ಅಖಿಲಾ ಪಜಿಮಣ್ಣು ದಾಂಪತ್ಯದಲ್ಲಿ ಬಿರುಕು.. ಡಿವೋರ್ಸ್ ಅರ್ಜಿ ಬೆನ್ನಲ್ಲೇ ಪತಿ ಜೊತೆಗಿರೋ ಫೋಟೋಸ್ ಡಿಲೀಟ್

author-image
Veena Gangani
Updated On
ಅಖಿಲಾ ಪಜಿಮಣ್ಣು ದಾಂಪತ್ಯದಲ್ಲಿ ಬಿರುಕು.. ಡಿವೋರ್ಸ್ ಅರ್ಜಿ ಬೆನ್ನಲ್ಲೇ ಪತಿ ಜೊತೆಗಿರೋ ಫೋಟೋಸ್ ಡಿಲೀಟ್
Advertisment
  • ಕನ್ನಡದ ಸ್ಟಾರ್ ಗಾಯಕಿ ಅಖಿಲಾ ಪಜಿಮಣ್ಣು ದಾಂಪತ್ಯದಲ್ಲಿ ಬಿರುಕು
  • ಡಿವೋರ್ಸ್ ಅರ್ಜಿ ಬೆನ್ನಲ್ಲೇ ಪತಿ ಜೊತೆಗಿರೋ ಫೋಟೋ ಡಿಲೀಟ್
  • ತಮ್ಮ ಅದ್ಭುತ ಕಂಠದಿಂದಲೇ ಮನೆ ಮಾತಾಗಿದ್ದ ಅಖಿಲಾ ಪಜಿಮಣ್ಣು

ಕನ್ನಡ ಕೋಗಿಲೆ ಸೀಸನ್​ 1 ಮತ್ತು 2ನೇ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿದ್ದ ಗಾಯಕಿ ಅಖಿಲಾ ಪಜಿಮಣ್ಣು ತಮ್ಮ ಅದ್ಭುತ ಕಂಠದಿಂದಲೇ ಮನೆ ಮಾತಾಗಿದ್ದರು. ಆದ್ರೆ ಗಾಯಕಿ ಅಖಿಲಾ ಪಜಿಮಣ್ಣು ಅಭಿಮಾನಿಗಳಿಗೆ ಇದು ಶಾಕಿಂಗ್​ ಸುದ್ದಿ ಅಂತಲೇ ಹೇಳಬಹುದು.

ಇದನ್ನೂ ಓದಿ:ಸಿಎಂ ತವರಿನಲ್ಲಿ ಅಮಾನವೀಯ ಕೃತ್ಯ.. 1280 ರೂ ಕಟ್ಟಿಲ್ಲ ಅಂತಾ 7 ವರ್ಷದ ಹೆಣ್ಣು ಮಗಳ ಹೊತ್ತೊಯ್ದ ಫೈನಾನ್ಸ್ ಸಿಬ್ಬಂದಿ

publive-image

ಹೌದು, ಗಾಯಕಿ ಅಖಿಲಾ ಪಜಿಮಣ್ಣು ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ಅಖಿಲಾ ಪಜಿಮಣ್ಣು ಅವರು ಡಿವೋರ್ಸ್ ಅರ್ಜಿ ಮಾಡಿರುವ ಸುದ್ದಿ ವೈರಲ್ ಆಗಿದೆ. ಮೂರು ವರ್ಷಗಳ ಹಿಂದೆ ಅಖಿಲಾ ಅವರು ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಈಗ ಅವರ ಡಿವೋರ್ಸ್ ಅರ್ಜಿ ವಿಚಾರ ಎಲ್ಲರಿಗೂ ಶಾಕ್ ಕೊಟ್ಟಿದೆ.

publive-image

ಅಷ್ಟೇ ಅಲ್ಲದೆ ಡಿವೋರ್ಸ್ ಅರ್ಜಿ ವಿಚಾರ ವೈರಲ್ ಆದ ಬಳಿಕ ಅಖಿಲ ಪಜಿಮಣ್ಣು ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಿಂದ ಪತಿಯ ಜೊತೆಗೆ ಇದ್ದ ಫೋಟೋಸ್ ಡಿಲೀಟ್ ಮಾಡಿದ್ದಾರೆ. ಆದರೆ ತಮ್ಮ ಮದುವೆ ಫೋಟೋ ಹಾಗೂ ಕುಟುಂಬದ ಜೊತೆಗೆ ಇರೋ ಎರಡು ಫೋಟೋವನ್ನು ಮಾತ್ರ ಡಿಲೀಟ್ ಮಾಡಿಲ್ಲ.

ಇದನ್ನೂ ಓದಿ:ಕನ್ನಡ ಕೋಗಿಲೆ ಸಿಂಗರ್​ ಅಖಿಲಾ ಪಜಿಮಣ್ಣು ದಾಂಪತ್ಯದಲ್ಲಿ ಬಿರುಕು.. ಡಿವೋರ್ಸ್​ಗೆ ಅರ್ಜಿ

publive-image

ಇನ್ನೂ, ಗಾಯಕಿ ಅಖಿಲಾ ಪಜಿಮಣ್ಣು ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ 2021ರ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದಾದ 2022ರಲ್ಲಿ ಧನಂಜಯ್ ಶರ್ಮ ಎಂಬುವವರ ಜೊತೆಗೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಗಾಯಕಿ ಅಖಿಲಾ ಅವರು 23 ವರ್ಷಕ್ಕೆ ಮದುವೆಯಾಗಿ ಪತಿಯೊಂದಿಗೆ ವಿದೇಶದಲ್ಲಿ ವಾಸವಾಗಿದ್ದರು. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಌಕ್ಟೀವ್​ ಆಗಿರೋ ಗಾಯಕಿ ಆಗಾಗ ಪತಿ ಜೊತೆಗೆ ಕ್ಲಿಕ್ಕಿಸಿಕೊಂಡಿರೋ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದರು. ಆದ್ರೆ ಆದ್ರೆ ತಮ್ಮ 26 ವರ್ಷಕ್ಕೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment