/newsfirstlive-kannada/media/post_attachments/wp-content/uploads/2023/08/rashi-bhavishya-25.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲಪಕ್ಷ, ಪ್ರತಿಪತ್ ತಿಥಿ (ಪಾಡ್ಯ), ಆರಿದ್ರಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ..
ಮೇಷ ರಾಶಿ
/newsfirstlive-kannada/media/post_attachments/wp-content/uploads/2023/06/Mesha_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ಗೆಳೆಯ, ಗೆಳತಿಯರ ವಿವಾಹದ ಶುಭ ಸುದ್ದಿ ಕೇಳುತ್ತೀರಿ
- ಊಟವೂ ಸಕಾಲಕ್ಕೆ ದೊರೆಯದೇ ಕೋಪ ಹೆಚ್ಚಾಗುವ ಸಾಧ್ಯತೆಯಿರುತ್ತದೆ
- ನಿಮ್ಮಲ್ಲಿರುವ ಬೇರೆಯವರ ವಸ್ತುಗಳು ಕಳೆದುಹೋಗುವ ಸಾಧ್ಯತೆ ಇದೆ
- ಮಕ್ಕಳ ಕೆಟ್ಟ ಅಭ್ಯಾಸಗಳಿಂದ ಅವಮಾನ, ಮನಸ್ಸಿಗೆ ನೋವು ಉಂಟಾಗಬಹುದು
- ಇದರಿಂದ ನಿಮ್ಮ ಹಾಗೂ ನಿಮ್ಮ ಸ್ನೇಹಿತನ ಮಧ್ಯ ಅಸಮಾಧಾನ ಏರ್ಪಟ್ಟು ಕಲಹವಾಗಬಹುದು
- ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ದುರ್ಗಾ ಹೋಮ ಮಾಡಿಸಿ
ವೃಷಭ
/newsfirstlive-kannada/media/post_attachments/wp-content/uploads/2023/06/Vrushabha_Bhavishya_Eedina_Astorology_Horoscope_RashiBhavishya_newsfirstkannada.jpg)
- ಈ ದಿನ ನಿಮಗೆ ಶತ್ರುಗಳಿಂದ ತೊಂದರೆಯಾಗುವ ಸಾಧ್ಯತೆ
- ನಿಮ್ಮ ಮನಸ್ಸು ಶುದ್ಧವಾಗಿರಲಿ, ತಾಳ್ಮೆ ಇರಲಿ ಶುಭವಿದೆ
- ಆಸ್ತಿಯ ವಿಚಾರವಾಗಿ ವಾದ-ವಿವಾದಗಳು ಏರ್ಪಡಬಹುದು
- ಹಣದ ವಿಚಾರವಾಗಿ ದೈಹಿಕ, ಮಾನಸಿಕ ತೊಂದರೆ ಸಾಧ್ಯತೆ
- ನಿಮ್ಮ ಮನೆಯಲ್ಲಿ ಅಥವಾ ಕೆಲಸದ ಸ್ಥಳದಲ್ಲಿ ವಸ್ತುಗಳು ಕಳುವಾಗುವ ಸಾಧ್ಯತೆ, ಜಾಗ್ರತೆ ವಹಿಸಿ
- ಹಯಗ್ರೀವರನ್ನು ಪ್ರಾರ್ಥಿಸಿ
ಮಿಥುನ
/newsfirstlive-kannada/media/post_attachments/wp-content/uploads/2023/06/Mithuna_Bhavishya_Eedina_Astorology_Horoscope_RashiBhavishya_newsfirstkannada.jpg)
- ಹೊಸ ಬದಲಾವಣೆಯಾಗುವ ಸೂಚನೆಗಳು ಕಾಣಬಹುದು
- ನಿಮ್ಮ ಷೇರು ವ್ಯವಹಾರವು ಮಧ್ಯಾಹ್ನ 1.30 ರಿಂದ 3 ಗಂಟೆ ಒಳಗಿರಲಿ
- ಇಂದು ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಚ್ಚರಿಕೆ
- ವಿವಾಹ ವಿಚಾರದಲ್ಲಿ ಉದ್ವಿಗ್ನ ಪರಿಸ್ಥಿತಿ ಕಾಡಬಹುದು
- ನಿಮ್ಮ ಕೆಲಸಕ್ಕೆ ಮನೆಯವರ ಸಹಾಯ, ಸಹಕಾರ ದೊರೆಯದೆ ಇರಬಹುದು
- ಪ್ರತ್ಯಂಗಿರಾದೇವಿಯನ್ನು ಆರಾಧಿಸಿ
ಕಟಕ
/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ಸಮಾಜಕ್ಕೆ ಸರಿಯಾದ ಸಂದೇಶ ನೀಡುತ್ತಾ ಇನ್ನೂ ಹೆಚ್ಚಿನ ಮನ್ನಣೆಯನ್ನು ಪಡೆಯಿರಿ
- ರಸ್ತೆಯಲ್ಲಿರುವ ಮರ ಅಥವಾ ಮರದ ಕೊಂಬೆಯಿಂದ ತೊಂದರೆ ಸಾಧ್ಯತೆ
- ಅಪಘಾತದಿಂದ ಹೆಚ್ಚು ಹಣ ಖರ್ಚಾಗಬಹುದು, ಜಾಗ್ರತೆ ಇರಲಿ
- ನಿಮ್ಮ ಬುಧ್ಧಿವಂತಿಕೆಯಿಂದ ಎಲ್ಲ ಸಮಸ್ಯೆಗಳನ್ನು ನಿಭಾಯಿಸಿ
- ಉಚ್ಚಾಟನಾ ಸುದರ್ಶನ ಹೋಮ ಮಾಡಿಸಿ
ಸಿಂಹ
/newsfirstlive-kannada/media/post_attachments/wp-content/uploads/2023/06/Simha_Bhavishya_Eedina_Astorology_Horoscope_RashiBhavishya_newsfirstkannada.jpg)
- ಕುಟುಂಬದಲ್ಲಿ, ವ್ಯವಹಾರದಲ್ಲಿ, ವಿದ್ಯಾರ್ಥಿಗಳ ಭವಿಷ್ಯದಲ್ಲಿ ಅಭಿವೃದ್ಧಿ ಉಂಟಾಗುತ್ತದೆ
- ಹಾಲು,ನೀರು ,ಎಣ್ಣೆ ಇತ್ಯಾದಿ ದ್ರವ ಪದಾರ್ಥಗಳನ್ನು ವ್ಯಾಪಾರ ಮಾಡುವವರಿಗೆ ಲಾಭವಿದೆ
- ಈ ದಿನ ವಾಹನ ಅಪಘಾತವಾಗುವ ಸಾಧ್ಯತೆ, ಎಚ್ಚರಿಕೆ ಇರಲಿ
- ಇಂದು ಅನಿರೀಕ್ಷಿತ ಹಣ ನಿಮ್ಮ ಕೈ ಸೇರಬಹುದು
- ನಿಮ್ಮ ಪಾಲುದಾರಿಕೆಯಿಂದ ಹೊರ ಬರುವ ಪರಿಸ್ಥಿತಿ ನಿರ್ಮಾಣವಾಗಬಹುದು
- ಕಪಾಲಿನೀ ದೇವಿಯನ್ನ ಆರಾಧನೆ ಮಾಡಿ
ಕನ್ಯಾ
/newsfirstlive-kannada/media/post_attachments/wp-content/uploads/2023/06/Kanya_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ನಿಮ್ಮ ಕ್ಷೇತ್ರದಲ್ಲಿ ವಿಶೇಷ ಗೌರವ ಸಿಗುವ ದಿನ
- ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ ಗೌರವ, ಪುರಸ್ಕಾರ ದೊರೆಯುವ ದಿನ
- ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಗೌರವ, ಸನ್ಮಾನ ಸಿಗುತ್ತದೆ
- ಭೂವ್ಯಾಪಾರಿಗಳಿಗೆ ಉತ್ತಮವಾದ ದಿನ
- ಉತ್ತಮವಾದ ಕಾರ್ಯಗಳು ಆರಂಭವಾಗಬಹುದು
- ಅನ್ನಪೂರ್ಣೇಶ್ವರಿಯನ್ನು ಪ್ರಾರ್ಥಿಸಿ
ತುಲಾ
/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಅನಗತ್ಯ ಹಣ ಖರ್ಚು ಮಾಡಿ ಸಮಸ್ಯೆ ಬಗೆಹರಿಯದೆ ಒದ್ದಾಡಬೇಕಾಗಬಹುದು
- ಇಂದು ನಿಮ್ಮ ಆತ್ಮವಿಶ್ವಾಸದ ಜೊತೆಗೆ ನಿಮ್ಮ ಪ್ರತಿಭೆಗೆ ತಕ್ಕ ಫಲವು ದೊರಕಬಹುದು
- ನಿಮ್ಮ ಪ್ರತಿಭೆಯನ್ನ ವೈಯಕ್ತಿಕ ಲಾಭಕ್ಕಿಂತ ಸಮಾಜ ಸೇವೆಗೆ ಉಪಯೋಗಿಸಿ
- ರಾಜಕೀಯ ವ್ಯಕ್ತಿಗಳ ಹಾಗೂ ಗಣ್ಯರ ಬೆಂಬಲ ಹೆಚ್ಚಾಗಬಹುದು
- ಗಣಪತಿಯನ್ನು ಪ್ರಾರ್ಥನೆ ಮಾಡಿ
ವೃಶ್ಚಿಕ
/newsfirstlive-kannada/media/post_attachments/wp-content/uploads/2023/06/Vruschika_Bhavishya_Eedina_Astorology_Horoscope_RashiBhavishya_newsfirstkannada.jpg)
- ಮಾಂತ್ರಿಕವಾದ ದೋಷ ನಿಮ್ಮನ್ನು ಮತ್ತು ಕುಟುಂಬವನ್ನು ಕಾಡಬಹುದು
- ಈ ದಿನ ಪ್ರಯಾಣಕ್ಕೆ ಒಳ್ಳೆಯ ದಿನ
- ಪ್ರೇಯಸಿಯೊಂದಿಗೆ ನಿಮ್ಮ ಪ್ರಯಾಣ ಆನಂದವಾಗಿರುತ್ತದೆ
- ಈ ರಾಶಿಯ ಸ್ತ್ರೀಯರು ಷೇರು ಮಾರುಕಟ್ಟೆಯಲ್ಲಿ ಹಣವನ್ನು ತೊಡಗಿಸಿ ಲಾಭ ಪಡೆಯುತ್ತಾರೆ
- ಹಳೆಯ ಷೇರುಗಳಿದ್ದರೆ ಇಂದು ಉತ್ತಮ ಬೆಲೆಗೆ ಮಾರಾಟ ಮಾಡಬಹುದು
- ಸಂಪತ್ ಲಕ್ಷ್ಮೀಯನ್ನು ಪ್ರಾರ್ಥಿಸಿ
ಧನಸ್ಸು
/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಚಿಕ್ಕಮಕ್ಕಳ ಆರೋಗ್ಯದಲ್ಲಿ ಏರುಪೇರು ಸಾಧ್ಯತೆ ಗಮನವಿರಲಿ
- ವ್ಯಾಪಾರ - ವ್ಯವಹಾರಗಳಲ್ಲಿ ತಪ್ಪು ಸಂಭವಿಸಬಹುದು
- ಸ್ನೇಹಿತರು ನಿಮ್ಮನ್ನು ವ್ಯವಹಾರದಿಂದ ಹೊರಗಿಟ್ಟು ರಹಸ್ಯವಾಗಿ ವ್ಯವಹರಿಸುತ್ತಾರೆ
- ನೀವು ವ್ಯವಕಾರವನ್ನ ರದ್ದು ಮಾಡಬಹುದು
- ಸ್ವಯಂವರ ಪಾರ್ವತಿಯನ್ನು ಆರಾಧನೆ ಮಾಡಿ
ಮಕರ
/newsfirstlive-kannada/media/post_attachments/wp-content/uploads/2023/06/Makara_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮಗೆಲ್ಲಾ ಇದ್ರೂ ಏನೋ ಮಾಡಲು ಹೋಗಿ ಬೇಡವಾದದ್ದನ್ನು ಗಂಟು ಹಾಕಿಕೊಳ್ಳುತ್ತೀರಿ
- ನಿಮ್ಮ ಕಾರ್ಯಕ್ಷೇತ್ರದಲ್ಲಿರುವ ಚಿಂತನೆ, ಯೋಜನೆಗಳಾಗಲಿ ಯಾರಿಗೂ ಸರಿಯಾಗಿ ಅರ್ಥವಾಗೋದಿಲ್ಲ
- ನಿಮಗೆ ಯಾರ ಸಹಕಾರವೂ ಸರಿಯಾಗಿ ಸಿಗುವುದಿಲ್ಲ
- ನಿಮ್ಮಿಂದ ಹಲವಾರು ಜನ ಉಪಕಾರ ಪಡೆದು ನಿಮ್ಮ ಸ್ವಭಾವಕ್ಕೆ ಬೇಸತ್ತು ದೂರವಾಗುತ್ತಾರೆ
- ನಿಮ್ಮ ಕುಲದೇವಿಯನ್ನು ದ್ರವ್ಯದಿಂದ ಆರಾಧಿಸಿ
ಕುಂಭ
/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿವಾಹದ ದೃಷ್ಟಿಯಿಂದ ನಿಮ್ಮ ಬಂಧುಗಳು ಹೊಸ ಸಂಬಂಧ ಬೆಳೆಸಬಹುದು
- ನಿಮ್ಮ ಮಾತು ಇಂದು ಬಹಳ ಮುಖ್ಯವಾಗಿರುತ್ತದೆ
- ಈ ದಿನ ನಿಮ್ಮ ಹಣದ ಸ್ಥಿತಿ ಸುಧಾರಿಸುತ್ತದೆ
- ಏಕ ರಾಶಿ, ಏಕ ನಕ್ಷತ್ರದಲ್ಲಿರುವ ದಂಪತಿಗಳು ಇವತ್ತಿನ ಮಾತುಕತೆಗೆ, ವ್ಯವಹಾರಕ್ಕೆ ಕೇಂದ್ರ ಬಿಂದುವಾಗಿರುತ್ತೀರಿ
- ದುರ್ಗಾ ದೇವಿಯ ಪ್ರಾರ್ಥನೆ ಮಾಡಿ
ಮೀನ
/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಚರ್ಮರೋಗಕ್ಕೆ ಸಂಬಂಧಿಸಿದ ವ್ಯಕ್ತಿಗಳು ಜಾಗರೂಕರಾಗಿರಬೇಕು
- ನಿಮ್ಮ ಚರ್ಮರೋಗ ಹೆಚ್ಚಾಗುವ ಸೂಚನೆಗಳಿವೆ
- ವೈದ್ಯರು ಹೇಳಿದ ಪಥ್ಯಗಳನ್ನು ಶಿಸ್ತಿನಿಂದ ಪಾಲಿಸಬೇಕು
- ಸರ್ಕಾರಿ ಉದ್ಯೋಗಿಗಳಿಗೆ ಶುಭದಿನ ಆನಂದವಾಗಿರುತ್ತೀರಿ
- ಚರ್ಮರೋಗಿಗಳು ಅಮೃತಬಳ್ಳಿ ಎಲೆಗಳನ್ನು ಸೇವಿಸಿ
- ವಿಷ್ಣುವನ್ನು ಆರಾಧಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us