newsfirstkannada.com

2 ತಿಂಗಳ ಗರ್ಭಿಣಿ ಪತ್ನಿಗೆ ಚೂರಿ ಇರಿದ ನೇತ್ರಾವತಿ ಧಾರಾವಾಹಿ ನಟ.. ಗರ್ಭಪಾತವಾಗಿ ಆಸ್ಪತ್ರೆಗೆ ದಾಖಲು

Share :

Published July 23, 2024 at 2:13pm

    ಫೇಸ್​ಬುಕ್​ನಲ್ಲಿ ಯುವತಿಯನ್ನು ಪರಿಚಯ ಮಾಡಿಕೊಂಡ ನಟ

    ಮದುವೆಯಾಗೋದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ ಸನ್ನಿ

    2 ತಿಂಗಳ ಗರ್ಭಿಣಿ ಪತ್ನಿಗೆ ಚಾಕು ಇರಿದ ಧಾರಾವಾಹಿ ನಟ

ಕನ್ನಡದ ನೇತ್ರಾವತಿ ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಟ ಸನ್ನಿ ಮಹಿಪಾಲ್ ಈಗಾಗಲೇ ಒಂದು ಮದುವೆ ಆಗಿದ್ರೂ ಮತ್ತೊಂದು ನಿಶ್ಚಿತಾರ್ಥ ಮಾಡಿಕೊಂಡಿರೋ ಆರೋಪ ಕೇಳಿ ಬಂದಿದೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಪತ್ನಿಗೆ ಥಳಿಸಿದ್ದಾರೆ ಎನ್ನಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಸಂತ್ರಸ್ತೆಯೊಂದಿಗೆ ಸ್ನೇಹ, ಪ್ರೀತಿ ಅಂತ ಪರಿಚಯವಾಗಿ ಬಳಿಕ ಮದುವೆಯಾಗೋದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ನಂತರ ವಿವಾಹವಾಗಿದ್ದಾನೆ. ಸದ್ಯ ಸಂತ್ರಸ್ತೆ 2 ತಿಂಗಳ ಗರ್ಭಿಣಿಯಾಗಿದ್ದು, ಹೀಗಿರುವಾಗಲೇ ನಟ ಸನ್ನಿ ಬೇರೊಂದು ಹುಡುಗಿ ಜೊತೆ ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ.

ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಪತ್ನಿಗೆ ಸನ್ನಿ ಚಾಕುವಿನಿಂದ ತೋಳಿಗೆ ಇರಿದು ಹಲ್ಲೆ ಮಾಡಿದ್ದಾನೆ ಅಂತ ಸಂತ್ರಸ್ತೆ ಆರೋಪಿಸಿದ್ದಾಳೆ. ಆದ್ರೆ ಸನ್ನಿ ಮಹಿಳೆಯ ವಿರುದ್ಧವೇ HAL ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: 4 ವರ್ಷದ ಬಾಲಕಿ ಕಿಡ್ನಾಪ್, ಅತ್ಯಾಚಾರ ಮಾಡಿ ಕೊಲೆ.. ಮೃತದೇಹ ಏನು ಮಾಡಿದ್ದ ಗೊತ್ತಾ ಕಾಮುಕ?

ಜೂನ್ 15 ರಂದು ಯುವತಿ ಸನ್ನಿ ಮಹಿಪಾಲ್​ನನ್ನು ವಿವಾಹವಾಗಿದ್ದಾಳೆ. ಇಬ್ಬರು ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದರು. ಸದ್ಯಕ್ಕೆ ಮಹಿಳೆ ಎರಡು ತಿಂಗಳು ಒಂದು ವಾರದ ಗರ್ಭಿಣಿಯಾಗಿದ್ದಾಳೆ ಎಂದು ಹೇಳಿಕೊಂಡಿದ್ದಾಳೆ.

ಸದ್ಯ ಸನ್ನಿ ಮಹಿಪಾಲ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕೆಲ ದಿನಗಳ ಹಿಂದೆ ಯುವತಿಯೊಬ್ಬಳ ಜೊತೆಗೆ ಎಂಗೆಜ್ಮೆಂಟ್ ಆಗಿದ್ದನಂತೆ. ಈ ವಿಚಾರ ತಿಳಿದ ಪತ್ನಿ ಆತನನ್ನು ಪ್ರಶ್ನಿಸಲು ಜುಲೈ 22 ರಂದು ರಾತ್ರಿ ಮಹಿಪಾಲ್ ಮನೆಗೆ ಹೋಗಿದ್ದಾಳೆ. ರಾತ್ರಿ 9.30 ಕ್ಕೆ ಆತನ ಮನೆಗೆ ಹೋಗಿದ್ದಾಳೆ.

ಇದನ್ನೂ ಓದಿ: ಬಂಗಾರ ಪ್ರಿಯರಿಗೆ ಗುಡ್‌ನ್ಯೂಸ್‌.. ಬಜೆಟ್‌ 2024ನಲ್ಲಿ ಚಿನ್ನ, ಬೆಳ್ಳಿ ಬೆಲೆ ಇಳಿಕೆ; ಎಷ್ಟು?

ವಿಜ್ಞಾನ ನಗರದಲ್ಲಿರುವ ಮಹಿಪಾಲ್ ನಿವಾಸಕ್ಕೆ ಹೋಗಿದ್ದಾಳೆ. ಈ ವೇಳೆ ಗಲಾಟೆಯಾಗಿ ಪತ್ನಿ ಮೇಲೆ ಹಲ್ಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಚಾಕುವಿನಿಂದ ತೋಳಿಗೆ ಇರಿದಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ. ಮಾತ್ರವಲ್ಲದೆ ಗಲಾಟೆಯಲ್ಲಿ ಹೊಟ್ಟೆಗೆ ಏಟಾಗಿ ಗರ್ಭಪಾತ ಆಗಿರೋದಾಗಿ ಪತ್ನಿ ಹೇಳಿಕೆ ನೀಡಿದ್ದಾಳೆ.

ಗರ್ಭಪಾತದಿಂದಾಗಿ ಮಹಿಳೆಗೆ ರಕ್ತಸ್ರಾವವಾಗುತ್ತಿತ್ತು. ಕೂಡಲೇ ಆಕೆ 112 ಗೆ ಕರೆ ಮಾಡಿದ್ದಾಳಂತೆ. ಈ ವೇಳೆ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಆಕೆ ಆಸ್ಪತ್ರೆಗೆ ಕರೆದೊಯ್ಯುವಂತೆ ಪೊಲೀಸರಿಗೆ ಮನವಿ ಮಾಡಿದ್ದಳಂತೆ. ಆದರೆ ನಮ್ಮ ಹತ್ತಿರ ಮಹಿಳಾ ಸಿಬ್ಬಂದಿ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ ಎಂದು ಮಹಿಪಾಲ್ ಪತ್ನಿ ದೂರಿದ್ದಾರೆ.

ಕೊನೆಗೆ ದಿಕ್ಕು ತೋಚದೆ ಮಹಿಪಾಲ್​ ಪತ್ನಿ ಕಾರು ಚಲಾಯಿಸಿಕೊಂಡು ಬಂದು ಆಸ್ಪತ್ರೆ ಸೇರಿದ್ದಾರೆ. ಸದ್ಯ ಮಹಿಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ದಯವಿಟ್ಟು ನ್ಯಾಯ ಕೊಡಿ

ನ್ಯೂಸ್ ಫಸ್ಟ್ ಗೆ ಜೊತೆಗೆ ಮಾತನಾಡಿ ಬೇಸರ ತೋಡಿಕೊಂಡ ಸನ್ನಿ ಪತ್ನಿ, ಫೇಸ್​ಬುಕ್​ನಲ್ಲಿ ಮೊದಲು ಸನ್ನಿ ಪರಿಚಯ ಆಗ್ತಾನೆ.  ಆಮೇಲೆ ಅವನು ಕೂಡ ಮದುವೆಗೆ ಹುಡುಗಿ ಹುಡುಕುತ್ತಾ ಇರ್ತಾನೆ. ನಾನು ಕೂಡಾ ಮದುವೆಗೆ ಹುಡುಗ ಹುಡುಕುತ್ತಾ ಇದ್ದೆ. ನಾವಿಬ್ಬರೂ ಮದುವೆ ಆಗೋದಕ್ಕೆ ಪರಸ್ಪರ ಒಪ್ಪಿದ್ದೇವೆ. ಸನ್ನಿಗಿಂತ ವಯಸ್ಸಲ್ಲಿ ನಾನು ದೊಡ್ಡವಳು. ಅದೇ ಕಾರಣಕ್ಕೆ ಸನ್ನಿ ಅಪ್ಪ ಅಮ್ಮ ನನ್ನ ತಿರಸ್ಕಾರ ಮಾಡಿದ್ರು. ನನಗೆ ತಂದೆ ತಾಯಿ ಯಾರು ಇಲ್ಲ. ದಯವಿಟ್ಟು ನ್ಯಾಯ ಕೊಡಿ ಅಂತ ಬೇಸರ ತೋಡಿಕೊಂಡಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2 ತಿಂಗಳ ಗರ್ಭಿಣಿ ಪತ್ನಿಗೆ ಚೂರಿ ಇರಿದ ನೇತ್ರಾವತಿ ಧಾರಾವಾಹಿ ನಟ.. ಗರ್ಭಪಾತವಾಗಿ ಆಸ್ಪತ್ರೆಗೆ ದಾಖಲು

https://newsfirstlive.com/wp-content/uploads/2024/07/Sunny.jpg

Load More