ಲಕ್ಷ್ಮೀ ನಿವಾಸ ಚೆಲುವಿ ಪಾತ್ರಕ್ಕೆ ಭಾರೀ ಡಿಮ್ಯಾಂಡ್.. 2 ಸೀರಿಯಲ್​​ನಲ್ಲೂ ಅಶ್ವಿನಿಗೆ ಬೇಡಿಕೆ!

author-image
Veena Gangani
Updated On
ಲಕ್ಷ್ಮೀ ನಿವಾಸ ಚೆಲುವಿ ಪಾತ್ರಕ್ಕೆ ಭಾರೀ ಡಿಮ್ಯಾಂಡ್.. 2 ಸೀರಿಯಲ್​​ನಲ್ಲೂ ಅಶ್ವಿನಿಗೆ ಬೇಡಿಕೆ!
Advertisment
  • ಲಕ್ಷ್ಮೀ ನಿವಾಸ ಸೀರಿಯಲ್​ ಮೂಲಕ ಫೇಮಸ್ ಆಗಿದ್ದಾರೆ ನಟಿ ಅಶ್ವಿನಿ
  • ವೆಂಕಿ ಜೊತೆಗೆ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದಾಳೆ ಚೆಲುವಿ
  • ವೆಂಕಿ- ಚೆಲ್ವಿ ಜೋಡಿಗೆ ವೀಕ್ಷಕರಂತೂ ಫುಲ್​ ಫಿದಾ ಆಗಿಬಿಟ್ಟಿದ್ದಾರೆ

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ವೆಂಕಿ ಪಾತ್ರ ವೀಕ್ಷಕರಿಗೆ ತುಂಬಾನೇ ಹತ್ತಿರವಾಗಿದೆ. ವೆಂಕಿಗೆ ಮಾತು ಬರೆದಿದ್ರೂ ಮನೆಯ ಜವಾಬ್ದಾರಿಗಳನ್ನ ತುಂಬಾ ಚನ್ನಾಗಿ ನಿರ್ವಹಿಸುತ್ತಿದ್ದಾನೆ. ಯಾರೇ ಎಷ್ಟೇ ಚುಚ್ಚು ಮಾತನಾಡಿದ್ರು ಸಿಹಿಸಿಕೊಂಡು ಕುಟುಂಬದ ಒಗ್ಗಟ್ಟಿಗೆ ಸದಾ ಹಂಬಲಿಸುತ್ತಿರುತ್ತಾನೆ.

ಇದನ್ನೂ ಓದಿ:19 ಕೋಟಿ ರೂ. ಖರ್ಚು ಮಾಡಿ ನಿರ್ಮಿಸಿದ ವಿಮಾನ ನಿಲ್ದಾಣ; ಇಲ್ಲಿ ವಿಮಾಣವೂ ಇಲ್ಲ, ಪ್ರಯಾಣಿಕರು ಇಲ್ಲ!

ಜೊತೆಗೆ ವೆಂಕಿ ಮದುವೆ ಆಗಿ ಚೆಲ್ವಿ ಅನ್ನೋ ಸುಂದರಿನ ಮನೆ ತುಂಬಿಸಿಕೊಂಡಿದ್ದಾನೆ. ವೆಂಕಿ-ಚೆಲ್ವಿ ಜೋಡಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಇನ್ನೂ, ಚೆಲ್ವಿ ಪಾತ್ರ ಮಾಡ್ತಿರೋದು ಅಶ್ವಿನ್​ ಆರ್ ಮೂರ್ತಿ​ ಅವರಿಗೆ ಆಫರ್​ವೊಂದು ಬಂದಿದೆ. ಇಷ್ಟು ದಿನ ಲಕ್ಷ್ಮೀ ನಿವಾಸ ಧಾರಾವಾಹಿ ಮೂಲಕ ಮಿಂಚುತ್ತಿದ್ದ ಅಶ್ವಿನ್​ ಆರ್ ಮೂರ್ತಿ ತಮಿಳು ಭಾಷೆಯಲ್ಲಿ ರಿಮೇಕ್ ಆಗಿರುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಇದೇ ಚೆಲುವಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಎಂದರೆ ಗಟ್ಟಿಮೇಳಂ ಹೆಸರಿನಲ್ಲಿ ಧಾರಾವಾಹಿಯಲ್ಲೂ ಸೇಮ್​ ಪಾತ್ರದಲ್ಲಿ ನಟಿ ಅಭಿನಯಿಸುತ್ತಿದ್ದಾರೆ.

ಇನ್ನೂ, ಗಟ್ಟಿಮೇಳಂ ಧಾರಾವಾಹಿಯಲ್ಲಿ ಕನ್ನಡದ ಬಹುತೇಕ ಕಲಾವಿದರು ಅಭಿನಯಿಸುತ್ತಿದ್ದಾರೆ. ಪ್ರಮುಖವಾದ ಪಾತ್ರ ಅಂದ್ರೆ ಕನ್ನಡದಲ್ಲಿ ಭಾವನಾ ನಟಿಸುತ್ತಿದ್ದರೆ, ತಮಿಳಿನಲ್ಲಿ ಛಾಯಾ ಸಿಂಗ್ ಅಭಿನಯಿಸುತ್ತಿದ್ದಾರೆ. ಇನ್ನೂ ವೆಂಕಿ ಪಾತ್ರದಲ್ಲಿ ಅಮೃತಧಾರೆಯ ಆನಂದ್ ನಟಿಸುತ್ತಿದ್ದಾರೆ. ಇನ್ನು ವಿಶ್ವನ ತಾಯಿಯಾಗಿರುವ ಹಿರಿಯ ಕಲಾವಿದೆ ಕೂಡ ಗಟ್ಟಿಮೇಳಂನಲ್ಲಿ ಅದೇ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಇದೀಗ ತಮಿಳಿನ ಚೆಲುವಿಯಾಗಿ ಇದೇ ಅಶ್ವಿನಿ ಮೂರ್ತಿ ನಟಿಸುತ್ತಿದ್ದಾರೆ. ಈ ಮೂಲಕ ಒಂದೇ ಕಥೆಯುಳ್ಳ ಎರಡು ಭಾಷೆಯ ಧಾರಾವಾಹಿಯಲ್ಲಿ ಅಶ್ವಿನಿ ಮೂರ್ತಿ ನಟಿಸುತ್ತಿದ್ದಾರೆ. ತಮಿಳು ಧಾರಾವಾಹಿಯಲ್ಲಿ ಅಶ್ವಿನಿ ಮೂರ್ತಿ ನಟಿಸುತ್ತಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ಗಳು ವೈರಲ್ ಆಗುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment