ಕನ್ನಡ ಕೋಗಿಲೆ ಸಿಂಗರ್​ ಅಖಿಲಾ ಪಜಿಮಣ್ಣು ದಾಂಪತ್ಯದಲ್ಲಿ ಬಿರುಕು.. ಡಿವೋರ್ಸ್​ಗೆ ಅರ್ಜಿ

author-image
Bheemappa
Updated On
ಕನ್ನಡ ಕೋಗಿಲೆ ಸಿಂಗರ್​ ಅಖಿಲಾ ಪಜಿಮಣ್ಣು ದಾಂಪತ್ಯದಲ್ಲಿ ಬಿರುಕು.. ಡಿವೋರ್ಸ್​ಗೆ ಅರ್ಜಿ
Advertisment
  • ಮುರಿದು ಬಿದ್ದ ಗಾಯಕಿ ಅಖಿಲಾ ಪಜಿಮಣ್ಣು ದಾಂಪತ್ಯ ಜೀವನ
  • ಡಿವೋರ್ಸ್ ಅರ್ಜಿ ಬೆನ್ನಲ್ಲೇ ಪತಿ ಫೋಟೋಸ್ ಡಿಲೀಟ್
  • ಇಬ್ಬರ ನಡುವೆ ಏನಾಗ್ತಿದೆ ಎನ್ನುವಾಗ ಡಿವೋರ್ಸ್​ಗೆ ಅರ್ಜಿ

ರಿಯಾಲಿಟಿ ಶೋ ಕನ್ನಡ ಕೋಗಿಲೆ ಸೀಸನ್​ 1 ಮತ್ತು 2ನೇ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿದ್ದ ಗಾಯಕಿ ಅಖಿಲಾ ಪಜಿಮಣ್ಣು ತಮ್ಮ ಧ್ವನಿಯಿಂದಲೇ ಕನ್ನಡ ನಾಡಿನ ಮನೆ ಮಾತಾಗಿದ್ದರು. ಸದ್ಯ ಇದೀಗ ಇವರ ದಾಂಪತ್ಯ ಜೀವನದಲ್ಲಿ ಒಡಕು ಮೂಡಿದೆ ಎನ್ನಲಾಗಿದೆ.

publive-image

ಗಾಯಕಿ ಅಖಿಲಾ ಪಜಿಮಣ್ಣು ಹಾಗೂ ಇವರ ಗಂಡ ಧನಂಜಯ್ ಶರ್ಮಾ ಅವರು ಡಿವೋರ್ಸ್​ ಪಡೆಯಲು ಮುಂದಾಗಿದ್ದಾರೆ. ಈ ಸಂಬಂಧ ಜೂನ್ 12 ರಂದು ಪುತ್ತೂರು ನ್ಯಾಯಾಲಯದಲ್ಲಿ ವಿವಾಹ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ಈ ಜೋಡಿ ಬೇರೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಅಖಿಲಾ ಪಜಿಮಣ್ಣು ಹಾಗೂ ಧನಂಜಯ್ ಶರ್ಮಾ ಎರಡು ಕುಟುಂಬದವರ ಒಪ್ಪಿಗೆ ಪಡೆದು ಗುರು, ಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇಷ್ಟು ದಿನ ಸಂತಸದಲ್ಲಿದ್ದ ಈ ದಾಂಪತ್ಯ ಜೀವನದಲ್ಲಿ ಏನಾಯಿತೋ ಗೊತ್ತಿಲ್ಲ. ಆದರೆ ಇವರು ದೂರವಾಗುತ್ತಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ ಎನ್ನಬಹುದು.

ಇದನ್ನೂ ಓದಿ:ತೃತೀಯ ಲಿಂಗಿ ಆಗಿದ್ದ ಮಾಜಿ ಕ್ರಿಕೆಟರ್​ನ ಮಗ.. ಮಹಿಳಾ ತಂಡದಲ್ಲಿ ಚಾನ್ಸ್​ ಕೊಡಿ ಅಂತ ಒತ್ತಾಯ!

publive-image

ಧನಂಜಯ್ ಶರ್ಮಾ ಅವರು ಸಾಪ್ಟ್‌ವೇರ್ ಇಂಜಿನಿಯರ್ ಆಗಿದ್ದು ಅಮೆರಿಕದಲ್ಲಿ ವಾಸವಿದ್ದರು. ವಿವಾಹದ ನಂತರವೂ ಪತಿಯೊಂದಿಗೆ ಅಖಿಲಾ ಅಮೆರಿಕಗೆ ತೆರಳಿದ್ದರು. ಅಮೆರಿಕದಲ್ಲಿ ಇದ್ದರೂ ಅಖಿಲಾ ಪಜಿಮಣ್ಣು ಸೋಶಿಯಲ್ ಮೀಡಿಯಾದ ಫುಲ್ ಆಕ್ಟಿವ್ ಆಗಿದ್ದರು. ಗಂಡನ ಜೊತೆಗಿರುವ ಫೋಟೋಸ್​ ಶೇರ್ ಮಾಡುತ್ತಿದ್ದರು. ಆದರೆ ಈಗ ಫೋಟೋಗಳನ್ನು ಡಿಲೇಟ್ ಮಾಡಿ ಡಿವೋರ್ಸ್​ಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment