/newsfirstlive-kannada/media/post_attachments/wp-content/uploads/2025/03/mahanti2.jpg)
ಉದಯೋನ್ಮುಖ ಪ್ರತಿಭೆಗಳಿಗೆ ಮಹಾನ್ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಮಹಾನಟಿ ಕಾರ್ಯಕ್ರಮವನ್ನು ಶುರು ಮಾಡಿತ್ತು ಜೀ ವಾಹಿನಿ. ಮೊದಲ ಆವೃತ್ತಿ ಅದ್ಭುತವಾದ ಯಶಸ್ಸು ಕಂಡ ಬೆನ್ನಲ್ಲೇ ಎರಡನೇ ಆವೃತ್ತಿ ಘೋಷಿಸಿದೆ ತಂಡ. ಹೌದು, ಮಹಾನಟಿ ವಿಭಿನ್ನ ಕಾನ್ಸೆಪ್ಟ್ ಜೊತೆಗೆ ಶುರುವಾದ ರಿಯಾಲಿಟಿ ಶೋ.
ನ್ನೂ ಓದಿ: ಒಂದೇ ಮನೆಯಲ್ಲಿ ನಾಲ್ವರ ದುರಂತ ಅಂತ್ಯ.. ವೈದ್ಯ ಕುಟುಂಬವೇ ಮಾಡಿಕೊಂಡ ಅನಾಹುತ; ಕಾರಣವೇನು?
ರಾಜ್ಯದ ಮೂಲೆ ಮೂಲೆಗಳಿಂದ ಅಭಿನಯದ ಮೇಲೆ ಆಸಕ್ತಿಯಿರೋ 16 ಜನ ಪ್ರತಿಭಾವಾಂತ ಹುಡುಗಿಯರನ್ನ ಪಿಕ್ ಮಾಡಲಾಗಿತ್ತು. ಅವರಿಗೆ ನಟನಾ ವಿಭಾಗದ ಹಲವು ಮಜಲುಗಳನ್ನ ಪ್ರ್ಯಾಕ್ಟಿಕಲ್ ಆಗಿ ಹೇಳಿ ಕೊಡಲಾಗಿತ್ತು. 16 ಸ್ಪರ್ಧಿಗಳಲ್ಲಿ ಕೊನೆಗೆ ಉಳಿದಿದ್ದು 5 ಸ್ಪರ್ಧಿಗಳು. ಅದರಲ್ಲಿ ಗಗನಾ, ಶ್ವೇತಾ ಭಟ್, ಧನ್ಯಶ್ರೀ, ಪ್ರಿಯಾಂಕಾ ಹಾಗೂ ಆರಾಧನ ಭಟ್ ಉಳಿದುಕೊಂಡಿದ್ದರು. ಆದರೆ ಈ ಐವರಲ್ಲಿ ಮಹಾನಟಿ ಪಟ್ಟ ಅಲಂಕರಿಸಿದ್ದು ಪ್ರಿಯಾಂಕಾ ಆಚಾರ್.
View this post on Instagram
ಸದ್ಯ 16 ಸ್ಪರ್ಧಿಗಳು ಸಿನಿಮಾ, ಧಾರಾವಾಹಿ ಸೇರಿದಂತೆ ರಿಯಾಲಿಟಿ ಶೋಗಳಲ್ಲಿ ಹೆಸರು ಮಾಡ್ತಿದ್ದಾರೆ. ನಟ ರಮೇಶ್ ಅರವಿಂದ್ , ನಿಶ್ವಿಕಾ, ಪ್ರೇಮಾ ಹಾಗೂ ನಿರ್ದೇಶಕ ತರುಣ್ ಸುಧೀರ್ ಮೆಂಟರಿಂಗ್ ಜೊತೆಗೆ ನಟನೆ ಬಗ್ಗೆ ಗೈಡ್ ಮಾಡಿದ್ರು. ಶೋ ಸೂಪರ್ ಹಿಟ್ ಆಗಿತ್ತು. ಈ ಯಶಸ್ಸಿನ ಬೆನ್ನಲ್ಲೆ ಎರಡನೇ ಆವೃತ್ತಿ ಅನೌನ್ಸ್ ಮಾಡಿದೆ ತಂಡ. ಸದ್ಯದಲ್ಲೇ ಮಹಾನಟಿ ಆ್ಯಡಿಷನ್ ಶುರುವಾಗಲಿದೆ. ಈ ಬಾರಿಯ ಮಹಾನಟಿ ಸೀಸನ್ 2ಕ್ಕೆ ಯಾರೆಲ್ಲಾ ಸುಂದರಿಯರು ಬರುತ್ತಾರೆ, ಒಂದು ಹೇಗೆ ಸೌಂಡ್ ಮಾಡುತ್ತಾರೆ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ