Advertisment

ಕನ್ನಡ ಚಿತ್ರರಂಗದ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಟ.. ಚೇತನ್ ಜೊತೆ ಕೈ ಜೋಡಿಸಿದ ಸುದೀಪ್, ರಮ್ಯಾ!

author-image
Bheemappa
Updated On
ಮಾಲಿವುಡ್ ಬೆನ್ನಲ್ಲೇ ಸ್ಯಾಂಡಲ್​ವುಡ್​ಗೂ #MeToo; ದಿಟ್ಟ ಹೆಜ್ಜೆಯಿಟ್ಟ ಫೈರ್, ಇಂದು ಮಹತ್ವದ ಬೆಳವಣಿಗೆ
Advertisment
  • ಫೈರ್​ ಸಂಸ್ಥೆಯಲ್ಲಿ ಚೇತನ್ ಸೇರಿ ಯಾರು ಯಾರು ಇದ್ದಾರೆ?
  • ಕನ್ನಡ ಚಲನಚಿತ್ರೋದ್ಯಮದಲ್ಲೂ ಲೈಂಗಿಕ ಕಿರುಕುಳ ಭೂತ
  • ರಾಜ್ಯ ಸರ್ಕಾರವನ್ನ ಕೋರಿದ ಸ್ಯಾಂಡಲ್​ವುಡ್​ನ ಫೈರ್ ಸಂಸ್ಥೆ

ಮಾಲಿವುಡ್​ (ಮಲಯಾಳಂ) ಇಂಡಸ್ಟ್ರಿಯಲ್ಲಿ ಹೀರೋಯಿನ್​​ಗಳು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಭಾರೀ ಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಈ ಕುರಿತಾದ ಕೆ.ಹೇಮಾ ಸಮಿತಿ ವರದಿ ಬಹಿರಂಗವಾದ ಬೆನ್ನಲ್ಲೇ ಅನೇಕ ಮಲಯಾಳಂ ಮೂವಿಯ ನಟ ಮತ್ತು ನಿರ್ದೇಶಕರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿವೆ. ಸದ್ಯ ಇದೇ ರೀತಿ ಕಮಿಟಿ ನಮ್ಮಲ್ಲಿ ರಚಿಸಬೇಕೆಂದು ಸ್ಯಾಂಡಲ್​ವುಡ್​ನ ಫೈರ್ ಸಂಸ್ಥೆ ರಾಜ್ಯ ಸರ್ಕಾರವನ್ನ ಕೋರಿದೆ.

Advertisment

ಇದನ್ನೂ ಓದಿ:ವಾಶ್ ಮಾಡಿದ್ದ ದರ್ಶನ್‌ ಬಟ್ಟೆ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆಗಳು ಪತ್ತೆ; ಏನಿದು ಲುಮಿನಲ್ ಟೆಸ್ಟ್‌?

ತೆಲುಗು ಚಿತ್ರರಂಗದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಕುರಿತು ಅಧ್ಯಯನಕ್ಕಾಗಿ ಸಮಿತಿ ರಚಿಸಿ ಎಂದು ನಟಿ ಸಮಂತಾ ಸೇರಿಂದತೆ ಟಾಲಿವುಡ್‌ ಹಲವು ಸೆಲಬ್ರಿಟಿಗಳು ತೆಲಂಗಾಣ ಸರ್ಕಾರದ ಮೇಲೆ ಒತ್ತಡ ಹಾಕಿದ್ದರು. ಈಗ ಕನ್ನಡ ಚಿತ್ರರಂಗದಲ್ಲೂ ಈ ರೀತಿ ಕೂಗು ಕೇಳಿ ಬಂದಿದೆ. ರಾಜ್ಯ ಸರ್ಕಾರಕ್ಕೆ ಮನವಿ ಮಾಡಿರುವ ಸಂಸ್ಥೆ FIRE. ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (FIRE) ಸಂಸ್ಥೆಯಲ್ಲಿ ನಟ ಚೇತನ್ ಅಹಿಂಸಾ, ನಿರ್ದೇಶಕಿ ಕವಿತಾ ಲಂಕೇಶ್ ಇದ್ದಾರೆ. ಇವರೆ ಇದರ ನೇತೃತ್ವ ವಹಿಸಿದ್ದು, ನಿವೃತ್ತ ನ್ಯಾಯಾಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಆಗ್ರಹ ಮಾಡಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಜೈಲಲ್ಲಿ ದಾಸನಿಗೆ ಭಯ.. ಫೋನ್ ಮೂಲಕ ಪತ್ನಿ ವಿಜಯಲಕ್ಷ್ಮಿ ಜೊತೆ 5 ನಿಮಿಷ ಮಾತಾಡಿದ ದರ್ಶನ್​! 

Advertisment

publive-image

FIRE ಸಂಸ್ಥೆ ಬೇಡಿಕೆ​ ಏನು..?

ಕನ್ನಡ ಚಲನಚಿತ್ರೋದ್ಯಮದಲ್ಲೂ ಲೈಂಗಿಕ ಕಿರುಕುಳ ಸಮಸ್ಯೆಯನ್ನು ಮಹಿಳೆಯರು ಎದುರಿಸುತ್ತಿದ್ದಾರೆ. ಇದರ ಕುರಿತು ಅಧ್ಯಯನ ಮಾಡಿ ವರದಿ ಮಾಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ ಎಂದು ಫೈರ್​​ ಸಂಸ್ಥೆ ಸರ್ಕಾರಕ್ಕೆ ಬೇಡಿಕೆ ಇಟ್ಟಿದೆ. ಫೈರ್‌ ಸಂಸ್ಥೆ ಅಧ್ಯಕ್ಷೆ ಕವಿತಾ ಲಂಕೇಶ್, ಕಾರ್ಯದರ್ಶಿ ಚೇತನ್ ಅಹಿಂಸಾ, ನಟಿ ರಮ್ಯಾ, ಪೂಜಾ ಗಾಂಧಿ, ಚೈತ್ರಾ ಜೆ. ಆಚಾರ್, ಶ್ರುತಿ ಹರಿಹರನ್, ಆಶಿಕಾ ರಂಗನಾಥ್, ಐಂದ್ರಿತಾ ರೇ, ಕಿಶೋರ್, ನಿಶ್ವಿಕಾ ನಾಯ್ಡು, ಅಮೃತಾ ಅಯ್ಯಂಗಾರ್, ಧನ್ಯಾ ರಾಮ್‌ಕುಮಾರ್, ಸಂಯುಕ್ತ ಹೆಗಡೆ, ಶ್ರದ್ಧ ಶ್ರೀನಾಥ್, ವಿನಯ್ ರಾಜ್‌ಕುಮಾರ್, ಸುದೀಪ್​ ಸೇರಿದಂತೆ 153 ಮಂದಿ ಅರ್ಜಿಗೆ ಸಹಿ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment