Advertisment

‘ನನ್ನ ಕೋಪಕ್ಕೆ ಬಲಿ ಆಗ್ಬೇಡಿ, ಹೇಳಿದಂತೆ ಮಾಡಿ’- ಜಗ್ಗೇಶ್, ದೊಡ್ಡಣ್ಣ ಮುಂದೆ ಚಿತ್ರರಂಗಕ್ಕೆ ನಾಗದೇವರು ವಾರ್ನಿಂಗ್!

author-image
Veena Gangani
Updated On
‘ನನ್ನ ಕೋಪಕ್ಕೆ ಬಲಿ ಆಗ್ಬೇಡಿ, ಹೇಳಿದಂತೆ ಮಾಡಿ’- ಜಗ್ಗೇಶ್, ದೊಡ್ಡಣ್ಣ ಮುಂದೆ ಚಿತ್ರರಂಗಕ್ಕೆ ನಾಗದೇವರು ವಾರ್ನಿಂಗ್!
Advertisment
  • ಇಂದು ಏಳೆಂಟು ಪುರೋಹಿತರಿಂದ ನಡೆಸಲಾಗುತ್ತಿರೋ ಹೋಮ ಹವನ
  • ​ನಿಮ್ಮಲ್ಲಿ ಒಗ್ಗಟ್ಟು ಉಂಟಾ? ಇಷ್ಟು ಮಾಡಿದ್ರೂ ಎಲ್ಲರೂ ಒಟ್ಟಾಗಿ ಸೇರಿಲ್ಲ!
  • ಕಲಾವಿದರ ಸಂಘದಲ್ಲಿ ನಡೆಯುತ್ತಿರೋ ಪೂಜೆಯಲ್ಲಿ ನಟ ನಟಿಯರು ಭಾಗಿ

ಬೆಂಗಳೂರು: ಇಂದು ಕನ್ನಡ ಚಿತ್ರರಂಗದ ಒಳಿತಿಗಾಗಿ ವಿಶೇಷ ಪೂಜೆ, ಹೋಮ ಹವನ ನಡೆಯುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ಚಿತ್ರರಂಗದಲ್ಲಿ ಸಾಕಷ್ಟು ಸಮಸ್ಯೆಗಳು ಆಗುತ್ತಿರೋದ್ರಿಂದ ಪರಿಹಾರ ಕಂಡುಕೊಳ್ಳಲು ಕಲಾವಿದರ ಸಂಘ ಹೋಮ ಹವನ ಮಾಡ್ತಿದೆ. ಇಂಡಸ್ಟ್ರಿಯ ಒಗ್ಗಟ್ಟು, ಥಿಯೇಟರ್ ಸಮಸ್ಯೆ, ನಿರ್ಮಾಪಕರ ಸಮಸ್ಯೆ ನಿವಾರಣೆಗಾಗಿ ಪೂಜೆ ಮಾಡಲಾಗುತ್ತಿದೆ.

Advertisment

ಇದನ್ನೂ ಓದಿ: ಸ್ಯಾಂಡಲ್‌ವುಡ್‌ ಕಲಾವಿದರ ಸಂಘದ ಪೂಜೆ ಬಳಿಕ ದರ್ಶನ್ ಭೇಟಿಗೆ ಹೊರಟ ಅಭಿಷೇಕ್, ಧನ್ವೀರ್‌, ಚಿಕ್ಕಣ್ಣ!

ಇದನ್ನೂ ಓದಿ:ದೇವರ ಮೊರೆ ಹೋದ ಕನ್ನಡ ಚಿತ್ರರಂಗ.. ಕಲಾವಿದರ ಸಂಘದಲ್ಲಿ ವಿಶೇಷ ಹೋಮ, ಹವನ..!

publive-image

ನಾಗದರ್ಶನ ವೇಳೆ ಹಿರಿಯ ನಟ ದೊಡ್ಡಣ್ಣ ಹಾಗೂ ರಾಕ್ ಲೈನ್ ವೆಂಕಟೇಶ್ ಪ್ರಶ್ನೆ ಮಾಡಿದ್ದಾರೆ. ಆಗ ನಾಗದರ್ಶನದ ನಂತರ ನಾಗದರ್ಶಕ ಪ್ರಶ್ನೆ ಕೇಳಿದ್ದಾರೆ. ಇದೇ ವೇಳೆ ನಾಗದೇವರು ದೊಡ್ಡಣ್ಣ, ಜಗ್ಗೇಶ್, ವೆಂಕಟೇಶ್ ಮುಂದೆ ತಪ್ಪುಗಳ ಪಟ್ಟಿಕೊಟ್ಟಿದ್ದಾರೆ.

Advertisment

ನಾಗ ದೇವರು ಹೇಳಿದ್ದೇನು..?

ನಿಮ್ಮಲ್ಲಿ ಒಗ್ಗಟ್ಟು ಉಂಟಾ? ಇಷ್ಟು ಮಾಡಿದ್ರೂ ಎಲ್ಲರೂ ಒಟ್ಟಾಗಿ ಸೇರಿಲ್ಲ. ನನ್ನನ್ನು ಭಯ ಪಟ್ಟು ಪೂಜಿಸಬೇಡಿ. ಪ್ರೀತಿಯಿಂದ ಗೆಲ್ಲಿ. ಈ ಜಾಗದ ಪಾವಿತ್ರ್ಯತೆ ಹಾಳು ಮಾಡ್ಬೇಡಿ. ಈ ಕಲಾವಿದರ ಸಂಘದಲ್ಲಿ ನೀವು ಏನು ಮಾಡ್ತಿದ್ದೀರಿ. ಇದು ಶಾರದೆಯ ಸ್ಥಳ. ಆಡಂಬರ ನನಗೆ ಬೇಡ. ಈ ಸ್ಥಳದಲ್ಲಿ ಧರ್ಮದ ಕಾರ್ಯಗಳು ನಡೀತಿದ್ವು. ದೇವರ ಕಾರ್ಯ ಅಲ್ಲ. ಇಲ್ಲಿ ಹುಟ್ಟುಹಬ್ಬ ಆಚರಿಸುತ್ತಿದ್ದೀರಿ ಅದು ಸರಿಯಲ್ಲ. ಇದೆಲ್ಲವನ್ನೂ ಸರಿಪಡಿಸಿಕೊಳ್ಳಿ. ದೊಡ್ಡ ಮಟ್ಟದ ಕೆಲಸಗಳು ಆಗ್ಬೇಕು ಇಲ್ಲಿ. ಹಿಂದೆ ನಡೆದಿರುವಂತೆ ಎಲ್ಲಾ ಹಿರಿಯರು ಇಲ್ಲಿ ಸೇರುವಂತೆ ಆಗ್ಬೇಕು. ಎಲ್ಲರೂ ಒಗ್ಗಟ್ಟಾಗಿ ನಿಲ್ಲಿ. ದಿನ ಇಲ್ಲಿ ದೀಪ ಬೆಳಗಿಸಿ. ಶತ್ರು ನಾಶ, ಅಪಕೀರ್ತಿ ಎಲ್ಲವೂ ದೂರಾಗುತ್ತೆ. ನನ್ನ ಕೋಪಕ್ಕೆ ಬಲಿ ಆಗಬೇಡಿ. ನಾನು ಹೇಳಿದಂತೆ ಮಾಡಿ. ಇಲ್ಲವಾದರೇ ನನ್ನ ಕೋಪಕ್ಕೆ ಗುರಿ ಆಗ್ತೀರಾ ಎಂದು ಎಚ್ಚರಿಕೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment