/newsfirstlive-kannada/media/post_attachments/wp-content/uploads/2024/09/ISHANI.png)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಕಾರ್ತಿಕ್ ಮಹೇಶ್, ಸಂಗೀತಾ ಶೃಂಗೇರಿ, ಡ್ರೋನ್​ ಪ್ರತಾಪ್​, ವಿನಯ್ ಗೌಡ, ತನಿಷಾ ಹೀಗೆ ಬಿಗ್​ಬಾಸ್​ ಮಾಜಿ ಸ್ಪರ್ಧಿಗಳು ಸುದ್ದಿಯಲ್ಲಿ ಇರೋದು ಕಾಮನ್​.
ಇದನ್ನೂ ಓದಿ: ನಾನಿನ್ನೂ ಆರೋಪಿ ಅಪರಾಧಿ ಅಲ್ಲ.. ಬಳ್ಳಾರಿ ಜೈಲಲ್ಲಿ ದರ್ಶನ್ ಮತ್ತೊಂದು ಕಿರಿಕ್; ಏನಂದ್ರು?
/newsfirstlive-kannada/media/post_attachments/wp-content/uploads/2024/09/bigg-boss-ishani2.jpg)
ಆದ್ರೆ ಅವಕಾಶ ಸಿಕ್ಕರೇ ಮತ್ತೆ ಬಿಗ್​ಬಾಸ್​ಗೆ ವಾಪಸ್ ಹೋಗ್ತೀನಿ ಅಂತಾ ತಿಳಿಸಿದ್ದಾರೆ. ಹೌದು, ಕನ್ನಡದ ಱಪರ್​ ಇಶಾನಿ ಶೇಕಡಾ 83ರಷ್ಟು ವೋಟ್​ ಪಡೆದು ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದರು. ಮೂರನೇ ಸ್ಪರ್ಧಿಯಾಗಿ ಬಿಗ್​ಬಾಸ್​ ಮನೆಗೆ ಹೋಗಿದ್ದ ಱಪರ್​ ಇಶಾನಿ ಸೀಸನ್​10ರಲ್ಲಿ ಸಾಕಷ್ಟು ಸದ್ದು ಮಾಡಿದ್ದರು. ಮೈಸೂರು ಮೂಲದ ಇಶಾನಿ ದುಬೈನಲ್ಲಿ, ಲಾಸ್ ಏಂಜಲಿಸ್ನಲ್ಲಿ ಬೆಳೆದಿದ್ದಾರೆ. ಇವರು ಹಾಡಿರೋ ಹಾಡುಗಳಿಗೆ ಸಾಕಷ್ಟು ಜನರು ಫುಲ್​ ಫಿದಾ ಆಗಿದ್ದರು.
/newsfirstlive-kannada/media/post_attachments/wp-content/uploads/2024/09/bigg-boss-ishani1.jpg)
ಇದೀಗ ಬಿಗ್​ಬಾಸ್ ಸೀಸನ್ 10ರ ಸ್ಪರ್ಧಿ ಇಶಾನಿ ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಹುಟ್ಟು ಹಬ್ಬದ ದಿನವೇ ಒಂದು ಱಪ್​ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡಿನಲ್ಲಿ ತಮ್ಮ ವಿರೋಧಿಗಳಿಗೆ ಖಾರವಾಗಿಯೇ ಟೀಕಿಸಿದ್ದು, ಕೆಟ್ಟ ಕಾಮೆಂಟ್ ಮಾಡೋರಿಗೆ ತಿರುಗೇಟು ನೀಡಿದ್ದಾರೆ. ಇದೇ ವೇಳೆ ಬಿಗ್​ಬಾಸ್​ ಸೀಸನ್​-11ರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು.. ಯಾರೆಲ್ಲ ಬಿಗ್​ಬಾಸ್​ ಮನೆಗೆ ಹೋಗ್ತಿದ್ದಾರೋ ಅವರಿಗೆಲ್ಲ ಆಲ್​ದಿ ಬೆಸ್ಟ್. ನಾನು ಒಂದು ಮಿಸ್ಟೇಕ್ಸ್​ ಮಾಡಿದ್ದೆ. ಬಿಗ್​ಬಾಸ್​ ಜೀವನ ಅನ್ಕೊಂಡಿದ್ದೆ. ಆಮೇಲೆ ಗೊತ್ತಾಗಿದ್ದು ಅದೊಂದು ಗೇಮ್ ಶೋ ಎಂದು. ನೀವು ಯಾವುದೇ ಎಮೋಷನಲ್ ಇಟ್ಕೊಂಡು ಅಲ್ಲಿಗೆ ಹೋಗಬೇಡಿ. ಯಾರೂ ಕೂಡ ಕಿಮ್ಮತ್ತು ಕೊಡಲ್ಲ. ನನಗೆ ಅವಕಾಶ ಸಿಕ್ಕರೆ ಮತ್ತೆ ಹೋಗ್ತೇನೆ. ನಿಮ್ಮ ಹೇಟರ್ಸ್​​ಗೆ ಉತ್ತರ ಕೊಡಬೇಕು ಎಂದು ಅಭಿಮಾನಿಗಳು ಮೆಸೇಜ್ ಮಾಡ್ತಿದ್ದಾರೆ. ನೋಡೋಣ, ಅವಕಾಶ ಸಿಕ್ಕರೆ ಖಂಡಿತ ಎಂದು ಇಶಾನಿ ಹೇಳಿದ್ದಾರೆ. ಈಶಾನಿ ಜೊತೆಗಿನ ಸಂದರ್ಶನದ ವಿಡಿಯೋ ಇಲ್ಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us