Advertisment

ಒಂಟಿಯಾದ ಚಂದನ್ ಶೆಟ್ಟಿ ಮನೆಗೆ ಹೊಸ ಅತಿಥಿ; ಏನಿದರ ಸ್ಪೆಷಲ್? ಲೆಜೆಂಡ್‌ ಕಾರಿನ ರೇಟ್ ಎಷ್ಟು?

author-image
admin
Updated On
ಒಂಟಿಯಾದ ಚಂದನ್ ಶೆಟ್ಟಿ ಮನೆಗೆ ಹೊಸ ಅತಿಥಿ; ಏನಿದರ ಸ್ಪೆಷಲ್? ಲೆಜೆಂಡ್‌ ಕಾರಿನ ರೇಟ್ ಎಷ್ಟು?
Advertisment
  • ಗಾಯಕ ಚಂದನ್ ಶೆಟ್ಟಿಯ ಮನೆಗೆ ಹೊಸ ಅತಿಥಿಯ ಆಗಮನ
  • ಹೊಸ ಕಾರಿಗೆ ನಾಮಕರಣ ಮಾಡಿ ಖುಷಿ ಹಂಚಿಕೊಂಡ ಚಂದನ್
  • ನಿವೇದಿತಾ ಗೌಡ ಜೊತೆ ಮುದ್ದು ರಾಕ್ಷಸಿ ಸಿನಿಮಾದಲ್ಲಿ ಅಭಿನಯ

ಕನ್ನಡದ ಱಪರ್ ಚಂದನ್ ಶೆಟ್ಟಿ ಬ್ಯಾಕ್‌ ಟು ಬ್ಯಾಕ್ ಖುಷಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ನಿವೇದಿತಾ ಗೌಡ ಜೊತೆ ಅಭಿನಯಿಸುತ್ತಿರುವ ಮುದ್ದು ರಾಕ್ಷಸಿ ಸಿನಿಮಾದ ಟೈಟಲ್ ಲಾಂಚ್ ಮಾಡಿದ್ದರು. ಇದಾದ ಬಳಿಕ ತಮ್ಮ ಮನೆಗೆ ಹೊಸ ಅತಿಥಿಯನ್ನು ಕರೆದುಕೊಂಡು ಬಂದಿದ್ದಾರೆ. ಅದಕ್ಕೊಂದು ಹೊಸ ನಾಮಕರಣವನ್ನು ಮಾಡಿದ್ದಾರೆ.

Advertisment

ಇದನ್ನೂ ಓದಿ: ಗುಡ್‌ನ್ಯೂಸ್ ಕೊಟ್ಟ ಚಂದನ್ ಶೆಟ್ಟಿ, ನಿವೇದಿತಾ ಜೋಡಿ.. ವಿಚ್ಛೇದನದ ಬಳಿಕ ಹೊಸ ಜೀವನ ಆರಂಭ 

ಚಂದನ್ ಶೆಟ್ಟಿ ಅವರು ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಬೆನ್ನಲ್ಲೇ ಟೊಯೋಟಾ ಲೆಜೆಂಡರ್ ಕಾರನ್ನು ಖರೀದಿಸಿ ಫೋಟೋ ಹಂಚಿಕೊಂಡಿದ್ದಾರೆ. ಲೆಜೆಂಡರ್‌ ಕಾರಿನ ಜೊತೆ ಸಖತ್ ಪೋಸ್ ಕೊಟ್ಟಿರುವ ಚಂದನ್ ಶೆಟ್ಟಿ ಅವರು ಇದು ನನ್ನ ಸಣ್ಣ ಆನೆಯ ಮೊದಲ ಚಿತ್ರ ಎಂದು ಬರೆದುಕೊಂಡಿದ್ದಾರೆ. ಕಾರಿನ ನಂಬರ್ ಪ್ಲೇಟ್ ಕೂಡ ವಿಶೇಷವಾಗಿದೆ. 1414 ಅನ್ನೋ ಫ್ಯಾನ್ಸಿ ನಂಬರ್ ಅನ್ನು ಚಂದನ್ ಶೆಟ್ಟಿ ತಮ್ಮ ಆನೆಯಂತ ಕಾರಿಗೆ ಪಡೆದುಕೊಂಡಿದ್ದಾರೆ.

publive-image

ಗಾಯಕ ಚಂದನ್ ಶೆಟ್ಟಿ ಅವರು 4 ವರ್ಷದ ಹಿಂದೆ ನಿವೇದಿತಾ ಗೌಡ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಕಳೆದ ಜೂನ್ ತಿಂಗಳಲ್ಲಿ ಇವರಿಬ್ಬರು ದಾಂಪತ್ಯ ಬದುಕು ಅಂತ್ಯ ಕಂಡಿದೆ. ನ್ಯಾಯಾಲಯಕ್ಕೆ ಮನವಿ ಮಾಡಿದ್ದ ಈ ಸ್ಟಾರ್ ಜೋಡಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದಾರೆ. ಡಿವೋರ್ಸ್‌ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಖುದ್ದು ಚಂದನ್, ನಿವೇದಿತಾ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದರು. ಆ ಬೆನ್ನಲ್ಲೇ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ದೂರ ದೂರ ಆಗಿದ್ದಾರೆ. ದಾಂಪತ್ಯ ಕಲಹ, ವಿಚ್ಛೇದನದ ಜಂಜಾಟದಿಂದ ಹೊರ ಬಂದಿರುವ ಇಬ್ಬರು ತಮ್ಮ ಕೆರಿಯರ್‌ ಬಗ್ಗೆ ಹೆಚ್ಚು ಗಮನ ಹರಿಸಿದ್ದಾರೆ.

Advertisment

ಇದನ್ನೂ ಓದಿ: ಗರ್ಭಿಣಿ ಪತ್ನಿಗಾಗಿ ಏನೆಲ್ಲಾ ಮಾಡ್ತಾರೆ ಚಂದನ್​ ಗೌಡ; ಕವಿತಾ ಗೌಡ ಆಸೆ ಈಡೇರಿಸಿದ್ರು ನೋಡಿ​ 

ಚಂದನ್ ‘ಆನೆ’ಯ ರೇಟ್ ಎಷ್ಟು?
ಚಂದನ್ ಶೆಟ್ಟಿ ಖರೀದಿಸಿರುವ ಟೊಯೋಟಾ ಲೆಜೆಂಡರ್ ಕಾರಿನ ದರ 43.66 ಲಕ್ಷ ರೂಪಾಯಿ ಇಂದ ಆರಂಭವಾಗುತ್ತದೆ. 47.64 ಲಕ್ಷ ರೂಪಾಯಿವರೆಗೂ ಉನ್ನತ ಮಾದರಿಯ ಲೆಜೆಂಡರ್ ಕಾರು ಮಾರಾಟವಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment