/newsfirstlive-kannada/media/post_attachments/wp-content/uploads/2024/11/kalaburagi-5.jpg)
ಕಲಬುರಗಿ: ನಾಡಿನಾದ್ಯಂತ 69ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಈ ಸಂಭ್ರಮದ ಹಿನ್ನೆಲೆ ಸರ್ಕಾರಿ ಸಾರಿಗೆ ಬಸ್ ಚಾಲಕ ನಾಗಪ್ಪ ಉಪ್ಪಿನ್ ಅವರ ಕನ್ನಡ ಪ್ರೇಮ ಬೆಳಕಿಗೆ ಬಂದಿದೆ. ಬಸ್ ಸಂಪೂರ್ಣವಾಗಿ ಕನ್ನಡಮಯವಾದ ದೃಶ್ಯ ಕಂಡುಬಂದಿದೆ.
ಬಸ್ ಅಫಜಲಪುರ ತಾಲ್ಲೂಕಿನ ಡಿಪೋಗೆ ಸೇರಿದೆ. ಚಾಲಕ ನಾಗಪ್ಪ ಉಪ್ಪಿನ್ ಸ್ವಂತ ದುಡ್ಡಲ್ಲಿ ಬಸ್ಗೆ ಅಲಂಕಾರ ಮಾಡಿದ್ದಾರೆ. ಸರ್ಕಾರಿ ಬಸ್ಗೆ ಕನ್ನಡದ ಬಾವುಟ ಕಟ್ಟಿ ಕೆಂಪು-ಅರಿಶಿಣದ ಬಲೂನ್ ಕಟ್ಟಿ ಶೃಂಗಾರ ಮಾಡಿದ್ದಾರೆ.
ಇದನ್ನೂ ಓದಿ: ರಾಜ್ಯದ ಏಕೈಕ ಕನ್ನಡಾಂಬೆ ಎಲ್ಲಿದ್ದಾಳೆ ಗೊತ್ತಾ? 365 ದಿನ, ತ್ರಿಕಾಲ ಪೂಜೆ, ಭುವನಗಿರಿಯ ಭುವನೇಶ್ವರಿಗೆ ಬಗ್ಗೆ ಇಲ್ಲಿದೆ ಮಾಹಿತಿ
ಪ್ರಯಾಣಿಕರಿಗಾಗಿ ಬಸ್ನಲ್ಲಿ ಕನ್ನಡ ಹಾಡು ಮಾತ್ರ ಜಿನುತ್ತಿದೆ. ಇನ್ನು ಬಸ್ ಹೊರಗಡೆ ಮತ್ತು ಒಳಗಡೆ ಕನ್ಮಡ ಸಾಹಿತಿಗಳ ಪೋಟೊ ಅಂಟಿಸಲಾಗಿದೆ. ಹಳದಿ ಕೆಂಪು ಬಣ್ಣದಲ್ಲಿ ಬಸ್ ಸಿಂಗಾರಗೊಂಡಿದೆ.
ಇದನ್ನೂ ಓದಿ: ಸ್ಕೂಟರ್ನಲ್ಲಿ ತೆರಳುವಾಗ ಈರುಳ್ಳಿ ಬಾಂಬ್ ಸ್ಫೋಟ.. ಓರ್ವ ಸಾ*ವು, ಆರು ಮಂದಿಗೆ ಗಾಯ
ಕನ್ನಡ ರಾಜೋತ್ಸವದ ದಿನದಂದು ಸರ್ಕಾರಿ ಬಸ್ ಚಾಲಕನ ಕನ್ನಡ ಪ್ರೇಮ ವೈರಲ್ ಆಗುತ್ತಿದೆ. ಬಸ್ ಪೂರ್ತಿ ಕನ್ನಡ ಬಾವುಟವಿದ್ದು, ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ