ಮಹಾ ಕುಂಭಮೇಳದಲ್ಲಿ ಪ್ರತ್ಯಕ್ಷರಾದ ಕನ್ನಡದ ಸ್ಟಾರ್ ನಿರ್ದೇಶಕಿ ಸ್ವಪ್ನ ಕೃಷ್ಣ.. VIDEO

author-image
Veena Gangani
Updated On
ಮಹಾ ಕುಂಭಮೇಳದಲ್ಲಿ ಪ್ರತ್ಯಕ್ಷರಾದ ಕನ್ನಡದ ಸ್ಟಾರ್ ನಿರ್ದೇಶಕಿ ಸ್ವಪ್ನ ಕೃಷ್ಣ.. VIDEO
Advertisment
  • ವಸಂತ ಪಂಚಮಿ ಪವಿತ್ರ ದಿನದಂದೇ 62 ಲಕ್ಷ ಭಕ್ತರು ಭಾಗಿ
  • ದಿನದಿಂದ ದಿನಕ್ಕೆ ಪ್ರಯಾಗ್‌ರಾಜ್​ಗೆ ಹರಿದು ಬರುತ್ತಿರೋ ಭಕ್ತರು
  • ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಸ್ವಪ್ನ ಕೃಷ್ಣ ವಿಡಿಯೋ

ವಸಂತ ಪಂಚಮಿ ಪವಿತ್ರ ದಿನದಂದು ಮಹಾಕುಂಭಮೇಳದಲ್ಲಿ ಭಕ್ತಕೋಟಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದೆ. ದಿನದಿಂದ ದಿನಕ್ಕೆ ಭಕ್ತಾದಿಗಳು ಪ್ರಯಾಗರಾಜ್​ಗೆ ಬರುವ ಸಂಖ್ಯೆ ಏರಿಕೆ ಗತಿಯಲ್ಲಿಯೇ ಸಾಗುತ್ತಿದೆ. ಇದೀಗ ಪ್ರಯಾಗ್​ರಾಜ್ ಮಹಾ ಕುಂಭಮೇಳದಲ್ಲಿ ಕನ್ನಡದ ಸ್ಟಾರ್​ ನಿರ್ದೇಶಕಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಸರಿಗಮಪ ವೇದಿಕೆಗೆ ಶಿವಣ್ಣ ಸಡನ್ ಎಂಟ್ರಿ ಕೊಡಲು ಒಂದು ಬಹುಮುಖ್ಯ ಕಾರಣವಿತ್ತು; ಏನದು?

publive-image

ಹೌದು, ಕನ್ನಡ ಕಿರುತೆರೆಯಲ್ಲಿ ವೀಕ್ಷಕರಿಗೆ ವಿಭಿನ್ನತೆಯನ್ನು ಉಣ ಬಡಿಸುತ್ತಿದ್ದ ಸ್ಟಾರ್​ ನಿರ್ದೇಶಕಿ, ನಿರ್ಮಾಪಕಿ ಸ್ವಪ್ನ ಕೃಷ್ಣ ಅವರು ಮಹಾ ಕುಂಭಾಮೇಳದಲ್ಲಿ ಭಾಗಿಯಾಗಿದ್ದಾರೆ. ಸ್ವಪ್ನ ಕೃಷ್ಣ ಅವರು ಪ್ರಯಾಗ್​ರಾಜ್​ಗೆ ಹೋಗಿರುವ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಟಿ, ನಿರ್ದೇಶಕಿ, ನಿರ್ಮಾಪಕಿಯಾಗಿ ಕಿರುತೆರೆ ಹಾಗೂ ಸ್ಯಾಂಡಲ್‌ವುಡ್‌ನಲ್ಲಿ ಹೆಸರು ಮಾಡಿದ್ದಾರೆ.

ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಈಗಾಗಲೇ ಇಂದು ವಸಂತ ಪಂಚಮಿ ಇರುವುದರಿಂದ ಸುಮಾರು 62 ಲಕ್ಷ ಜನರು ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ದೇಶ ವಿದೇಶಗಳಿಂದ ಭಕ್ತರು ಮಹಾ ಕುಂಭಮೇಳದಲ್ಲಿ ಭಾಗಿಯಾಗಿ ಪುನೀತರಾಗುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment