/newsfirstlive-kannada/media/post_attachments/wp-content/uploads/2024/02/RUKMINI_VASANTH.jpg)
ಸ್ಯಾಂಡಲ್​ವುಡ್​ನ ಬ್ಯೂಟಿಗಳು ಟಾಲಿವುಡ್​ ಸೇರಿದಂತೆ ಬೇರೆ ಭಾಷೆಯ ಸಿನಿಮಾ ಇಂಡಸ್ಟ್ರಿಗೆ ಹೋಗೋದು ಹೊಸದೇನಲ್ಲ. ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಆಶಿಕಾ ರಂಗನಾಥ್ ಸೇರಿದಂತೆ ಕೆಲ ನಟಿಯರು ಬೇರೆ ಇಂಡಸ್ಟ್ರಿಗೆ ಹೋಗಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ನಟಿ ರುಕ್ಮಿಣಿ ವಸಂತ್ ಕೂಡ ಟಾಲಿವುಡ್​ನಲ್ಲೂ ಅಭಿನಯಿಸಲಿದ್ದಾರೆ. ಅಲ್ಲದೇ ಬೇರೆ ಸಿನಿಮಾಗಳಿಗೂ ಆಫರ್​ಗಳು ಬರುತ್ತಿವೆ ಎನ್ನಲಾಗಿದ್ದು, ಸದ್ಯ ಇದರ ಬೆನ್ನಲ್ಲೇ ರುಕ್ಮಿಣಿ ವಸಂತ್ ನ್ಯೂ ಫೋಟೋ ಶೂಟ್ ಮಾಡಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/02/RUKMINI_VASANTH_2.jpg)
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಹೀರೋಯಿನ್ ರುಕ್ಮಿಣಿ ವಸಂತ್ ಎಲ್ಲೇ ಹೋದ್ರೂ ಅವರನ್ನ ಪುಟ್ಟಿ ಎಂದೇ ಫ್ಯಾನ್ಸ್ ಕರೆಯುತ್ತಿದ್ದಾರೆ. ಸದ್ಯ ನ್ಯೂ ಫೋಟೋ ಶೂಟ್ ಮಾಡಿಸಿರುವ ರುಕ್ಮಿಣಿ ವಸಂತ್ ಅವರು ಕೆರೆ ದಡದ ಮೇಲೆ ವಿಧ ವಿಧವಾದ ಫೋಟೋಗಳನ್ನ ತೆಗೆಸಿಕೊಂಡಿದ್ದಾರೆ. ಸಂಜೆ ಸಮಯದಲ್ಲಿ ಯಾವುದೋ ಕೆರೆಯ ದಡಕ್ಕೆ ಫೋಟೋಗ್ರಾಫರ್ ಜೊತೆ ಹೋಗಿರುವ ರುಕ್ಮಿಣಿ ವಸಂತ್ ಕ್ಯಾಮೆರಾಗಳಿಗೆ ಮಸ್ತ್ ಲುಕ್ ಕೊಟ್ಟಿದ್ದಾರೆ.
/newsfirstlive-kannada/media/post_attachments/wp-content/uploads/2024/02/RUKMINI_VASANTH_1.jpg)
ಈ ಸಂಬಂಧ ವಿಡಿಯೋವೊಂದನ್ನ ತಮ್ಮ ಇನ್​ಸ್ಟಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫೋಟೋ ಶೂಟ್ ಮಾಡಿಸಿರುವ ರುಕ್ಮಿಣಿ ವಸಂತ್ ಅವರು ವಿಡಿಯೋ ಮೂಲಕ ತಮ್ಮ ಚಂದದ ಫೋಟೋಗಳನ್ನ ಫೋಸ್ಟ್ ಮಾಡಿದ್ದಾರೆ.
View this post on Instagram
ವಿಡಿಯೋದಲ್ಲಿ ಬೇರೆ ಬೇರೆ ಭಂಗಿಗಳಲ್ಲಿ ಪೋಸ್ ಕೊಟ್ಟಿರುವ ಪೋಟೋಗಳು ಇವೆ. ಸದ್ಯ ಇವುಗಳನ್ನು ಮೆಚ್ಚಿಕೊಂಡಿರುವ ಫ್ಯಾನ್ಸ್ ಕಾಮೆಂಟ್ಸ್ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us