newsfirstkannada.com

BBK OTT: ಜಶ್ವಂತ್​ ಬೋಪಣ್ಣ ಹೊಸ ಗರ್ಲ್​ ಫ್ರೆಂಡ್​ಗೆ ‘ನಂದು’ ಕಾಮೆಂಟ್​; ಫ್ಯಾನ್ಸ್​ಗಳಿಂದ ಮೆಚ್ಚುಗೆ.. ಏನದು?

Share :

Published May 13, 2024 at 6:20pm

    ರೋಡಿಸ್ ಶೋ ಮೂಲಕ ಸಖತ್​ ಫೇಮಸ್​ ಆಗಿದ್ದ ನಂದು ಮತ್ತು ಜಶ್ವಂತ್

    ನಂದು ಹಾಗೂ ಜಶ್ವಂತ್​ ಜೋಡಿಯನ್ನು ಇಷ್ಟಪಟ್ಟಿದ್ದ ಸಾಕಷ್ಟು ಅಭಿಮಾನಿಗಳು

    ಇನ್​ಸ್ಟಾ​ ಖಾತೆಯಲ್ಲಿ ತಮ್ಮಿಬ್ಬರಿಗೂ ಬ್ರೇಕಪ್‌ ಬಗ್ಗೆ ಮಾಹಿತಿ ನೀಡಿದ್ದ ನಂದು

ನಂದು ಹಾಗೂ ಜಶ್ವಂತ್​ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ರೋಡಿಸ್ ಶೋ ಮೂಲಕ ಫೇಮಸ್​ ಆಗಿದ್ದ ನಂದು ಮತ್ತು ಜಶ್ವಂತ್ ಪ್ರೇಮ ಪಕ್ಷಿಗಳಾಗಿ ಕನ್ನಡ ಬಿಗ್​ಬಾಸ್ ಒಟಿಟಿ ಸೀಸನ್​ 1ಕ್ಕೆ ಕಾಲಿಟ್ಟಿದ್ದರು. ಬಿಗ್​ಬಾಸ್​ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದ ಇಬ್ಬರು ​ಲವ್ ಬರ್ಡ್ಸ್ ಆಗಿಯೇ ಸಖತ್ ಹೈಲೈಟ್ ಆಗಿದ್ದರು. ಇನ್ನು ಈ ಇಬ್ಬರು ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟ ಕೆಲವು ದಿನಗಳ ನಂತರ ಗಲಾಟೆ ಮಾಡಿಕೊಳ್ಳಲು ಶುರು ಮಾಡಿಕೊಂಡಿದ್ದರು.

ಇದನ್ನೂ ಓದಿ: ಸಂಗೀತಾ ಶೃಂಗೇರಿಗೆ ಬಿಗ್‌ ಸರ್ಪ್ರೈಸ್ ಕೊಟ್ಟ ಕುಟುಂಬಸ್ಥರು; ಫೋಟೋ ವೈರಲ್!

ಆದರೆ ಈ ಇಬ್ಬರು ಕೂಡ ತಮ್ಮ ಲವ್​​ ಬ್ರೇಕ್ ಮಾಡಿಕೊಳ್ಳುತ್ತಾರೆ ಅಂತ ಯಾರೂ ಸಹ ಉಹಿಸಿರಲಿಲ್ಲ. ಆದರೆ ಬಿಗ್​ಬಾಸ್​​ ಮನೆಯಿಂದ ಆಚೆ ಬಂದ ಬಳಿಕ ಈ ಇಬ್ಬರು ತಮ್ಮ ಪ್ರೀತಿಗೆ ಗುಡ್​​ ಬೈ ಹೇಳಿದ್ದರು. ಈ ಬಗ್ಗೆ ಖುದ್ದು ಬಿಗ್​ಬಾಸ್‌ ಒಟಿಟಿ ಸ್ಪರ್ಧಿ ನಂದು ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ತಮ್ಮಿಬ್ಬರಿಗೂ ಬ್ರೇಕಪ್‌ ಆಗಿದೆ ಎಂಬ ಸಂಗತಿಯನ್ನು ಹಂಚಿಕೊಂಡಿದ್ದರು. ಆದರೆ ಈ ಬಗ್ಗೆ ಜಶ್ವಂತ ಸ್ಷಷ್ಟನೆ ಕೊಟ್ಟಿರಲಿಲ್ಲ. ಇದಾದ ಬಳಿಕ ಜಶ್ವಂತ್ ಸದ್ಯ ಆಕೃತಿ ಎಂಬ ಯುವತಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ.

ಹೌದು, ಜಶ್ವಂತ್​ ಅವರು ಸದ್ಯ MTV Splitsvilla X5 ಎಂಬ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ಈ ಶೋನಲ್ಲಿ ಜಶ್ವಂತ್ ಅವರ ಜೊತೆಯಾಗಿ ಆಕೃತಿ ಆಯ್ಕೆಯಾಗಿದ್ದಾರೆ. ಜೊತೆಗೆ ಈ ಇಬ್ಬರು ಪ್ರೀತಿ ಮಾಡುತ್ತಿದ್ದಾರೆ ಅಂತ ಹೇಳಲಾಗುತ್ತಿದೆ. ಇನ್ನು ಈ ಇಬ್ಬರು ಬಹಳ ಆತ್ಮೀಯವಾಗಿ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಇಬ್ಬರ ಫೋಟೋಗಳು ಹಾಗೂ ರೀಲ್ಸ್​ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ಇದನ್ನೂ ಓದಿ: ಈಕೆ ಅಂತಿಂಥಾ ಮಹಿಳೆಯಲ್ಲ.. ವಿಧ, ವಿಧವಾದ ಅನಕೊಂಡಗಳ ಜೊತೆ ಆಟವಾಡೋ ಎನರ್ಜಿಟಿಕ್ ವುಮೆನ್

ಇನ್ನು, ವೈರಲ್​ ಆದ ವಿಡಿಯೋಗೆ ನಂದು ಅವರು ಕಾಮೆಂಟ್​ ಮಾಡಿದ್ದಾರೆ. ಈ ಇಬ್ಬರೂ ಜೋಡಿ ಬಹಳ ಸುಂದರವಾಗಿದೆ ಅಂತ ಕಾಮೆಂಟ್​ ಮಾಡಿ ಸಪೋರ್ಟ್​ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ನಂದು ಕಾಮೆಂಟ್​ಗೆ 9,832 ಜನ ಲೈಕ್​ ಮಾಡುವ ಮೂಲಕ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಜೊತೆಗೆ ಜಶ್ವಂತ್ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ನೀವು ನಂದು ಅಂತಹ ಒಳ್ಳೆಯ ಹುಡುಗಿಯನ್ನು ಮಿಸ್​ ಮಾಡಿಕೊಂಡಿದ್ದೀರಿ, ನಂದುಗಿಂತ ಒಳ್ಳೆ ಜೋಡಿ ನಿಮಗೆ ಸಿಗುವುದಿಲ್ಲ. ನಾನು ನೋಡಿದ ಅತ್ಯಂತ ಕರುಣಾಮಯಿ ವ್ಯಕ್ತಿ ಅಂದರೆ ಅದು ನಂದು ಮಾತ್ರ ಅಂತ ಕಾಮೆಂಟ್​ ಮಾಡುತ್ತಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK OTT: ಜಶ್ವಂತ್​ ಬೋಪಣ್ಣ ಹೊಸ ಗರ್ಲ್​ ಫ್ರೆಂಡ್​ಗೆ ‘ನಂದು’ ಕಾಮೆಂಟ್​; ಫ್ಯಾನ್ಸ್​ಗಳಿಂದ ಮೆಚ್ಚುಗೆ.. ಏನದು?

https://newsfirstlive.com/wp-content/uploads/2024/05/nandu1.jpg

Load More