ಸಿನಿಮಾ ನಿರ್ದೇಶಕನ ಮೇಲೆ ನಟ ಗುಂಡಿನ ದಾಳಿ ಕೇಸ್​​ಗೆ ಟ್ವಿಸ್ಟ್​​; ಅಸಲಿ ಕಥೆಯೇ ಬೇರೆ

author-image
Ganesh Nachikethu
Updated On
ಸಿನಿಮಾ ನಿರ್ದೇಶಕನ ಮೇಲೆ ನಟ ಗುಂಡಿನ ದಾಳಿ ಕೇಸ್​​ಗೆ ಟ್ವಿಸ್ಟ್​​; ಅಸಲಿ ಕಥೆಯೇ ಬೇರೆ
Advertisment
  • ನಿರ್ದೇಶಕನ ಮೇಲೆ ನಟನ ಗುಂಡಿನ ‘ತಾಂಡವ’ ಕೇಸ್​​
  • ಫೈರಿಂಗ್​ ಹಿಂದಿರೋ ಅಸಲಿ ಕಹಾನಿ ಎಫ್​ಐಆರ್​ನಲ್ಲಿ
  • ಡೈರೆಕ್ಟರ್​ ವಿರುದ್ಧ ಕೇಳಿ ಬಂತು ಕಮಿಷನ್​ ಆರೋಪ..!

ಬೆಂಗಳೂರು: ನಿರ್ದೇಶಕನ ಮೇಲೆ ನಟನ ಫೈರ್​ ಮಾಡಿದ ಹಿಂದಿನ ಸತ್ಯ ಎಫ್​ಐಆರ್​ನಲ್ಲಿ ಉಲ್ಲೇಖವಾಗಿದೆ. ಚಿತ್ರಕ್ಕೆ ನಟಿಯ ಆಯ್ಕೆ ತಡವಾಗಿದ್ದಕ್ಕೆ ಹಿರೋ ಡೈರೆಕ್ಟರ್​ ಮೇಲೆ ಕೋಪ ತೀರಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ, ಭರತ್​ ಮೇಲೆ ಕಮಿಷನ್​ ಪಡೆಯುತ್ತಿರೋ ಆರೋಪವೂ ಕೇಳಿ ಬಂದಿದೆ.

ನಟಿಯ ಆಯ್ಕೆ ತಡವಾಗಿದ್ದಕ್ಕೆ ಅಸಮಾಧಾನ

ಸಿನಿಮಾ ನಿರ್ದೇಶಕ ಕೊಟ್ಟಿರೋ ದೂರಿನ ಎಫ್​ಐಆರ್​ನಲ್ಲಿ ನಟನ ಮುನಿಸಿನ ಅಸಲಿ ಸತ್ಯ ಬಯಲಾಗಿದೆ. ದೇವನಾಂಪ್ರಿಯ ಸಿನಿಮಾಗೆ ನಾಯಕ ನಟಿ ಆಯ್ಕೆ ತಡವಾಗಿದ್ದಕ್ಕೆ ತಾಂಡವ್​​ ಕೋಪಗೊಂಡಿದ್ದ. ಇದೇ ವಿಚಾರವಾಗಿ ನಿರ್ದೇಶಕ ಭರತ್​​ ಜೊತೆ ಗಲಾಟೆ ಮಾಡ್ಕೊಂಡಿದ್ದ. ತಾಂಡವ್​ಮೊನ್ನೆ ಕೂಡ ಮಾತಿಗೆ ಮಾತು ಬೆಳೆದು ಡೈರೆಕ್ಟರ್​ ಮೇಲೆ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

ಎಫ್​ಐಆರ್​ನಲ್ಲಿ ಏನಿದೆ?

ಚಿತ್ರ ಆರಂಭವಾಗಿ 2 ವರ್ಷವಾದ್ರೂ ನಾಯಕಿ ಆಯ್ಕೆ ಆಗಿರಲಿಲ್ಲ. ಹೀಗಾಗಿ ನಟ ತಾಂಡವ ರಾಮ್ ನನ್ನ ಮೇಲೆ ಕೋಪಗೊಂಡು, ಎರಡು ಬಾರೀ ಇದೇ ವಿಚಾರಕ್ಕೆ ಗಲಾಟೆ ಮಾಡಿದ್ರು. ಅಷ್ಟೇ ಅಲ್ಲ ಸಿನಿಮಾ ತಂತ್ರಜ್ಞರಿಂದ ನಾನು​ ಕಮಿಷನ್ ಪಡೆದಿದ್ದೇನೆ ಎಂದು ತಾಂಡವ್​ ಆರೋಪ ಮಾಡಿದ್ರು. ಬಳಿಕ ತಾಂಡವ್​, ತಾನು ಖರ್ಚು ಮಾಡಿದ 6 ಲಕ್ಷ ವಾಪಸ್ ನೀಡುವಂತೆ ಪಟ್ಟು ಹಿಡಿದಿದ್ರು. ಇದೇ ವಿಚಾರಕ್ಕೆ ಸೋಮವಾರದ ಸಂಜೆ ಸಭೆ ಸೇರಲಾಗಿತ್ತು. ಚಂದ್ರಲೇಔಟ್​ ನಿರ್ಮಾಪಕರ ಕಚೇರಿಯಲ್ಲಿ ಸಭೆ ಸೇರಿದ್ವಿ. ಈ ವೇಳೆ ತಾನು ಖರ್ಚು ಮಾಡಿದ ಹಣ ಕೊಡುವಂತೆ ತಾಂಡವ್​ ಗಲಾಟೆ ಮಾಡಿದ್ರು. ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ತಾಂಡವ್​ ಗನ್ ತರಿಸಿ ನನ್ನ ಮೇಲೆ ಹಾರಿಸಿದ್ರು. ತಕ್ಷಣ ನಾನು ಪಕಕ್ಕೆ ಸರಿದು, ಗನ್​ ಮೇಲಕ್ಕೆ ಎತ್ತಿದೆ. ಸದ್ಯ ಗುಂಡು ಸೀಲಿಂಗ್​ಗೆ ತಗುಲಿತು, ತಪ್ಪಿಸದೇ ಹೋಗಿದ್ರೆ ನನ್ನ ತಲೆಗೆ ತಾಗಿ ಸಾವು ಸಂಭವಿಸುತ್ತಿತ್ತು ಎಂದು ಭರತ್​ ದಾಖಲಿಸಿರೋ ಎಫ್​ಐಆರ್​ನಲ್ಲಿ ಉಲ್ಲೇಖಿಸಿದ್ದಾರೆ.

ಘಟನೆ ಸಂಬಂಧ ನಿರ್ದೇಶಕ ಭರತ್ ವಿಚಾರಣೆ ನಡೆಸಿರೋ ಪೊಲೀಸರು ಘಟನೆ ವೇಳೆ ಹಾಜರಿದ್ದವರ ಹೇಳಿಕೆಯನ್ನೂ ಪಡೆದಿದ್ದಾರೆ. ಇತ್ತ ಆರೋಪಿ ತಾಂಡವೇಶ್ವರ್ ವಿಚಾರಣೆ ಕೂಡ ನಡೆದಿದ್ದು, ಚಂದ್ರಲೇಔಟ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ವಿಪರೀತ ತೂಕನಷ್ಟ; ಸಣಕಲು ಕಡ್ಡಿಯಾದ ಸುನೀತಾ ವಿಲಿಯಮ್ಸ್‌; ಇವ್ರ ಆರೋಗ್ಯ ಹೇಗಿದೆ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment