/newsfirstlive-kannada/media/post_attachments/wp-content/uploads/2025/04/Dhanya-Deepika1.jpg)
ಈಗಲೂ ವೀಕ್ಷಕರ ಮನಸ್ಸಲ್ಲಿ ಹಚ್ಚ ಹಸಿರಾಗಿ ಉಳಿದುಕೊಂಡಿದೆ ಕುಲವಧು ಧಾರಾವಾಹಿ. ಈ ಸೀರಿಯಲ್ ಮೂಲಕವೇ ಅತಿ ಹೆಚ್ಚು ಫೇಮಸ್ ಆಗಿದ್ದ ನಟಿ ಎಂದರೆ ಅದು ದೀಪಿಕಾ. ಸೀರಿಯಲ್ ಮುಗಿದರೂ ಅಭಿಮಾನಿಗಳು ಇವರನ್ನು ಧನ್ಯಾ ಅಂತಲೇ ಗುರುತಿಸುತ್ತಾರೆ. ಅಷ್ಟರ ಮಟ್ಟಗೆ ಕುಲವಧು ಸೀರಿಯಲ್ ನಟಿ ದೀಪಿಕಾಗೆ ಹೆಸರನ್ನು ತಂದು ಕೊಟ್ಟಿದೆ.
ಇದನ್ನೂ ಓದಿ: ರಾಮಾಚಾರಿ ಸೀರಿಯಲ್ ಚಾರು ಸೀರೆ ಮೇಲೆ ಹೆಣ್ಮಕ್ಕಳ ಕಣ್ಣು; ನಟಿ ಮೌನ ಗುಡ್ಡೆಮನೆ ಕಲೆಕ್ಷನ್ ನೋಡಿ!
ನಟಿ ದೀಪಿಕಾ ಅವರು ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಸೇವಂತಿಯಲ್ಲಿ ನಾಯಕಿ ಸೇವಂತಿ ಆಗಿ ಅಭಿನಯಿಸಿದ್ದರು. ಆಕಸ್ಮಿಕವಾಗಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟು ಅಭಿಮಾನಿಗಳ ಮನಸ್ಸನ್ನು ಗೆದ್ದುಕೊಂಡಿದ್ದಾರೆ. ಕುಲವಧು ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ನಟಿ ದೀಪಿಕಾ ಸದ್ಯ ಸೆಲೆಬ್ರಿಟಿಗಳಿಗೆ ಮೇಕಪ್ ಮಾಡುತ್ತಿದ್ದಾರೆ.
ಇದೀಗ ಬಿಗ್ಬಾಸ್ ಸೀಸನ್ 11ರ ಸ್ಪರ್ಧಿಯಾಗಿದ್ದ ಚೈತ್ರಾ ಕುಂದಾಪುರ ಅವರಿಗೆ ನಟಿ ದೀಪಿಕಾ ಮೇಕಪ್ ಮಾಡಿದ್ದಾರೆ. ಇದೇ ವಿಡಿಯೋ ನೋಡಿದ ಅಭಿಮಾಗಳು, ಧನ್ಯಾ ಅವರ ಮೇಕಪ್ ಕೌಶಲ್ಯಕ್ಕೆ ಬಗ್ಗೆ ಹಾಡಿ ಹೊಗಳುತ್ತಿದ್ದಾರೆ. ಅಷ್ಟೇ ಅಲ್ಲದೇ ನಟಿ ದೀಪಿಕಾ ಶಾಸ್ತ್ರೋಕ್ತವಾಗಿ ನೃತ್ಯವನ್ನು ಕಲೆತ್ತಿದ್ದಾರೆ. ಹತ್ತು ಹಲವು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದರು.
View this post on Instagram
ಸದ್ಯ ನಟಿ ತಮ್ಮ ಇನ್ಸ್ಟಾದಲ್ಲಿ ಚೈತ್ರಾ ಕುಂದಾಪುರಗೆ ಮೇಕಪ್ ಮಾಡಿದ ವಿಡಿಯೋನ್ನು ಹಂಚಿಕೊಂಡ ವಿಡಿಯೋ 5.8 ಮಿಲಿಯನ್ ವೀವ್ಸ್ ಬಂದಿದೆ. ಅಲ್ಲದೇ ಕಾಮೆಂಟ್ಸ್ನಲ್ಲೂ ನಟಿ ಮಾಡುವ ಮೇಕಪ್ ಬಗ್ಗೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ