‘ಇರಬೇಕು ಇರುವಂತೆ..’ HS ವೆಂಕಟೇಶಮೂರ್ತಿ ಇನ್ನು ನೆನಪು ಮಾತ್ರ.. ಬಡವಾದ ಕನ್ನಡ ಸಾಹಿತ್ಯಲೋಕ

author-image
Veena Gangani
Updated On
‘ಇರಬೇಕು ಇರುವಂತೆ..’ HS ವೆಂಕಟೇಶಮೂರ್ತಿ ಇನ್ನು ನೆನಪು ಮಾತ್ರ.. ಬಡವಾದ ಕನ್ನಡ ಸಾಹಿತ್ಯಲೋಕ
Advertisment
  • ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ ಜನನ
  • 30 ವರ್ಷ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ
  • 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಹೆಚ್​.ಎಸ್ ವೆಂಕಟೇಶಮೂರ್ತಿ

ಕರುನಾಡು ಕಂಡ ಹಿರಿಯ ಸಾಹಿತಿ, ಪ್ರಖ್ಯಾತ ಕವಿ ಹೆಚ್.ಎಸ್ ವೆಂಕಟೇಶಮೂರ್ತಿ ಇನ್ನಿಲ್ಲ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಬಿಜಿಎಸ್​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ನಾಡು ಕಂಡ ಹೆಮ್ಮೆಯ ಸಾಹಿತಿಯನ್ನು ಕಳೆದುಕೊಂಡು ಕರ್ನಾಟಕ ಬಡವಾಗಿದೆ.

ಇದನ್ನೂ ಓದಿ: BREAKING: ಹಿರಿಯ ಸಾಹಿತಿ ಹೆಚ್​.ಎಸ್​. ವೆಂಕಟೇಶಮೂರ್ತಿ ಇನ್ನಿಲ್ಲ

publive-image

ಹೆಚ್ಎಸ್‌ವಿ ಅಂತಲೇ ಚಿರಪರಿಚಿತರಾಗಿದ್ದ ಅವರು, ಕನ್ನಡಕ್ಕೆ ಅನೇಕ ಕವಿತೆಗಳನ್ನು, ನಾಟಕಗಳನ್ನು, ಸಾಹಿತ್ಯಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಹೆಚ್.ಎಸ್.ವೆಂಕಟೇಶಮೂರ್ತಿ (ಎಚ್ಎಸ್‌ವಿ ) ಕನ್ನಡ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ವಿಮರ್ಶಕ ಹಾಗೂ ಪ್ರಾಧ್ಯಾಪಕರಾಗಿ ದುಡಿದಿದ್ದರು.

ಹೊದಿಗೆರೆ ಗ್ರಾಮದಲ್ಲಿ ಜನನ

ವೆಂಕಟೇಶ್​ಮೂರ್ತಿ ಅವರು 1944ರ ಜೂನ್ 23ರಂದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಗ್ರಾಮದಲ್ಲಿ ಜನಿಸಿದ್ದರು. ತಂದೆ ನಾರಾಯಣ ಭಟ್ಟರು ಮತ್ತು ತಾಯಿ ನಾಗರತ್ನಮ್ಮ ಪುತ್ರರಾಗಿ ಹೆಚ್‌ಎಸ್‌ವಿ ಜನಿಸಿದ್ದರು. ತಮ್ಮ ಬಾಲ್ಯವನ್ನು ಗ್ರಾಮೀಣ ಪರಿಸರದಲ್ಲಿ ಕಳೆದಿದ್ದರು. ಹೀಗಾಗಿ ಅದರ ಪರಿಣಾಮ ಅವರ ಸಾಹಿತ್ಯದಲ್ಲಿ ಪ್ರತಿಬಿಂಬಿಸುತ್ತಿದ್ದವು.

ಹೆಚ್ಎಸ್‌ವಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ ಎಂಎ ಪದವಿ ಪಡೆದುಕೊಂಡಿದ್ದರು. ಹೆಚ್.ಎಸ್ ವೆಂಕಟೇಶಮೂರ್ತಿ  ಸುಮಾರು 30 ವರ್ಷಗಳ ಕಾಲ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.  ‘ಕನ್ನಡದಲ್ಲಿ ಕಥನ ಕವನಗಳು’ ಎಂಬ ಮಹಾಪ್ರಬಂಧಕ್ಕೆ ಪಿಎಚ್​ಡಿ ಪದವಿಯೊಂದಿಗೆ ಡಾಕ್ಟರೇಟ್​ ಪಡೆದುಕೊಂಡಿದ್ದರು. 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿಭಾಯಿಸಿದ್ದರು.

publive-image

ಹೆಚ್​ಎಸ್​ವಿ ಸುಮಾರು 100ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವರ ಪ್ರಮುಖ ಕವನ ಸಂಕಲನಗಳಲ್ಲಿ ‘ಪರಿವೃತ್ತ’, ‘ಬಾಗಿಲು’ ‘ಬಡಿವ ಜನಗಳು’, ‘ಸೌಗಂಧಿಕ’, ‘ಮೂವತ್ತು ಮಳೆಗಾಲ’ ಇತ್ಯಾದಿ. ‘ಹೆಜ್ಜೆಗಳು’, ‘ಒಂದು ಸೈನಿಕ ವೃತ್ತಾಂತ’, ‘ಅಗ್ನಿವರ್ಣ’ ಸೇರಿದಂತೆ ಅನೇಕ ನಾಟಕಗಳನ್ನೂ ರಚಿಸಿದ್ದಾರೆ.

ಚಿತ್ರರಂಗಕ್ಕೂ ಕೊಡುಗೆ.. 

ಅಷ್ಟೇ ಅಲ್ಲದೇ ಕನ್ನಡ ಚಿತ್ರರಂಗಕ್ಕೂ ತಮ್ಮ ಕೊಡುಗೆ ನೀಡಿದ್ದಾರೆ. ‘ಚಿನ್ನಾರಿ ಮುತ್ತ’, ‘ಕೋಟ್ರೇಶಿ ಕನಸು’, ‘ಅಮೆರಿಕಾ ಅಮೆರಿಕಾ’, ‘ಮೈತ್ರಿ’, ‘ಕಿರಿಕ್ ಪಾರ್ಟಿ’ ಮುಂತಾದ ಚಿತ್ರಗಳಿಗೆ ಹಾಡುಗಳು ಮತ್ತು ಸಂಭಾಷಣೆ ರಚಿಸಿದ್ದರು. ಮುಕ್ತ, ಮಹಾಪರ್ವ ಮುಂತಾದ ಧಾರಾವಾಹಿಗಳಿಗೆ ಶೀರ್ಷಿಕೆ ಹಾಡುಗಳನ್ನು ಬರೆದಿದ್ದರು.

ಆದ್ರೆ ಹೆಚ್.ಎಸ್ ವೆಂಕಟೇಶಮೂರ್ತಿ ಅವರು ಕೆಲದಿನಗಳಿಂದ ವಯೋಸಹಜ ಅನಾರೋಗ್ಯ ಒಳಲುತ್ತಿದ್ದ ಅವರು ಇಂದು ಬೆಳಗ್ಗೆ 7 ಗಂಟೆಗೆ ಬಿಜಿಎಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment