/newsfirstlive-kannada/media/post_attachments/wp-content/uploads/2024/11/GURU_PRASAD_NEW_1.jpg)
ಬೆಂಗಳೂರು: ಕನ್ನಡ ಚಿತ್ರರಂಗದ ನಿರ್ದೇಶಕ ಗುರುಪ್ರಸಾದ್ ಅವರ ಮೃತದೇಹ ನಗರದ ಮಾದನಾಯಕನಹಳ್ಳಿ ಅಪಾರ್ಟ್​ಮೆಂಟ್​ ಒಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದೆ. ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಗುರುಪ್ರಸಾದ್ ಅವರು ಯಾವ್ಯಾವ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದರು ಎನ್ನುವ ಮಾಹಿತಿ ಇಲ್ಲಿದೆ.
ಸ್ಯಾಂಡಲ್​ವುಡ್​ನ ನಿರ್ಮಾಪಕ, ಲೇಖಕ, ನಿರ್ದೇಶಕರಾಗಿದ್ದ ಗುರುಪ್ರಸಾದ್ ಅವರು ಸಿನಿಮಾಗಳಲ್ಲಿಯು ಅದ್ಭುತವಾಗಿ ನಟನೆ ಮಾಡುತ್ತಿದ್ದರು. ಮಠ ಸಿನಿಮಾ ಮೂಲಕವೇ ಖ್ಯಾತಿ ಪಡೆದ ಇವರು ಸಾಲು ಸಾಲು ಮೂವಿಗಳಲ್ಲಿ ಅಭಿನಯ ಮಾಡಿದರು. ಜೊತೆಗೆ ಮೂರು ಚಿತ್ರಗಳಿಗೆ ಡೈಲಾಗ್ ರೈಟರ್ ಆಗಿ ಗುರುಪ್ರಸಾದ್ ಕೆಲಸ ಮಾಡಿದ್ದರು. ವಿಶಲ್, ಸೂಪರ್ ರಂಗಾ ಹಾಗೂ ಪುನೀತ್ ರಾಜ್​ಕುಮಾರ್, ಲೂಸ್ ಮಾದ, ಶ್ರೀನಗರ ಕಿಟ್ಟಿ ನಟನೆಯ ಹುಡುಗರು ಮೂವಿಗೆ ಸಂಭಾಷಣೆ ಬರೆದಿದ್ದರು.
ಇದನ್ನೂ ಓದಿ: ಹುಟ್ಟುಹಬ್ಬಕ್ಕೂ ಮೊದಲೇ ಜೀವ ಕಳೆದುಕೊಂಡ ಸ್ಯಾಂಡಲ್​ವುಡ್ ನಿರ್ದೇಶಕ ಗುರುಪ್ರಸಾದ್
ನಟನಾಗಿಯೂ ಖ್ಯಾತಿ ಗಳಿಸಿದ್ದ ಡೈರೆಕ್ಟರ್ ಗುರುಪ್ರಸಾದ್ ಅವರಿಗೆ ಜಗ್ಗೇಶ್ ಅವರ ಮಠ ಸಿನಿಮಾದ ಬಳಿಕ ಸಾಲು ಸಾಲು ಚಿತ್ರಗಳಲ್ಲಿ ನಟಿಸಲು ಅವಕಾಶ ಬಂದಿದ್ದವು. ಈ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡ ಗುರುಪ್ರಸಾದ್ ಅವರು ನಟನೆ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದರು. ಹೀಗಾಗಿಯೇ ಅವರು ಕನ್ನಡದ ಎದ್ದೇಳು ಮಂಜುನಾಥ, ಮೈಲಾರಿ, ಕಳ್ ಮಂಜ, ಹುಡುಗರು, ಡೈರೆಕ್ಟರ್​ ಸ್ಪೆಷಲ್, ವಿಶಲ್, ಕರೋಡ್​ಪತಿ, ಜಿಗರ್​ ಥಂಡಾ, ಅನಂತು ವರ್ಸಸ್ ನುಸ್ರತ್, ಕುಷ್ಕಾ, ಬಡವ ರಾಸ್ಕಲ್, ಬಾಡಿ ಗಾರ್ಡ್​ ಸೇರಿ ಇನ್ನು ಕೆಲ ಚಿತ್ರಗಳಲ್ಲಿ ನಟನಾಗಿ ಅಭಿನಯ ಮಾಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us