ರಾಧಾ ರಮಣ ಖ್ಯಾತಿಯ ಕಾವ್ಯಾಗೌಡ ಪುತ್ರಿಯ ಫೋಟೋ ರಿವೀಲ್ ಆಯಿತಾ.. 2ನೇ ಮಗುವಿನ ನಿರೀಕ್ಷೆಯಲ್ಲಿ ಫ್ಯಾಮಿಲಿ

author-image
Bheemappa
Updated On
ರಾಧಾ ರಮಣ ಖ್ಯಾತಿಯ ಕಾವ್ಯಾ ಗೌಡ ಮಗಳಿಗೆ ದೃಷ್ಟಿ ತೆಗೆಯಿರಿ; ಕ್ಯೂಟಿ ವಿಡಿಯೋಗೆ ಫ್ಯಾನ್ಸ್ ಫಿದಾ!
Advertisment
  • ಕಾವ್ಯಾಗೌಡ ಮಗಳು ಸಿಯಾ ಹುಟ್ಟಿ ಇಲ್ಲಿಗೆ ಎಷ್ಟು ತಿಂಗಳಾದವು?
  • ಕೇಕ್​ ಕಟ್​​ ಮಾಡಿ ಸಂಭ್ರಮಿಸಿರುವ ನಟಿ ಕಾವ್ಯಾ ಸೋಮಶೇಖರ್​
  • ಪುಟ್ಟ ಕಂದಮ್ಮನ ನಾಮಕರಣ ಶಾಸ್ತ್ರವನ್ನ ಕಾವ್ಯಾಗೌಡ ಮಾಡಿದ್ರಾ?

ಸೀತಾವಲ್ಲಭ, ಗಾಂಧಾರಿ, ರಾಧಾರಮಣ ಸೇರಿದಂತೆ ಹಲವು ಸೂಪರ್​ ಹಿಟ್​ ಧಾರಾವಾಹಿಗಳ ಮೂಲಕ ರಂಜಿಸಿದವರು ನಟಿ ಕಾವ್ಯಗೌಡ. ಸದ್ಯ ಅಭಿನಯದಿಂದ ಬ್ರೇಕ್ ತಗೊಂಡಿರುವ ನಟಿ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ. ಜೊತೆಗೆ ಫ್ಯಾಷನ್​ ಕ್ಷೇತ್ರದಲ್ಲಿಯು ತೊಡಗಿಸಿಕೊಂಡು ಇನ್ನೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.

ಜನವರಿ 22 ರಂದು ಮುದ್ದಾದ ಹೆಣ್ಣುಮಗುವಿಗೆ ಕಾವ್ಯಾಗೌಡ ಜನ್ಮ ನೀಡಿದರು. ರಾಮಮಂದಿರ ಪ್ರತಿಷ್ಠಾಪನೆ ದಿನ ಮಗುವನ್ನ ವೆಲ್​ಕಮ್​ ಮಾಡಿ, ಸಂಭ್ರಮದಿಂದ ಮಗಳಿಗೆ ಪ್ರೀತಿಯಿಂದ ಸಿಯಾ ಎಂದು ಕರೆಯುತ್ತಿದ್ದಾರೆ. ಹಾಗಾದ್ರೆ ಮಗುವಿನ ನಾಮಕರಣ ಹಾಗಿದೆಯಾ ಅಥವಾ ಆಗಿಲ್ವಾ ಎನ್ನುವ ಪ್ರಶ್ನೆ ನಿಮ್ಮಲ್ಲಿದರೆ ಅದಕ್ಕೆ ಆನ್ಸರ್ ಸಿಂಪಲ್. ಮನೆಯಲ್ಲಿ ಮುದ್ದಾಗಿ ಕರೆಯಲು ಈ ಹೆಸರು ಇಟ್ಟಿದ್ದಾರೆಷ್ಟೆ, ಇನ್ನೂ ಮಗುವಿನ ನಾಮಕರಣ ಶಾಸ್ತ್ರವಾಗಿಲ್ಲ. ಸದ್ಯ ಸಿಯಾಗೆ ಎರಡು ತಿಂಗಳು ತುಂಬಿದ್ದು, ಕೇಕ್​ ಕಟ್​​ ಮಾಡಿ ಸಂಭ್ರಮಿಸಿದ್ದಾರೆ ಕಾವ್ಯ ಸೋಮಶೇಖರ್​ ದಂಪತಿ.

ಇದನ್ನೂ ಓದಿ: ಮೋಹಕ ತಾರೆ ಅಭಿಮಾನಿಗಳಿಗೆ ಬೇಸರದ ಸುದ್ದಿ.. ಶಾಕಿಂಗ್ ನಿರ್ಧಾರ ಅನೌನ್ಸ್ ಮಾಡಿದ ರಮ್ಯಾ; ಏನದು?

publive-image

ಇನ್ನೂ ಡಬಲ್​ ಸಂಭ್ರಮ ಎನ್ನುವಂತೆ ಕಾವ್ಯ ಕುಟುಂಬ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಾವ್ಯ ಅವರ ಸಹೋದರಿ ಫ್ಯಾಷನ್​ ಡಿಸೈನರ್​ ಆಗಿರೋ ಭವ್ಯಾಗೌಡ ಕೂಡ ತಮ್ಮ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಕ್ಕ-ತಂಗಿ ಒಟ್ಟಿಗೆ ತಾಯ್ತನದ ಸವಿ ಅನುಭವಿಸುತ್ತಿದ್ದು, ಆ ಫೋಟೋಗಳನ್ನ ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಮುದ್ದಾದ, ಕ್ಯೂಟ್ ಆಗಿರೋ ಕಾವ್ಯ ಮಗಳು ಸಿಯಾಳ ಫೋಟೋಗಳನ್ನ ಇನ್ನು ರಿವೀಲ್​ ಮಾಡಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment