/newsfirstlive-kannada/media/post_attachments/wp-content/uploads/2025/05/KAMALA-HASAN.jpg)
ತಮಿಳು ನಟ ಕಮಲ್ ಹಾಸನ್ ಇತ್ತೀಚೆಗೆ ತಮ್ಮ ಸಿನಿಮಾಗಳಿಗಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗ್ತಿದ್ದಾರೆ. ಈಗ ತಮ್ಮ ಸಿನಿಮಾ ಥಗ್ ಲೈಪ್ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಕನ್ನಡಿಗರನ್ನು ಕೆಣಕಿದ್ದಾರೆ. ಶಿವಣ್ಣನ ಮುಂದೆಯೇ ತಮಿಳಿನಿಂದ ಕನ್ನಡ ಹುಟ್ಟಿದೆ ಅಂತ ಹೇಳೋ ಮೂಲಕ ಎರಡು ರಾಜ್ಯಗಳ ನಡುವೆ ಬೆಂಕಿ ಹಚ್ಚಿದ್ದಾರೆ.
ಇದನ್ನೂ ಓದಿ: ಮಂಗಳೂರಲ್ಲಿ ಮತ್ತೆ ಹರಿದ ನೆತ್ತರು.. ತಲ್ವಾರ್ನಿಂದ ಕೊಚ್ಚಿ ಅಬ್ದುಲ್ ರಹಿಮಾನ್ನ ಭೀಕರ ಹತ್ಯೆ
ಕನ್ನಡ ಭಾಷೆ ಬಗ್ಗೆ ನಾಲಿಗೆ ಹರಿಬಿಟ್ಟ ನಟ ಕಮಲ್ ಹಾಸನ್
ಸಾವಿರಾರು ವರ್ಷಗಳ ಭವ್ಯ ಇತಿಹಾಸ, ಸ್ವತಂತ್ರ್ಯ ಲಿಪಿ, ಶಾಸ್ತ್ರೀಯ ಸ್ಥಾನಮಾನ ಹೊಂದಿರುವ ಶ್ರೀಮಂತ ಭಾಷೆ ಕನ್ನಡ. ಕೋಟ್ಯಾಂತರ ಕರುನಾಡಿಗರ ಜೀವನಾಡಿಯಾಗಿರುವ ನಮ್ಮ ಕನ್ನಡ ಭಾಷೆಗೆ ನಟ ಕಮಲ್ ಹಾಸನ್ ಅವಮಾನಿಸಿದ್ದಾರೆ.
ಆ ಊರಲ್ಲಿ ನನ್ನ ಕುಟುಂಬ ಇದೆ. ಅದಕ್ಕಾಗಿ ಅವರು ಇಲ್ಲಿಗೆ ಬಂದಿದ್ದಾರೆ. ಅದ್ಕಕಾಗಿಯೇ ನಾನು ನನ್ನ ಮಾತು ಆರಂಭೀಸೋದಕ್ಕೂ ಮುನ್ನ, ಉಸಿರೇ, ತಮಿಳೇ ಅಂತ ಆರಂಭಿಸಿದ್ದೆ.. ಅದ್ರಲ್ಲಿ ತಮಿಳಿನಿಂದ ಹುಟ್ಟಿದ್ದೇ ನಿಮ್ಮ ಭಾಷೆ.. ಹಾಗಾಗಿ ನೀವು ಅದ್ರಲ್ಲಿ ಒಳಪಡ್ತೀರಾ? -ಕಮಲ್ ಹಾಸನ್, ನಟ
ಕನ್ನಡ ಭಾಷೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಡುವುದಕ್ಕೂ ಮುನ್ನ ಹಿಂದಿ ಭಾಷಿಗರನ್ನ ಕೆಣಕಿದ್ರು. ಹಿಂದಿ ಕಲಿಯುವುದಕ್ಕೂ ಮುನ್ನ ಬೇರೆ ಲ್ಯಾಂಗ್ವೇಜ್ ಅನ್ನ ಕಲಿಯಿರಿ ಎಂದಿದ್ರು. ಇದರ ಬೆನ್ನಲ್ಲೇ ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು ಅಂತ ನಾಲಿಗೆ ಹರಿಬಿಟ್ಟಿದ್ದಾರೆ. ಇದು ಕನ್ನಡಿಗರ ನಿದ್ದೆ ಕೆಡಿಸಿದೆ.. ಇದರಿಂದಾಗಿ ರಾಜ್ಯದಲ್ಲಿ ಕಮಲ್ ಹಾಸನ್ ವಿರುದ್ಧ ಪ್ರತಿಭಟನೆಗಳ ಶುರುವಾಗಿವೆ.. ಕನ್ನಡ ಪರ ಸಂಘಟನೆಗಳು ಕಮಲ್ ಹಾಸನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಿದೆ.
ಇದನ್ನೂ ಓದಿ: ಮಂಗಳೂರಲ್ಲಿ ಮತ್ತೆ ಹರಿದ ನೆತ್ತರು.. ತಲ್ವಾರ್ನಿಂದ ಕೊಚ್ಚಿ ಅಬ್ದುಲ್ ರಹಿಮಾನ್ನ ಭೀಕರ ಹತ್ಯೆ
ಕಮಲ್ ಹಾಸನ್ಗೆ ಕಪ್ಪು ಮಸಿ ಬಳಿಯಲು ನಿರ್ಧಾರ ಮಾಡಿದ್ವಿ. ಆದರೆ ಇಲ್ಲಿಂದ ಸದ್ಯ ಕಾಲ್ಕಿತ್ತಿದ್ದಾರೆ. ಕರ್ನಾಟಕದಲ್ಲಿ ಬಂದು ಸಿನಿಮಾ ಓಡಿಸ್ತಿರಾ. ಕನ್ನಡ ಮತ್ತು ಕರ್ನಾಟಕ ಬಗ್ಗೆ ಅವಹೇಳನ ಮಾಡಿದ್ರೆ ನಿಮ್ಮ ಸಿನಿಮಾ ಬ್ಯಾನ್ ಮಾಡ ಬೇಕಾಗುತ್ತದೆ ಎಂದು ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ವಾರ್ನಿಂಗ್ ಮಾಡಿದ್ದಾರೆ.
ಮಾತೃಭಾಷೆಯನ್ನು ಪ್ರೀತಿಸಬೇಕು, ಆದರೆ ಅದರ ಹೆಸರಿನಲ್ಲಿ ದುರಭಿಮಾನ ಮೆರೆಯುವುದು ಸಂಸ್ಕೃತಿ ಹೀನ ನಡವಳಿಕೆಯಾಗುತ್ತದೆ. ಅದರಲ್ಲೂ ಕಲಾವಿದರಿಗೆ ಪ್ರತಿಯೊಂದು ಭಾಷೆಯನ್ನೂ ಗೌರವಿಸುವ ಸಂಸ್ಕಾರ ಇರಬೇಕು. ಕನ್ನಡವೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ನಟಿಸಿರುವ ನಟ @ikamalhaasan ತಮ್ಮ ತಮಿಳು ಭಾಷೆಯನ್ನು ವೈಭವಿಕರಿಸುವ ಮತ್ತಿನಲ್ಲಿ ನಟ… pic.twitter.com/PrfKX099lZ
— Vijayendra Yediyurappa (@BYVijayendra) May 27, 2025
ಒಟ್ನಲ್ಲಿ ಯಾವುದಕ್ಕೇ ಆದ್ರೂ ಲಿಮಿಟ್ ಇರಬೇಕು. ಅವರವರಿಗೆ ಅವರ ಮಾತೃ ಭಾಷೆಯೇ ಮುಖ್ಯ. ನೂರಲ್ಲ, ಸಾವಿರ ವರ್ಷಗಳೇ ಆಗಿರಲಿ. ಅದು ಬಿಟ್ಟು ತಾವೇ ಮೇಲೂ ನಮ್ಮಿಂದಲೇ ಎಲ್ಲ ಅಂದ್ರೆ ಕನ್ನಡಿಗರು ಸುಮ್ಮನಿರಲ್ಲ. ಆರಂಭದಲ್ಲಿ ಕನ್ನಡ ಸಿನಿಮಾ ಮಾಡಿ, ಕನ್ನಡ ನಾಡಿನಲ್ಲಿ ಕನ್ನಡ ಮಾತಾಡು, ನಿನ್ನ ಮನೇಲಿ ನಿನ್ನ ಭಾಷೆ ಮಾತಾಡು ಅಂತೆಲ್ಲ ಹಾಡಿದ್ದು ಏನು ಹಾಗಾದ್ರೆ.. ಇದಕ್ಕೆಲ್ಲ ಕಮಲ್ ಹಾಸನ್ ಉತ್ತರ ಕೊಡಬೇಕಿದೆ. ಅದಕ್ಕೂ ಹೆಚ್ಚಾಗಿ ಕನ್ನಡಿಗರ ಕ್ಷಮೆ ಕೇಳಬೇಕಿದೆ.
ಇದನ್ನೂ ಓದಿ: ಅಬ್ದುಲ್ ರಹೀಮಾನ್ ಪ್ರಕರಣ.. ಪೊಲೀಸ್ ವರಿಷ್ಠಾಧಿಕಾರಿ ನೀಡಿದ ಮಾಹಿತಿ ಏನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ