newsfirstkannada.com

ಅಕ್ಕ-ತಂಗಿ ಮಧ್ಯೆ ನಂದನ್ ಪರದಾಟ.. ಪದ್ಮಿನಿ ಬದುಕಲ್ಲಿ ಹುಳಿ ಹಿಂಡಲು ಸಜ್ಜಾದ ತಂಗಿ ಪೂರ್ವಿ..!

Share :

Published August 30, 2023 at 8:34pm

Update August 30, 2023 at 8:35pm

    ಎಲ್ಲಿಗೆ ಹೋಗಿ ಮುಟ್ಟಲಿದೆ ಈ ಅಕ್ಕ ತಂಗಿಯರ ಕಥೆ

    ಅಕ್ಕನ ಬಾಳಲ್ಲಿ ಹುಳಿ ಹಿಂಡಲು ಸಜ್ಜಾದ ತಂಗಿ ಪೂರ್ವಿ

    ಅಕ್ಕ-ತಂಗಿಯರಲ್ಲಿ ನಂದನ್ ಜೀವನ ಏನಾಗುತ್ತೋ..?

ಕಿರುತೆರೆಯಲ್ಲಿ ಅಕ್ಕ-ತಂಗಿಯರ ಕಥೆ ಸಾಮಾನ್ಯವಾಗಿ ಇದ್ದೆ ಇರುತ್ತೆ. ಅದ್ರೆ, ಎಲ್ಲರ ಕಥೆಗಳು ಅಕ್ಕ ತಂಗಿಯರ ಬಾಂಡಿಂಗ್ ಒಳ್ಳೆಯ ರೀತಿಯಲ್ಲೇ ತೋರಿಸಿಕೊಂಡು ಬಂದಿವೆ. ಆದ್ರೆ, ಇದೊಂದು ಕತೆಯಲ್ಲಿ ತಂಗಿಯೇ ಅಕ್ಕನ ಬಾಳಲ್ಲಿ ವಿಲನ್ ಆಗಿದ್ದಾಳೆ, ಅದೇ ಪುಣ್ಯವತಿ ಕಥೆ.

ಪುಣ್ಯವತಿ ಕತೆಯಲ್ಲಿ ಯಾರು ಉಹಿಸಿದ ಟ್ವಿಸ್ಟ್​ಗಳು ಬಂದಿವೆ. ನಂದನ್ ಪ್ರೀತಿಸಿದ್ದು ಪದ್ಮಿನಿನೇ ಆದ್ರೂ ಅನಿವಾರ್ಯ ಕಾರಣದಿಂದ ತಾಳಿ ಕಟ್ಟಿದ್ದು ತಂಗಿ ಪೂರ್ವಿ ಕುತ್ತಿಗಿಗೆ. ಯಾವುದು ಬೇಕಂತ ಆಗಿಲ್ಲ ಅಂದರೂ ವಿಧಿ ಹಣೆಬರಹದಿಂದ ಕೈ ಮೀರಿ ಕೆಲವೊಂದು ಘಟನೆಗಳು ಮದುವೆ ಸಂದರ್ಭದಲ್ಲಿ ನಡೆದು ಹೋಗಿವೆ.

ಪುಣ್ಯವತಿ ಸೀರಿಯಲ್

ಮೊದಲಿಗೆ ಪೂರ್ವಿಗೂ ಕೂಡ ಈ ಮದುವೆ ಇಷ್ಟವಿರಲಿಲ್ಲ. ಆದ್ರೆ, ಅಮ್ಮಾಜಿಯ ಕೆಲ ಮಾತಿನಿಂದ ಪ್ರೇರಣೆಗೊಳಗಾಗಿ ಪೂರ್ವಿ ಈಗ ನಿಧಾನವಾಗಿ ಮನಸ್ಸನ್ನ ಬದಲಾವಣೆ ಮಾಡಿಕೊಳ್ಳುತ್ತಿದ್ದಾಳೆ. ‘ಇದು ನನ್ ಮನೆ, ನಿಜವಾದ ತಾಳಿ ನನ್ನ ಕುತ್ತಿಗೆಯಲ್ಲಿದೆ. ನಂದನ್ ಅವ್ರಿಗೆ ಅಕ್ಕ ಸುಳ್ಳಿನ ಪ್ರೀತಿ ತೋರಿಸ್ತಾ ಇದ್ದಾಳೆ. ಈ ಮನೆಗೆ ನಿಜವಾದ ಸೊಸೆ ನಾನು ಅಂತ ಪೂರ್ವಿ ತನ್ನ ಮನಸ್ಸಿಗೆ ತಾನೇ ಹೇಳಿಕೊಳ್ಳುತ್ತಾ ಮನಸ್ಸನ್ನ ಬದಲಾಯಿಸಿಕೊಳ್ಳುತ್ತಿದ್ದಾಳೆ.

ಪೂರ್ವಿ ಮನಸ್ಸು ಈ ರೀತಿ ಬದಲಾವಣೆ ಕಾಣ್ತಿದೆ ಅಂತ ಪದ್ಮಿನಿಗೆ ಎಳ್ಳಷ್ಟು ಡೌಟ್ ಬಂದಿಲ್ಲ. ಆದ್ರೆ, ಗೊತ್ತೋ ಗೊತ್ತಿಲ್ಲದೇನು ಅಕ್ಕನ ಬಾಳಿಗೆ ಮುಳುವಾಗ್ತಿದ್ದಾಳೆ ಪೂರ್ವಿ. ಅಕ್ಕನ ಬಾಳಿಗೆ ಇಲ್ಲಿ ತಂಗಿಯೇ ವಿಲನ್. ವಿಪರ್ಯಾಸ ಅಂದ್ರೆ, ಅಕ್ಕ ತಂಗಿ ಮಧ್ಯೆ ನಿಜವಾದ ಬಡಪಾಯಿ ಆಗ್ತಾ ಇರೋದು ಅಂದ್ರೆ ನಂದನ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಕ್ಕ-ತಂಗಿ ಮಧ್ಯೆ ನಂದನ್ ಪರದಾಟ.. ಪದ್ಮಿನಿ ಬದುಕಲ್ಲಿ ಹುಳಿ ಹಿಂಡಲು ಸಜ್ಜಾದ ತಂಗಿ ಪೂರ್ವಿ..!

https://newsfirstlive.com/wp-content/uploads/2023/08/PUNYAVATI.jpg

Load More