newsfirstkannada.com

‘ಕತೆಯೊಂದು ಶುರುವಾಗಿದೆ’ ಮುಕ್ತಾಯ.. ವರು-ಸರು ಸ್ನೇಹದ ನ್ಯೂ ಸೀರಿಯಲ್​ ಆರಂಭ!

Share :

Published February 29, 2024 at 10:09pm

  ವೀಕ್ಷಕರನ್ನು ರಂಜಿಸಲು ಇನ್ಮುಂದೆ ಬರುತ್ತಿದೆ ಹೊಸ ಧಾರಾವಾಹಿ!

  ಹಳೆ ಸೀರಿಯಲ್​ಗೆ ಗುಡ್​ ಬಾಯ್​, ಹೊಸದಕ್ಕೆ ಹಾಯ್​ ಹಾಯ್​

  ವರು-ಸರು ಜೀವನ ಅವರ ಅಂದುಕೊಂಡ್ಹಾಗೆ ಸಾಗುತ್ತಿದೆಯಾ.?

ಕಿರುತೆರೆಯ ವೀಕ್ಷಕರು ಕೂಡ ಈಗ ಧಾರಾವಾಹಿಯ ಕತೆಗಳಲ್ಲಿ ವಿಭಿನ್ನತೆ ಬಯಸುತ್ತಿದ್ದಾರೆ. ಹಳೆ ಫಾರ್ಮ್ಯಾಟ್‌ನ ಕತೆಗಳಿಗೆ ಗುಡ್ ಬೈ ಹೇಳಿ ಹೊಸ ಕತೆಗಳಿಗೆ ವೆಲ್​ಕಮ್ ಮಾಡುತ್ತಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ 2 ಪ್ರಮುಖ ಬೆಳವಣಿಗೆ ನಡೆಯುತ್ತಿದೆ. ಒಂದು ಹಳೆ ಸೀರಿಯಲ್ ವೈಂಡಪ್‌. ಇನ್ನೊಂದು ಹೊಸ ಸೀರಿಯಲ್‌ ಲಾಂಚ್‌.

ಜನಪ್ರಿಯ ಧಾರಾವಾಹಿ ಕತೆಯೊಂದು ಶುರುವಾಗಿದೆ ಸೀರಿಯಲ್ ತನ್ನ ಮುಕ್ತಾಯದ ಹಂತ ತಲುಪಿದೆ. ಈ ಸೀರಿಯಲ್​ನಲ್ಲಿ ಚಂದನ್ ಗೌಡ ನಾಯಕ ನಟನಾಗಿ ಅಭಿನಯಿಸಿದ್ದರು. ಆರಂಭದಲ್ಲಿ ಒಳ್ಳೆ ಓಪನಿಂಗ್ ಪಡೆದುಕೊಂಡಿದ್ದ ಈ ಸೀರಿಯಲ್ ನಂತರ ಡಿಪ್ ಆಯ್ತು. ಹೀಗಾಗಿ ಸೀರಿಯಲ್ ತಂಡ ವೈಂಡಪ್ ಮಾಡಲು ನಿರ್ಧಿರಿಸಿದೆ. ಕತೆಯೊಂದು ಶುರುವಾಗಿದೆ ಧಾರಾವಾಹಿ ಪ್ರತಿ ದಿನ ಸಂಜೆ 6.30ಕ್ಕೆ ಪ್ರಸಾರವಾಗ್ತಿತ್ತು. ಆದ್ರೆ, ಇದೇ ಮಾರ್ಚ್​ 4ರಿಂದ ಅದೇ ಟೈಮ್ ಸ್ಲಾಟ್​ಗೆ ಹೊಚ್ಚ ಹೊಸ ಕತೆ ಲಕ್ಷ್ಮೀ ಟಿಫನ್ ರೂಮ್ ಬರಲಿದೆ. ಇದರ ಕತೆಯ ಎಳೆ ತುಂಬಾನೆ ವಿಭಿನ್ನವಾಗಿದ್ದು, ವೀಕ್ಷಕರಿಗೆ ತಲುಪುವ ನಿರೀಕ್ಷೆ ಹುಟ್ಟಿಸಿದೆ.

ವರಲಕ್ಷ್ಮೀ-ಸರಸ್ವತಿ ಇಬ್ಬರ ಗೆಳತನ ಕಾಲ ಕಳೆದಂತೆ ದೂರವಾಗಿರುತ್ತೆ. ಆದ್ರೆ, ಇಬ್ಬರ ಕನಸುಗಳು ಮಾತ್ರ ಜೀವಂತವಾಗೇ ಇರುತ್ತೆ. ವರು ತಾನು ದೊಡ್ಡ ಐಎಎಸ್ ಆಫೀಸರ್ ಆಗ್ಬೇಕು ಅಂತ ಕನಸು ಹೊತ್ತಿದ್ರೆ, ಸರು ತಾನು ಕೂಡಿಟ್ಟ ದುಡ್ಡಲ್ಲಿ ಮದುವೆ ಆಗಿ ಸುಖವಾಗಿ ಬಾಳಬೇಕು ಎಂದು ಕನಸು ಕಂಡಿರ್ತಾಳೆ. ಬೆಳೆದು ದೊಡ್ಡವಾರಗಿರೋ ಇವರ ಈ ಕನಸುಗಳು ಏನಾಗಿದೆ? ವರು-ಸರು ಜೀವನ ಅವರ ಅಂದುಕೊಂಡ್ಹಾಗೆ ಸಾಗುತ್ತಿದೆಯಾ ಅನ್ನೋದೆ ಕತೆಯ ತಿರುಳಾಗಿದೆ.

ಕತೆಯೊಂದು ಶುರುವಾಗಿದೆ ಧಾರಾವಾಹಿಯ ಮುಕ್ತಾಯದ ನಂತರ ಇದೇ ಸೋಮವಾರದಿಂದ ವರು-ಸರು ಗೆಳೆತನ ಕತೆ ಆರಂಭವಾಗಲಿದೆ. ಈ ಹೊಚ್ಚ ಹೊಸ ವಿಭಿನ್ನ ಕತೆ ಎಷ್ಟರ ಮಟ್ಟಿಗೆ ಇಂಪ್ಯಾಕ್ಟ್ ಮಾಡಲಿದೆ ಅನ್ನೋದನ್ನ ಕಾದು ನೋಡೋಣ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಕತೆಯೊಂದು ಶುರುವಾಗಿದೆ’ ಮುಕ್ತಾಯ.. ವರು-ಸರು ಸ್ನೇಹದ ನ್ಯೂ ಸೀರಿಯಲ್​ ಆರಂಭ!

https://newsfirstlive.com/wp-content/uploads/2024/02/lakshmi_tiffin_rom.jpg

Load More