ.

ಇದನ್ನೂ ಓದಿ:ಮದ್ವೆಗೆ 8 ದಿನ ಬಾಕಿ ಇರುವಾಗ ಮಾಜಿ ಗೆಳೆಯ ಬ್ಲಾಕ್​ಮೇಲ್.. ನೋವಲ್ಲೇ ಜೀವಬಿಟ್ಟ ದೈಹಿಕ ಶಿಕ್ಷಕಿ..

ಆದರೆ ಇವರಿಗೆ ಅತಿ ಹೆಚ್ಚಾಗಿ ಹೆಸರು ತಂದು ಕೊಟ್ಟಿದ್ದು ಡ್ಯಾನ್ಸ್. ಈ ಡ್ಯಾನ್ಸ್​ ​ಶೋ ಮೂಲಕವೇ ವೀಕ್ಷಕರಿಗೆ ಮೋನಿಷಾ ಅವರು ಪರಿಚಯ ಆಗಿದ್ದಾರೆ. ಸದ್ಯ ಮೋನಿಷಾ ಅವರ ಬಗ್ಗೆ ಮಾತ್ನಾಡೋಕೆ ಕಾರಣ ಇತ್ತೀಚೆಗೆ ಜೀ ಕನ್ನಡದಲ್ಲಿ ದೇವಿ ಅವತಾರದಲ್ಲಿ ಕಾಣಿಸಿಕೊಂಡಿದ್ದು ಎಲ್ಲರ ಮೈ ಜುಂ ಎನಿಸುವಂತಿತ್ತು.

publive-image

ಹೌದು, ಕಳೆದ ವಾರ ಸರಿಗಮಪ ವೇದಿಕೆ ಮೇಲೆ ಗಾಯಕರು ಭಕ್ತಿಗೀತೆಗಳ ಹಾಡನ್ನು ಹಾಡಿದ್ದರು. ಪ್ರತಿ ಗಾಯಕರು ಹಾಡಿದ ಹಾಡಿನಿಂದ ಕಾರ್ಯಕ್ರಮದಲ್ಲಿ ನೆರೆದಿದ್ದವರಲ್ಲಿ ಏನೋ ಏನೋ ಒಂತರ ಧನಾತ್ಮಕ ಭಾವನೆ ಮೂಡಿತ್ತು. ಅಷ್ಟೇ ಅಲ್ಲದೇ ವೀಕ್ಷಕರನ್ನು ಕೂಡ ಅಷ್ಟೇ ಭಕ್ತಿ ಭಾವದಿಂದ ಸಂಚಿಕೆಯನ್ನು ನೋಡಿ ಖುಷಿ ಪಟ್ಟಿದ್ದಾರೆ.

publive-image

ಅದರಲ್ಲೂ ಮೈಸೂರಿನ ರಶ್ಮಿ ಹಾಡಿದ ಚಂಡಿ ಚಾಮುಂಡಿ ಹಾಡಿಗೆ ಕಾರ್ಯಕ್ರಮದಲ್ಲಿ ನೆರೆದಿದ್ದವರ ಮೈ ಜುಂ ಎನಿಸುವಂತೆ ಮಾಡಿತ್ತು. ಅದರಲ್ಲೂ ಇದೇ ಹಾಡಿನಲ್ಲಿ ದೇವಿ ರೂಪದಲ್ಲಿ ಕಾಣಿಸಿಕೊಂಡಿದ್ದು ಡ್ಯಾನ್ಸ್​ ಕೊರಿಯೋಗ್ರಾಫರ್​ ಮೋನಿಷಾ ಪೊನ್ನು. ಗಾಯಕಿ ರಶ್ಮಿ ಹಾಡನ್ನು ಹಾಡುತ್ತಿದ್ದಾಗ ಏಕಾಏಕಿ ಎದ್ದು ಡ್ಯಾನ್ಸ್​ ಮಾಡಿ ಎಲ್ಲರು ಅಚ್ಚರಿ ಪಡುವಂತೆ ಮಾಡಿದ್ದರು.

publive-image

ದೇವಿಯ ಲುಕ್​ನಲ್ಲಿ ಕಾಣಿಸಿಕೊಂಡಿದ್ದ ಡ್ಯಾನ್ಸ್​ ಕೊರಿಯೋಗ್ರಾಫರ್​ ಮೋನಿಷಾ ಪೊನ್ನು ಅವರು ನ್ಯೂಸ್​​ಫಸ್ಟ್​ನೊಂದಿಗೆ ಆ ಕ್ಷಣದ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾತಾಡಿದ ಅವರು, ನಮ್ಮ ಡೈರೆಕ್ಟರ್ ಸರ್​ ಫೋನ್​ ಮಾಡಿ ಸರಿಗಮಪದಲ್ಲಿ ಒಂದು ದೇವಿ ಪಾತ್ರ ಮಾಡಬೇಕು ಅಂದ್ರು. ಭರತನಾಟ್ಯ ಡ್ಯಾನ್ಸ್​ ಮಾಡಬೇಕು ಅಂತ ಹೇಳಿದ್ರು. ಚಾಮುಂಡೇಶ್ವರಿ ಗೆಟಪ್​ ಅಂತ ಕೂಡಲೇ ನನಗೆ ಮೊದಲು ಖುಷಿಯಾಯ್ತು. ಭರತನಾಟ್ಯ ಡ್ಯಾನ್ಸರ್ ಒಂದು ದೇವಿ ಪಾತ್ರ ಹಾಕಬೇಕು ಅಂದ್ರೆ ಅದು ಖುಷಿಯ ವಿಚಾರ. ಅವರು ಹೇಳಿದ ಕೂಡಲೇ ನಾನು ಓಕೆ ಸರ್ ಅಂದುಕೊಂಡೆ. ನಂತರ ಸಿಂಗರ್ ರಶ್ಮಿ ಅವರು ಹಾಡುತ್ತಾ ಇರುತ್ತಾರೆ.

publive-image

ಆದಾದ ಮೇಲೆ ನಾನು ಎದ್ದೇಳಬೇಕು. ಅದೇ ಹಾಡು ಹಾಡುವ ವೇಳೆ ನಾನು ಎದ್ದಿದ ತಕ್ಷಣ ಎಲ್ಲರೂ ಶಾಕ್​ ಆದ್ರು. ಅವರಿಗೆಲ್ಲಾ ನಾನು ಮೋನಿಷಾ ಅಂತಾನೇ ಗೊತ್ತಾಗಿಲ್ಲ. ಅವರೆಲ್ಲಾ ನಾನು ಡ್ಯಾನ್ಸ್​ ಮಾಡ್ತೀನಿ ಅಂತ ಅಂದುಕೊಂಡಿರಲಿಲ್ಲ. ನಾನು ಡ್ಯಾನ್ಸ್​ ಮಾಡುತ್ತಿದ್ದರಂತೆ ಎಲ್ಲರು ಎಂದು ನಿಂತುಕೊಂಡು ನೋಡ್ತಾ ಇದ್ದರು. ​ಶುಕ್ರವಾರವೇ ನಾನು ತಾಯಿಯ ಗೆಟಪ್​ ಆಗಿದ್ದು, ಅದು ನನಗೆ ಖುಷಿ ಕೊಟ್ಟಿದೆ. ಆ ಪಾತ್ರಕ್ಕೆ ನಾನು ನ್ಯಾಯ ಒದಗಿಸಿದ್ದೀನಿ ಅನಿಸಿತು ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment