Advertisment

ಕನ್ನಡದ ಪತ್ರಕರ್ತ, ಕ್ರೈಂ ಗಣೇಶ್‌ ಇನ್ನಿಲ್ಲ; ಅಗಲಿದ ಗೆಳೆಯನಿಗೆ ಗಣ್ಯರಿಂದ ಭಾವಪೂರ್ಣ ನಮನ

author-image
admin
Updated On
ಕನ್ನಡದ ಪತ್ರಕರ್ತ, ಕ್ರೈಂ ಗಣೇಶ್‌ ಇನ್ನಿಲ್ಲ; ಅಗಲಿದ ಗೆಳೆಯನಿಗೆ ಗಣ್ಯರಿಂದ ಭಾವಪೂರ್ಣ ನಮನ
Advertisment
  • ಕನ್ನಡ ಪತ್ರಿಕಾರಂಗದಲ್ಲಿ ಕ್ರೈಂ ಗಣೇಶ್‌ ಎಂದೇ ಗುರುತಿಸಿಕೊಂಡಿದ್ದರು
  • 20 ವರ್ಷಗಳಿಂದ ಕನ್ನಡ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಗಣೇಶ್ ಜಿ. ಇನ್ನಿಲ್ಲ
  • ಯುವ ಪತ್ರಕರ್ತರಿಗೆ ಪ್ರೀತಿಯ ಮಾತು ಹಾಗೂ ಪ್ರೋತ್ಸಾಹ ನೀಡುತ್ತಿದ್ದರು

ಬೆಂಗಳೂರು: ಕನ್ನಡ ಪತ್ರಿಕಾರಂಗದಲ್ಲಿ ಕ್ರೈಂ ಗಣೇಶ್‌ ಎಂದೇ ಗುರುತಿಸಿಕೊಂಡಿದ್ದ ಪತ್ರಕರ್ತ ಗಣೇಶ್‌ ಇಹಲೋಕ ತ್ಯಜಿಸಿದ್ದಾರೆ. ಹಸನ್ಮುಖಿ ಗೆಳೆಯ, ಪರೋಪಕಾರಿ ಗುಣ, ಶಾಂತ ಸ್ವಭಾವದ ಕ್ರೈಂ ಗಣೇಶ್ ಯಾರೊಂದಿಗೂ ದ್ವೇಷ ಕಟ್ಟಿ ಕೊಂಡವರಲ್ಲ. ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದ ಗಣೇಶ್ ಅವರು ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದರು. ಆದರೆ ಇಂದು ಗಣೇಶ್ ಜಿ. ಸಾವಿನ ಮುಂದೆ ಮಂಡಿಯೂರಿದ್ದಾರೆ.

Advertisment

ಕಳೆದ 20 ವರ್ಷಗಳಿಂದ ಕನ್ನಡ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ನಗರದ ಜೈನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

publive-image

ಮೂಲತಃ ಮಾಗಡಿ ತಾಲೂಕಿನ ತಾಳೆಕೆರೆಯ ಗಂಗಯ್ಯ ಮತ್ತು ಕೆಂಪಮ್ಮ ದಂಪತಿ ಪುತ್ರರಾಗಿದ್ದ ಗಣೇಶ್‌ ಅವರು ಪತ್ನಿ ಪಾರ್ವತಮ್ಮ ಹಾಗೂ ಪುತ್ರನನ್ನು ಅಗಲಿದ್ದಾರೆ. ಇಂದು ಅವರ ಮೃತದೇಹವನ್ನು ತಾಳೆಕೆರೆಗೆ ಕೊಂಡೊಯ್ದು ಗುಡ್ಡೆ ರಂಗನಾಥಸ್ವಾಮಿ ಗುಡಿ ರಸ್ತೆಯಲ್ಲಿರುವ ಅವರ ಜಮೀನಿನಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು.

ಕಸ್ತೂರಿ ಟಿವಿ ಮೂಲಕ ಕಸ್ತೂರಿ ಗಣೇಶ್‌ ಎಂದು ಪರಿಚಿತರಾಗಿದ್ದ ಗಣೇಶ್‌ ಅವರ ಕ್ರೈಂ ವರದಿಗಾರಿಕೆಯಲ್ಲಿ ನಿಪುಣರಾಗಿದ್ದರು. ಅವರ ಮಾರ್ಗದರ್ಶನದಲ್ಲಿ ಇಂದು ಹಲವಾರು ಯುವ ಪತ್ರಕರ್ತರು ಯಶಸ್ವಿ ಪತ್ರಕರ್ತರಾಗಿ ವಿವಿಧ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

Advertisment

ಕಸ್ತೂರಿ, ನ್ಯೂಸ್‌‍ 18, ಪ್ರಜಾ ಟಿವಿಗಳಲ್ಲಿ ಸೇವೆ ಸಲ್ಲಿಸಿದ್ದ ಗಣೇಶ್‌ ಅವರು ಪ್ರಸ್ತುತ ಟಿವಿ 5ನಲ್ಲಿ ಇನ್‌ಪುಟ್‌ ಚೀಫ್‌ ಅಗಿ ಸೇವೆ ಸಲ್ಲಿಸುತ್ತಿದ್ದರು. ಅಪರಾಧ ಜಗತ್ತಿನ ಸುದ್ದಿಯನ್ನು ರೋಚಕವಾಗಿ ವರದಿ ಮಾಡುತ್ತಿದ್ದ ಗಣೇಶ್ ಜಿ. ಯುವ ಪತ್ರಕರ್ತರಿಗೆ ಪ್ರೀತಿಯ ಮಾತು ಹಾಗೂ ಪ್ರೋತ್ಸಾಹ ನೀಡುತ್ತಿದ್ದರು.

ಗಣೇಶ್‌ ಅವರ ನಿಧನಕ್ಕೆ ಕರ್ನಾಟಕ ಪತ್ರಕರ್ತರ ಸಹಕಾರ ಸಂಘ, ಪ್ರೆಸ್‌‍ ಕ್ಲಬ್‌, ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ವರದಿಗಾರರ ಕೂಟ ಕಂಬನಿ ಮಿಡಿದಿದೆ. ಅದೇ ರೀತಿ ಹಲವಾರು ಗಣ್ಯರು, ಹಿರಿಯ ಪೊಲೀಸ್‌‍ ಅಧಿಕಾರಿಗಳು ಗಣೇಶ್‌ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment