/newsfirstlive-kannada/media/post_attachments/wp-content/uploads/2025/02/Rashmi-Prabhakar1.jpg)
ಕನ್ನಡ ಕಿರುತೆರೆಯಲ್ಲಿ ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ವೀಕ್ಷಕರ ಮನಸ್ಸು ಗೆದ್ದಿದ್ದ ನಟಿ ಎಂದರೆ ಅದು ನಟಿ ರಶ್ಮಿ ಪ್ರಭಾಕರ್. ಸದ್ಯ ನಟಿ ರಶ್ಮಿ ಪ್ರಭಾಕರ್ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ತುಂಬಾನೇ ಬ್ಯುಸಿಯಾಗಿದ್ದಾರೆ. ಆಗಾಗ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಹೊಸ ಫೋಟೋಸ್ಗಳನ್ನು ಶೇರ್ ಮಾಡಿಕೊಳುತ್ತಾ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿ ಇರುತ್ತಾರೆ.
ಇದನ್ನೂ ಓದಿ:ಚಿನ್ನಾಭರಣ ಕೊಳ್ಳುವವರಿಗೆ ಶಾಕಿಂಗ್ ನ್ಯೂಸ್.. ಬಜೆಟ್ 2025 ಬೆನ್ನಲ್ಲೇ ಬಂಗಾರದ ಬೆಲೆ ಏರಿಕೆ?
ಆದ್ರೆ ಇದರ ಮಧ್ಯೆ ನಟಿ ರಶ್ಮಿ ಪ್ರಭಾಕರ್ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಹೌದು ತಮ್ಮ ರಶ್ಮಿ ಪ್ರಭಾಕರ್ ಹಾಗೂ ಪತಿ ನಿಖಿಲ್ ಭಾರ್ಗವ್ ಹೊಚ್ಚ ಹೊಸ ಕಾರನ್ನು ಖರೀದಿ ಮಾಡಿದ್ದಾರೆ. ಹೊಸ ಕಾರನ್ನು ಖರೀದಿ ಮಾಡಿರೋ ಕಿರುತೆರೆ ನಟಿ ಮನೆಯಲ್ಲಿ ಸಂಭ್ರಮ ಕಲೆಗಟ್ಟಿದೆ.
ಇದೇ ಖುಷಿಯಲ್ಲಿ ನಟಿ ರಶ್ಮಿ ಪ್ರಭಾಕರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕಾರನ್ನು ಖರೀದಿ ಮಾಡಿದ್ದ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ನಟಿ ರಶ್ಮಿ ಪ್ರಭಾಕರ್ ಖರೀದಿ ಮಾಡಿರೋ Beast ಕಾರಿನ ಬೆಲೆಯೂ ಬರೋಬ್ಬರಿ 19 ಲಕ್ಷದ್ದಾಗಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಇದೇ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದೇ ವಿಡಿಯೋಗೆ ಕಿರುತೆರೆ ನಟ ನಟಿಯರು ಹಾಗೂ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
ನಟಿ ರಶ್ಮಿ ಪ್ರಭಾಕರ್ ಹಾಗೂ ಪತಿ ನಿಖಿಲ್ ಭಾರ್ಗವ್ ಜತೆ ಎರಡು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ನಿಖಿಲ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಸ್ವಲ್ಪ ಬಿಡುವು ಮಾಡಿಕೊಂಡು ದಂಪತಿ ಜಮ್ಮು ಕಾಶ್ಮೀರಕ್ಕೆ ಹೋಗಿದ್ದಾರೆ. ಅಲ್ಲಿನ ಅದ್ಭುತವಾದ ಸೌಂದರ್ಯವನ್ನು ಸವಿದು ಮಂಜಿನಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ.
View this post on Instagram
ಲಕ್ಷ್ಮೀ ಬಾರಮ್ಮ, ಜೀವನಚೈತ್ರ, ಶುಭವಿವಾಹ, ಮನಸೆಲ್ಲಾ ನೀನೇ ಸೇರಿದಂತೆ ಕನ್ನಡ ಹಾಗೂ ಪರಭಾಷೆಯ ಧಾರಾವಾಹಿಯಲ್ಲಿ ನಟಿಸಿರುವ ನಟಿ ರಶ್ಮಿ ಪ್ರಭಾಕರ್ 2022 ಏಪ್ರಿಲ್ 25ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬೆಂಗಳೂರಿನ ಕಲ್ಯಾಣಮಂಟಪವೊಂದರಲ್ಲಿ ಅವರು ನಿಖಿಲ್ ಎಂಬುವವರ ಜೊತ ಸಪ್ತಪದಿ ತುಳಿದಿದ್ದರು. ಇವರ ಮದುವೆಗೆ ನೇಹಾ ಗೌಡ, ಚಂದನ್ ಕುಮಾರ್, ಕವಿತಾ ಗೌಡ, ಕಾವ್ಯಾ ಶಾಸ್ತ್ರಿ ಮುಂತಾದವರು ಈ ಮದುವೆಯಲ್ಲಿ ಭಾಗಿಯಾಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ