32 ಎಪಿಸೋಡ್​ಗೆ ಅಂತ್ಯ ಹಾಡಿದ ‘ಮಜಾ ಟಾಕೀಸ್‌’; ನಟ ಸೃಜನ್ ಲೋಕೇಶ್‌ ಭಾವುಕ ನುಡಿ..

author-image
Veena Gangani
Updated On
ಮಜಾ ಟಾಕೀಸ್​ ಮುಕ್ತಾಯದ ಬೆನ್ನಲ್ಲೇ ಗುಡ್ ನ್ಯೂಸ್ ಕೊಟ್ಟ ಸೃಜನ್ ಲೋಕೇಶ್‌; ಏನದು?
Advertisment
  • ಇಂದು ಮಜಾ ಟಾಕೀಸ್​ ಗ್ರ್ಯಾಂಡ್ ಫಿನಾಲೆ ಸಂಚಿಕೆಗಳು ಪ್ರಸಾರವಾಗಲಿವೆ
  • ಲೈವ್​ನಲ್ಲೇ ಇಡೀ ಮಜಾ ಟಾಕೀಸ್​ ಟೀಮ್​ಗೆ ಧನ್ಯವಾದ ತಿಳಿಸಿದ ನಟ
  • ತೆರೆಗೆ ಬಂದ ಕೆಲವೇ ದಿನಗಳಲ್ಲಿ ಮುಕ್ತಾಯ ಹಾಡಿದ ಮಜಾ ಟಾಕೀಸ್

ಕಲರ್ಸ್​ ಕನ್ನಡದಲ್ಲಿ ಮೂಡಿಬರುತ್ತಿರೋ ಮಜಾ ಟಾಕೀಸ್ ಮುಕ್ತಾಯ ಆಗುತ್ತಿದೆ. ಇಂದು ಕೊನೆಯ ದಿನದ ಎಪಿಸೋಡ್​​ ಪ್ರಸಾರ ಕಾಣುತ್ತಿದೆ. ಸೃಜನ್ ಲೋಕೇಶ್ ನೇತೃತ್ವದಲ್ಲಿ ಮೂಡಿ ಬರುತ್ತಿದ್ದ ‘ಮಜಾ ಟಾಕೀಸ್‌’ ಇಂದು ಗ್ರ್ಯಾಂಡ್ ಫಿನಾಲೆ ಸಂಚಿಕೆಗಳು ಪ್ರಸಾರವಾಗಲಿವೆ. ಅಂದ್ಹಾಗೆ, 32 ಎಪಿಸೋಡ್​ಗೆ ಮಜಾ ಟಾಕೀಸ್ ಎಂಡ್ ಆಗುತ್ತಿದೆ.

ಇದನ್ನೂ ಓದಿ: ಕೊರೊನಾಗೆ ಮತ್ತೊಂದು ಬಲಿ.. ದೇಶದಲ್ಲಿ ಒಟ್ಟು ಎಷ್ಟು ಕೋವಿಡ್ ಕೇಸ್​ ಪತ್ತೆ ಆಗಿವೆ?

publive-image

ಹೌದು, ಬಿಗ್​ಬಾಸ್ ಸೀಸನ್ 11 ಮುಗಿಯುತ್ತಿದ್ದಂತೆ ‘ಮಜಾ ಟಾಕೀಸ್‌’ ಹೊಸ ಸೀಸನ್‌ ಆರಂಭವಾಯಿತು. ವಿಕೇಂಡ್ ಬಂದರೆ ಸಾಕು ಸೃಜನ್‌ ಲೋಕೇಶ್‌ ಹಾಗೂ ಯೋಗರಾಜ್‌ ಭಟ್‌ ಮೂಲಕ ವೀಕ್ಷಕರಿಗೆ ಮಸ್ತ್​ ಮಜಾ ನೀಡುತ್ತಿದ್ದರು. ಆದರೆ ಈಗ ಮಜಾ ಟಾಕೀಸ್‌ ಎಂಡ್ ಆಗುತ್ತಿದೆ. ಇಂದು ರಾತ್ರಿ 9 ಗಂಟೆಗೆ ಮಜಾ ಟಾಕೀಸ್ ಗ್ರ್ಯಾಂಡ್ ಫಿನಾಲೆ ಟೆಲಿಕಾಸ್ಟ್ ಆಗಲಿದೆ. ಹೀಗಾಗಿ ದಯಮಾಡಿ ಎಲ್ಲರೂ ಇಂದಿನ ಎಪಿಸೋಡ್​ ನೋಡಿ ಅಂತ ವೀಕ್ಷಕರಲ್ಲಿ ಕೇಳಿಕೊಂಡಿದ್ದಾರೆ ಸೃಜನ್‌ ಲೋಕೇಶ್.

ಇನ್ನೂ, ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಮ್ ಲೈವ್​ನಲ್ಲಿ ಬಂದು ಮಾತಾಡಿದ ನಟ ಸೃಜನ್‌ ಲೋಕೇಶ್, ಇಂದು ಸಂಜೆ 9 ಗಂಟೆಗೆ ಕೊನೆಯ ಎಪಿಸೋಡ್ ಪ್ರಸಾರವಾಗಲಿದೆ. ದಯಮಾಡಿ ಎಲ್ಲರೂ ಇಂದಿನ ಕೊನೆಯ ಎಪಿಸೋಡ್​ ನೋಡಿ ಅಂತ ಕೇಳಿಕೊಳ್ಳುತ್ತಿದ್ದೇನೆ. ನಿಮಗೆಲ್ಲಾ ತುಂಬು ಹೃದಯದ ಧನ್ಯವಾದಗಳು ತಿಳಿಸುತ್ತೇನೆ. ನಮ್ಮ ಇಡೀ ಜೀವನವನ್ನು ಬೇರೆ ಹಂತಕ್ಕೆ ತೆಗೆದುಕೊಂಡು ಹೋದವರಿಗೆ ತುಂಬು ಹೃದಯದ ಧನ್ಯವಾದಗಳು. ಮುಖ್ಯವಾಗಿ ಪರಂ ಅವರು, ಕಲರ್ಸ್​ ಕನ್ನಡದ ಟೀಮ್​ಗೆ, ನಮ್ಮಗೆ ಸಪೋರ್ಟ್ ಮಾಡಿದ ಕನ್ನಡ ಚಿತ್ರರಂಗಕ್ಕೆ ಧನ್ಯವಾದ ತಿಳಿಸುತ್ತೇನೆ. ನಮ್ಮ ಮೊದಲ ಮಜಾ ಟಾಕೀಸ್​ ಟೀಮ್​ಗೆ ಥ್ಯಾಂಕ್ಯೂ ಹೇಳುತ್ತೇನೆ. ಈ ಹೊಸ ಸೀಸನ್​ಗೆ ಬಂದ ಯೋಗರಾಜ್ ಭಟ್, ಗಿಚ್ಚಿ ಗಿಲಿಗಿಲಿ ತಂಡಕ್ಕೆ ಥ್ಯಾಂಕ್ಯೂ ಸೋ ಮಾಚ್. ಮುಂದಿನ ದಿನಗಳಲ್ಲಿ ನಿಮಗೆ ಇನ್ನೂ ಮನರಂಜನೆ ನೀಡುತ್ತೇವೆ. ನಮ್ಮ ಮನೆಯಲ್ಲಿ ನಾವು ಖುಷಿಯಾಗಿ ಇದ್ದೇವೆ ಎಂದರೆ ಅದಕ್ಕೆ ಎಲ್ಲಾ ನಿಮ್ಮ ಸಪೋರ್ಟ್ ಕಾರಣ ಅಂತ ಭಾವುಕರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment