/newsfirstlive-kannada/media/post_attachments/wp-content/uploads/2025/03/at-raghu-1.jpg)
ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ಎ.ಟಿ. ರಘು ಅವರು ತಮ್ಮ 76ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಎ.ಟಿ. ರಘು ಅವರು 'ಮಂಡ್ಯದ ಗಂಡು' ಸೇರಿದಂತೆ 55ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ್ದರು. ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದರು. ಎ.ಟಿ. ರಘು ಅವರ ನಿಧನದ ಸುದ್ದಿ ಕೇಳಿ ಇಡೀ ಕನ್ನಡ ಚಿತ್ರರಂಗ ಆಘಾತಕ್ಕೆ ಒಳಗಾಗಿದೆ.
ಇದನ್ನೂ ಓದಿ:65 ವರ್ಷದ ಹಳೇ ಸಿನಿಮಾ.. ಒಂದು ಹಾಡನ್ನು 105 ಬಾರಿ ಬರೆಯಲಾಯ್ತು; ಶೂಟಿಂಗ್ ಮಾಡಲು ತೆಗೆದುಕೊಂಡಿದ್ದು 2 ವರ್ಷ!
ಕಿಡ್ನಿ ಫೇಲ್ಯೂರ್, ಹೃದಯ ಚಿಕಿತ್ಸೆ, ಎರಡು ಕಾಲು ಹಾಗೂ ಕಣ್ಣುಗಳ ಆಪರೇಷನ್ ಆಗಿ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ರಘು ಅವರು ಇಂದು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮಂಡ್ಯದ ಗಂಡು, ಮಿಡಿದ ಹೃದಯಗಳು, ಮೈಸೂರ್ ಜಾಣಾ, ಅಂತಿಮ ತೀರ್ಪು, ನ್ಯಾಯ ನೀತಿ ಧರ್ಮ ಸಿನಿಮಾಗಳನ್ನು ನಿರ್ದೇಶಕ ಮಾಡಿದ್ದರು. ಅಂಬರೀಶ್ ಅವರಿಗೆ ಸುಮಾರು 27ಕ್ಕೂ ಅಧಿಕ ಸಿನಿಮಾ ನಿರ್ದೇಶನ ಮಾಡಿದ್ದರು. ರಜನಿಕಾಂತ್ ನಟನೆಯ ಮೇರಿ ಅದಾಲತ್ ಸಿನಿಮಾವನ್ನೂ ಕೂಡ ರಘು ನಿರ್ದೇಶಿಸಿದ್ದರು.
ಸದ್ಯ ಬೆಂಗಳೂರಿನ ಆರ್ಟಿ ನಗರದ ಮಠದಹಳ್ಳಿಯಲ್ಲಿ ಅವರ ಪಾರ್ಥಿವ ಶರೀರ ಇಡಲಾಗಿದೆ. ಇಂದು (ಮಾರ್ಚ್ 21) ಮದ್ಯಾಹ್ನ 2 ಗಂಟೆ ಬಳಿಕ ಹೆಬ್ಬಾಳದ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಅವರು ಪತ್ನಿ ಹಾಗೂ ಮಗಳನ್ನು ಎ.ಟಿ ರಘು ಅವರು ಅಗಲಿದ್ದಾರೆ.
ಇದನ್ನೂ ಓದಿ: ನಾಳೆ ಓಲಾ, ಉಬರ್ ರಸ್ತೆಗೆ ಇಳಿಯಲ್ಲ.. ಕರ್ನಾಟಕ ಬಂದ್ಗೆ ಯಾರೆಲ್ಲ ಬೆಂಬಲ ಕೊಟ್ಟವ್ರೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ