newsfirstkannada.com

ಹಿರೇಮಗಳೂರು ಕಣ್ಣನ್‌ಗೆ ಶಾಕ್ ಕೊಟ್ಟ ಸರ್ಕಾರ; ಕೊಟ್ಟ ಸಂಬಳ ವಾಪಸ್ ನೀಡಲು ನೋಟಿಸ್; ಯಾಕೆ?

Share :

Published January 23, 2024 at 12:24pm

Update January 23, 2024 at 12:26pm

    ಕನ್ನಡದ ಪೂಜಾರಿ ಹಿರೇಮಗಳೂರು ಕಣ್ಣನ್‌ಗೆ ನೀಡುತ್ತಿದ್ದ ವೇತನಕ್ಕೆ ತಡೆ

    ಕಳೆದ 10 ವರ್ಷದ ಸಂಬಳವನ್ನು ವಾಪಸ್ ಮಾಡುವಂತೆ ಸರ್ಕಾರ ಸೂಚನೆ

    ಸರ್ಕಾರದ ನೋಟಿಸ್‌ ನೋಡಿ ಬಿಗ್ ಶಾಕ್‌ಗೆ ಒಳಗಾದ ಪ್ರಧಾನ ಅರ್ಚಕ

ಚಿಕ್ಕಮಗಳೂರು: ಕನ್ನಡದ ಪೂಜಾರಿ, ಕನ್ನಡದ ಪಂಡಿತ ಎಂದೇ ಖ್ಯಾತಿಗಳಿಸಿರುವ ಹಿರೇಮಗಳೂರು ಕಣ್ಣನ್ ಅವರಿಗೆ ರಾಜ್ಯ ಸರ್ಕಾರ ನೋಟಿಸ್ ನೀಡಿದೆ. ಕಣ್ಣನ್ ಅವರಿಗೆ ನೀಡುತ್ತಿದ್ದ ವೇತನವನ್ನು ತಡೆ ಹಿಡಿಯುವುದರ ಜೊತೆಗೆ ಕಳೆದ 10 ವರ್ಷದ ಸಂಬಳವನ್ನು ವಾಪಸ್ ಮಾಡುವಂತೆ ಸೂಚನೆ ನೀಡಲಾಗಿದೆ.

ಚಿಕ್ಕಮಗಳೂರು ಹೊರ ವಲಯದ ಕಲ್ಯಾಣ ಕೋದಂಡರಾಮ ದೇವಾಲಯದಲ್ಲಿ ಹಿರೇಮಗಳೂರು ಕಣ್ಣನ್ ಅವರು ಕಳೆದ 50 ವರ್ಷಗಳಿಂದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಣ್ಣನ್ ಅವರ ಖಾತೆಗೆ ಪ್ರತಿ ತಿಂಗಳು ಸಂಬಳವಾಗಿ 7,500 ರೂಪಾಯಿ ಜಮೆ ಆಗುತ್ತಿತ್ತು. ಈ 7,500 ರೂಪಾಯಿ ನೀಡಿದ ಸಂಬಳದಲ್ಲಿ 4,500 ವಾಪಸ್ ನೀಡಲು ಚಿಕ್ಕಮಗಳೂರು ತಹಶೀಲ್ದಾರ್ ಸುಮಂತ್ ಅವರು ನೋಟಿಸ್ ನೀಡಿದ್ದಾರೆ.

ಇದನ್ನೂ ಓದಿ: ರಾಮಲಲ್ಲಾ ಶಿಲೆ ನೀಡಿದ ಗುತ್ತಿಗೆದಾರನಿಗೆ ದಂಡದ ಬರೆ.. ಪತ್ನಿ ಚಿನ್ನ ಅಡವಿಟ್ಟು ಫೈನ್​ ಕಟ್ಟಿದ ವ್ಯಕ್ತಿಯ ನೋವು ಕೇಳುವವರ್ಯಾರು?

ದೇವಾಲಯದ ಆದಾಯ ಕಡಿಮೆ, ಸಂಬಳ ಹೆಚ್ಚು ನೀಡಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಡಳಿತ ಅರ್ಚಕರಿಗೆ ನೀಡುತ್ತಿದ್ದ ಸಂಬಳವನ್ನ ವಾಪಸ್ ಕೇಳಿದೆ. ವೇತನ ತಡೆಹಿಡಿದು ನೋಟಿಸ್ ನೀಡಲಾಗಿದ್ದು, 4,500 ರೂಪಾಯಿಯಂತೆ 10 ವರ್ಷದ ಹಣವನ್ನ ವಾಪಸ್ ನೀಡಲು ಸೂಚನೆ ನೀಡಲಾಗಿದೆ. ಅಂದ್ರೆ 4 ಲಕ್ಷ 74 ಸಾವಿರ ರೂಪಾಯಿ ವಾಪಸ್ ನೀಡುವಂತೆ ಸೂಚಿಸಲಾಗಿದೆ.

ಕನ್ನಡದ ಪಂಡಿತ, ಸಾಹಿತಿ, ವಾಗ್ಮಿ ಎಂದೇ ಹಿರೇಮಗಳೂರು ಕಣ್ಣನ್ ಅವರು ಖ್ಯಾತಿ ಪಡೆದಿದ್ದಾರೆ. ಕಳೆದ 50 ವರ್ಷಗಳಿಂದ ದೇವಾಲಯದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ಕಣ್ಣನ್ ಅವರಿಗೆ ಸರ್ಕಾರದ ನೋಟಿಸ್ ಆತಂಕವನ್ನುಂಟು ಮಾಡಿದೆ. ದೇವಾಲಯದ ಆದಾಯ ಕಡಿಮೆ‌ ಇರುವುದರಿಂದ ಸರ್ಕಾರದ ಸೂಚನೆ ಮೇರೆಗೆ ಜಿಲ್ಲಾಡಳಿತ ಕಣ್ಣನ್ ಅವರಿಗೆ 10 ವರ್ಷ ನೀಡಿದ ಸಂಬಳದಲ್ಲಿ ಅರ್ಧಕ್ಕೂ ಹೆಚ್ಚು ಭಾಗ ವಾಪಸ್ ಕೇಳಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಿರೇಮಗಳೂರು ಕಣ್ಣನ್‌ಗೆ ಶಾಕ್ ಕೊಟ್ಟ ಸರ್ಕಾರ; ಕೊಟ್ಟ ಸಂಬಳ ವಾಪಸ್ ನೀಡಲು ನೋಟಿಸ್; ಯಾಕೆ?

https://newsfirstlive.com/wp-content/uploads/2024/01/Hiremagalore-Kanan.jpg

Load More