ರಾಮಾಚಾರಿ ಸೀರಿಯಲ್​​ನಲ್ಲಿ ಟ್ವಿಸ್ಟ್​.. ಮನೆಬಿಟ್ಟು ಹೋಗಲು ಸಿದ್ಧರಾದ ಚಾರು-ರಾಮಾಚಾರಿ

author-image
Ganesh
Updated On
ರಾಮಾಚಾರಿ ಸೀರಿಯಲ್​​ನಲ್ಲಿ ಟ್ವಿಸ್ಟ್​.. ಮನೆಬಿಟ್ಟು ಹೋಗಲು ಸಿದ್ಧರಾದ ಚಾರು-ರಾಮಾಚಾರಿ
Advertisment
  • ರಾಮಾಚಾರಿ ಧಾರಾವಾಹಿಯಲ್ಲಿ ಮತ್ತೊಂದು ರೋಚಕ ಟ್ವಿಸ್ಟ್
  • ವೈಶಾಖ ಗರ್ಭಿಣಿ ಅಲ್ಲ ಅನ್ನೋದು ನಿರೂಪಿಸಲು ಚಾರು ಫೇಲ್
  • ಹೊರ ಹೋಗುವ ಸುದ್ದಿ ನಾರಾಯಾಣ ಆಚಾರ್​ ಕಿವಿಗೆ ಬಿತ್ತಾ?

ಕಲರ್ಸ್ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಮೂಡಿಬರುವ ‘ರಾಮಾಚಾರಿ’ ಸೀರಿಯಲ್ ಇಂದಿಗೂ ಹಾಗೆ ವೀಕ್ಷಕರನ್ನು ಹಿಡಿದಿಟ್ಟುಕೊಂಡಿದೆ. ಅಂದ್ಹಾಗೆ ಸಿನಿಮಾ ರೇಂಜ್​​ನಲ್ಲಿ ಲಾಂಚ್ ಆಗಿದ್ದ ಈ ಧಾರಾವಾಹಿಗೆ ಸಿಕ್ಕಾಪಟ್ಟೆ ಅಭಿಮಾನಿಗಳ ಬಳಗ ಇದೆ. ಹಲವು ರೋಚಕ ಸನ್ನಿವೇಶಗಳನ್ನು ಸೃಷ್ಟಿಸಿಕೊಂಡು ಮುನ್ನುಗ್ಗುತ್ತಿರುವ ರಾಮಚಾರಿ ಬದುಕಲ್ಲಿ ಮತ್ತೊಂದು ತಿರುವು ಸಿಕ್ಕಿದೆ.

ಕತೆಯಲ್ಲಿ ಬರುವ ಅತ್ತೆ ಮಾನ್ಯತಾ, ಅತ್ತಿಗೆ ವೈಶಾಖ ಸೃಷ್ಟಿಸುತ್ತಿದ್ದ ಗಂಡಾಂತರಗಳಿಂದ, ಕಂಟಕಗಳಿಂದ ಆಗಾಗ ಪಾರಾಗುತ್ತಿದ್ದ ರಾಮಾಚಾರಿ ಬದುಕಿಗೆ ಮತ್ತೊಂದು ಸಂಕಷ್ಟ ಬಂದಿದೆ. ನಾರಾಯಾಣ ಆಚಾರ್ ಮೇಲೆ ಸೇಡು ತೀರಿಸಿಕೊಳ್ಳಲು ಸೊಸೆಯಾಗಿ ಬಂದಿರುವ ವೈಶಾಖ್, ಮನೆಯಲ್ಲಿ ತಾನು ಗರ್ಭಿಣಿ ಎಂಬ ಹೊಸ ನಾಟಕ ಶುರುಮಾಡಿದ್ದಳು.

ಇದನ್ನೂ ಓದಿ:ಶಿವಂ ದುಬೆಗೆ ಸಿಗಬೇಕಿದ್ದ ಅವಕಾಶ ನೀಡಿದ್ದ ಗಂಭೀರ್​.. ಸಂಜು ಹೀಗೆ ಮಾಡಿದ್ದು ಸರಿಯೇ ಎಂದು ಬೇಸರ

publive-image

ಆದರೆ, ನನ್ನ ಅಕ್ಕ ಗರ್ಭಿಣಿ ಅಲ್ಲ ಅನ್ನೋದನ್ನು ರಾಮಾಚಾರಿ ಪತ್ನಿ ಚಾರು ಕಂಡುಕೊಳ್ತಾಳೆ. ಈ ವಿಚಾರ ವೈಶಾಖಗೆ ಗೊತ್ತಾದ ಮೇಲೆ, ಚಾರು ವಿರುದ್ಧ ಗಂಭೀರ ಪಿತೂರಿ ಒಂದನ್ನು ಮಾಡುತ್ತಾಳೆ. ಚಾರು ಮಾಡಿದ ಕೆಲಸದಿಂದಾಗಿ ನಾನು ಮನೆಯಲ್ಲಿ ಜಾರಿಬಿದ್ದೆ, ಅದರಿಂದ ಹೊಟ್ಟೆಯಲ್ಲಿದ್ದ ಮಗು ಸತ್ತು ಹೋಯ್ತು ಎಂದು ಕತೆ ಕಟ್ಟಿ ಹೈಡ್ರಾಮಾ ಸೃಷ್ಟಿಸುತ್ತಾಳೆ. ಅಕ್ಕ ಮತ್ತೊಂದು ನಾಟಕ ಶುರು ಮಾಡಿದ್ದಾಳೆ ಎಂದು ಚಾರುಗೆ ಗೊತ್ತಾದರೂ ಅದು ಸುಳ್ಳು ಎಂದು ನಿರೂಪಿಸುವಲ್ಲಿ ಸೋಲುತ್ತಾಳೆ.

publive-image

ಇತ್ತ ವೈಶಾಖ ಹೇಳಿರೋದು ನಿಜ ಎಂದು ನಂಬಿರುವ ಆಕೆಯ ಗಂಡ ಕೋದಂಡ, ಚಾರು ಮನೆಯಿಂದ ಬಿಟ್ಟು ಹೋಗುವಂತೆ ತಾಕೀತು ಮಾಡುತ್ತಾನೆ. ಆಗ ರಾಮಚಾರಿ ಮಧ್ಯಪ್ರವೇಶ ಮಾಡಿ, ಅಣ್ಣ ನೀವು ಮನೆಯಿಂದ ಆಚೆ ಹೋಗೋದು ಬೇಡ. ಯಾರು ತಪ್ಪು ಮಾಡಿದ್ದಾರೋ, ಅವರು ಮನೆಯಿಂದ ಹೋಗ್ತಾರೆ. ನನ್ನ ಪತ್ನಿ ಅಪರಾಧ ಮಾಡಿದ್ದಾಳೆ ಅಂದ್ಮೇಲೆ ನಾವು ಮನೆಯಿಂದ ಹೋಗಬೇಕು. ನಾವು ಹೋಗ್ತೀವಿ ಎಂದು ರಾಮಾಚಾರಿ ಚಾರು ಕೈಹಿಡಿದು ಹೊರಡಲು ಸಿದ್ಧರಾಗ್ತಾರೆ. ಈ ವಿಚಾರ ಮನೆಯಿಂದ ಆಚೆ ಇರುವ ನಾರಾಯಣ ಆಚಾರ್ ಅವರ ಕಿವಿಗೂ ಬಿದ್ದಿದೆ. ಹೀಗಾಗಿ ರಾಮಾಚಾರಿ-ಚಾರು ಮನೆಯಿಂದ ಹೊರ ಹೋಗ್ತಾರಾ ಇಲ್ಲವಾ ಅನ್ನೋದು ಭಾರಿ ಕುತೂಹಲ ಮೂಡಿಸಿದೆ. ಇವತ್ತಿನ ಎಪಿಸೋಡ್​ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಇದನ್ನೂ ಓದಿ:31ರನ್​ ಅಂತರದಲ್ಲಿ 7 ವಿಕೆಟ್ ಬೇಟೆ.. ಅದ್ಭುತ ಆರಂಭ ಕಂಡರೂ ಲಂಕನ್ನರ ಕಟ್ಟಿಹಾಕಿದ್ದು ಈ ಆಟಗಾರರು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment