Advertisment

ನಾನ್ ವೆಜ್ ಪ್ರಿಯರಿಗೆ ಗುಡ್​ನ್ಯೂಸ್; ಬರ್ತಿದೆ ‘ಬೊಂಬಾಟ್ ಬಾಡೂಟ’.. ಯಾವಾಗ ಗೊತ್ತಾ?

author-image
Veena Gangani
Updated On
ನಾನ್ ವೆಜ್ ಪ್ರಿಯರಿಗೆ ಗುಡ್​ನ್ಯೂಸ್; ಬರ್ತಿದೆ ‘ಬೊಂಬಾಟ್ ಬಾಡೂಟ’.. ಯಾವಾಗ ಗೊತ್ತಾ?
Advertisment
  • ಹಲವು ವರ್ಷಗಳ ನಂತರ ಮತ್ತೆ ಬರ್ತಿದ್ದಾರೆ ಆದರ್ಶ ತಟಪತಿ
  • ಮಾಂಸಾಹಾರಿಗಳಿಗಾಗಿ ತೆರೆಗೆ ಬರ್ತಿದೆ ಹೊಸ ಕಾರ್ಯಕ್ರಮ
  • ಬೊಂಬಾಟ್ ಭೋಜನ ಬೆನ್ನಲ್ಲೇ ಬೊಂಬಾಟ್ ಬಾಡೂಟ ಶುರು

ಕನ್ನಡದ ಕಿರುತೆರೆ ಪ್ರೇಕ್ಷಕರಿಗೆ ಬಗೆ ಬಗೆಯ ಮನರಂಜನೆ ನೀಡುತ್ತಿರುವ ‘ಸ್ಟಾರ್ ಸುವರ್ಣ’ ವಾಹಿನಿ ಇದೀಗ ಮಾಂಸಾಹಾರಿಗಳಿಗಾಗಿ ಹೊಸ ಕಾರ್ಯಕ್ರಮವನ್ನು ಆರಂಭಿಸಲು ಸಜ್ಜಾಗಿದೆ. ಈಗಾಗಲೇ ಬೊಂಬಾಟ್ ಭೋಜನ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿ ಮನೆ ಮಾತಾಗಿದ್ದು, ಇನ್ಮುಂದೆ ವಾರಾಂತ್ಯದಲ್ಲಿ ನಾನ್ ವೆಜ್ ಪ್ರಿಯರಿಗಾಗಿ ಬೊಂಬಾಟ್ ಬಾಡೂಟ ಎಂಬ ಹೊಸ ಕಾರ್ಯಕ್ರಮ ಆರಂಭವಾಗಲಿದೆ.

Advertisment

ಇದನ್ನೂ ಓದಿ: ಪೋಷಕರೇ ಎಚ್ಚರ! ಸಾಲದ ಹೊರೆ; ಆನ್​​ಲೈನ್​ ಗೇಮಿಂಗ್​ನಿಂದ ಪ್ರಾಣವನ್ನೇ ಬಿಟ್ಟ ವಿದ್ಯಾರ್ಥಿ!

publive-image

ಕಿರುತೆರೆಯಲ್ಲಿ ಬಾಡೂಟದ ರಂಗೇಗೌಡ್ರು ಎಂದೇ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದ ಶೆಫ್ ಆದರ್ಶ ತಟಪತಿ, ಇದೀಗ ಹಲವು ವರ್ಷಗಳ ಬಳಿಕ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ಮತ್ತೆ ರಂಗೇಗೌಡರಾಗಿ 'ಬೊಂಬಾಟ್ ಬಾಡೂಟ'ದ ಸಾರಥ್ಯವನ್ನು ನಿರ್ವಹಿಸಲಿದ್ದಾರೆ.

ಬೊಂಬಾಟ್ ಬಾಡೂಟದಲ್ಲಿ ಏನೆಲ್ಲಾ ಇರುತ್ತೆ..?

1. ಖಾರ ಮಸಾಲ: ರಂಗೇಗೌಡರು ರುಚಿ-ರುಚಿಯಾದ ಮಾಂಸಾಹಾರಿ ಖಾದ್ಯಗಳನ್ನು ತಿಳಿಸುತ್ತಾರೆ.
2. ಮಿರ್ಚಿ ಮಸಾಲ: ಸೋಶಿಯಲ್ ಮೀಡಿಯಾದಲ್ಲಿ 'ಉಂಡಾಡಿ ಗುಂಡ' ಎಂದೇ ಖ್ಯಾತಿ ಪಡೆದಿರುವ ವೆಂಕಟೇಶ್, ಕರ್ನಾಟಕದಾದ್ಯಂತ ಚಲಿಸಿ, ಜನಪ್ರಿಯತೆಗಳಿಸಿರುವ ವರ್ಷಗಳ ಇತಿಹಾಸವಿರುವ ಹೋಟೆಲ್​ಗಳಿಗೆ ಧಾವಿಸಿ ಅಲ್ಲಿನ ಜನಪ್ರಿಯ ನಾನ್ ವೆಜ್ ತಿನಿಸುಗಳನ್ನು ಸವಿದು ಜನರಿಗೆ ತಿಳಿಸುವುದು.
3. ನಾಟಿ ಮಸಾಲ: ಜನಸಾಮಾನ್ಯರು / ಸೆಲೆಬ್ರಿಟಿಗಳು ಬಂದು ವಿವಿಧ ರೀತಿಯ ಕೈರುಚಿಯನ್ನು ತಿಳಿಸಿಕೊಡುವುದು.

Advertisment

publive-image

ಹೀಗೆ ಈ ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗಗಳನ್ನು ಹೊಂದಿದೆ. ಸೋಮವಾರದಿಂದ-ಶುಕ್ರವಾರ ಸಸ್ಯಾಹಾರಿಗಳಿಗಾಗಿ 'ಬೊಂಬಾಟ್ ಭೋಜನ' ಪ್ರಸಾರವಾದರೆ, ಪ್ರತೀ ಶನಿವಾರ ಮಾಂಸಾಹಾರಿಗಳಿಗಾಗಿ 'ಬೊಂಬಾಟ್ ಬಾಡೂಟ' ಪ್ರಸಾರವಾಗಲಿದೆ. ಮನೆಮಂದಿಯೆಲ್ಲಾ ಒಂದಾಗಿ ನೋಡಿ, ರುಚಿಕರ ತಿನಿಸುಗಳನ್ನು ಮನೆಯಲ್ಲಿ ಟ್ರೈ ಮಾಡಿ, ಎಂಜಾಯ್ ಮಾಡಬಹುದು. ಇದೇ ಶನಿವಾರದಿಂದ ಪ್ರತೀ ಶನಿವಾರ ಮಧ್ಯಾಹ್ನ 12 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ರಂಗೇಗೌಡರ ಜೊತೆ 'ಬೊಂಬಾಟ್ ಬಾಡೂಟ' ಪ್ರಸಾರವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment