ಮತ್ತೊಂದು ರೀಲ್ಸ್ ವಿವಾದ.. ಗೋಪಿಗೌಡ್ರು ಮಾಡಿಕೊಂಡ್ರು ದೊಡ್ಡ ಯಡವಟ್ಟು; ಏನು ಗೊತ್ತಾ?

author-image
admin
Updated On
ಮತ್ತೊಂದು ರೀಲ್ಸ್ ವಿವಾದ.. ಗೋಪಿಗೌಡ್ರು ಮಾಡಿಕೊಂಡ್ರು ದೊಡ್ಡ ಯಡವಟ್ಟು; ಏನು ಗೊತ್ತಾ?
Advertisment
  • ವೈಫ್ ಕಾಲ್ಸ್ ಮೀ ಬೇಬಿ ಎಂಬ ಖಾತೆಯಲ್ಲಿ ವಿಡಿಯೋ ಪೋಸ್ಟ್
  • ಗೋಪಿ ಗೌಡ್ರ ಆಕ್ಷೇಪಾರ್ಹ ರೀಲ್ಸ್ ಬಗ್ಗೆ ಈಗ ಸಖತ್ ಚರ್ಚೆ
  • ಸಾರ್ವಜನಿಕರಿಗೆ ಈ ರೀತಿ ಮೆಸೇಜ್​​ ಕೊಡೋದು ಕಾನೂನನಲ್ಲಿ ಅಪರಾಧ

ಬೆಂಗಳೂರು: ಮೊದಲೇ ಇದು ರೀಲ್ಸ್​ ಯುಗ. ವಾಸ್ತವತೆಯನ್ನ ಮರೆತು ಭ್ರಮೆಯಲ್ಲಿ ಬದುಕ್ತಾ ಇರೋ ಯುವಕರು ರೀಲ್ಸ್​ ಉನ್ಮಾದದಲ್ಲಿ ಹುಚ್ಚಾಟ ಮೆರೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ರಜತ್-ವಿನಯ್ ಮಚ್ಚಿಡಿದು ರೀಲ್ಸ್​ ಮಾಡಿ ಜೈಲು ಸೇರಿದ್ರು. ಈಗ ಮತ್ತೊಂದು ಆಕ್ಷೇಪಾರ್ಹ ರೀಲ್ಸ್ ಚರ್ಚೆಗೆ ಗ್ರಾಸವಾಗಿದೆ.

ವೈಫ್ ಕಾಲ್ಸ್ ಮೀ ಬೇಬಿ ಎಂಬ ಸೋಷಿಯಲ್​ ಮೀಡಿಯಾದ ಖಾತೆ ಮತ್ತು ಗೋಪಿಗೌಡ್ರು ಖಾತೆಯಲ್ಲಿ ಒಂದು ವಿಡಿಯೋ ಪೋಸ್ಟ್ ಮಾಡಲಾಗಿದೆ. ಆ ವಿಡಿಯೋದಲ್ಲಿ ಎರಡು ಪ್ಲಾಸ್ಟಿಕ್​ ಗ್ಲಾಸ್​ಗೆ, ಥಮ್​ಸಪ್​ ಹಾಕಿಕೊಂಡು, ಆ ಡ್ರಿಂಕ್​ಗೆ ನೀರು ಮಿಕ್ಸ್​ ಮಾಡಿ ಚೀಯರ್‌​​ ಮಾಡಿ ಕುಡಿದಿದ್ದಾರೆ. ಕೂಲ್​ಡ್ರಿಂಕ್​​ಗೆ ನೀರು ಮಿಕ್ಸ್​ ಮಾಡಿ ಕುಡಿದಿದ್ದು ತಪ್ಪಲ್ಲ. ಕಾರು​ ಡ್ರೈವ್​​ ಮಾಡ್ತಾ, ಈ ರೀತಿ ಮದ್ಯಪಾನ ಮಾಡುವಂತೆ ಡ್ರಿಂಕ್​ ಮಾಡಿದ್ದು ತಪ್ಪು ಎಂದು ಆಕ್ರೋಶಗಳು ವ್ಯಕ್ತವಾಗ್ತಿದೆ.

publive-image

ಸದ್ಯಕ್ಕೆ ಈ ವಿಡಿಯೋ ಡ್ರಂಕ್​​ ಌಂಡ್​ ಡ್ರೈವ್​​ ರೀತಿಯಲ್ಲಿದೆ. ಡ್ರೈವಿಂಗ್‌ನಲ್ಲಿ ಮದ್ಯಪಾನ ಸೇವಿಸಲು ಉತ್ತೇಜಿಸುವಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಕಾರು ಚಾಲನೆ ಮಾಡುತ್ತಲೇ ಗೋಪಿ ಗೌಡ್ರು ಹಾಗೂ ಸ್ನೇಹಿತ ಮದ್ಯಪಾನ ಸೇವಿಸಿದಂತೆ ರೀಲ್ಸ್ ಕ್ರಿಯೇಟ್​ ಮಾಡಿರೋದು ಟೀಕೆಗೆ ಕಾರಣವಾಗಿದೆ.

ಇದನ್ನೂ ಓದಿ: ರಕ್ಷಿತಾಗೆ ಮಗನಂತೆ ಇದ್ದ.. ಸ್ನೇಹಿತ ರಾಕೇಶ್ ಪೂಜಾರಿ ಬಗ್ಗೆ ಹೇಳುತ್ತಲೇ ನಟ ಜಿಜಿ ಭಾವುಕ; ಏನಂದ್ರು? 

ಇಲ್ಲಿ ಮತ್ತೊಂದು ಅನುಮಾನವೂ ಉದ್ಭವವಾಗಿದೆ. ನಿಜಕ್ಕೂ ಅದು ಕೇವಲ ಥಮ್ಸ್ ಅಪ್​​ಹಾ? ಇಲ್ಲಾ ಥಮ್ಸ್​​ ಅಪ್​​ ಒಳಗೆ ಡ್ರಿಂಕ್​ ಇತ್ತಾ. ಇಲ್ಲದೆ ಇದ್ದರೆ ಆ ಡ್ರಿಂಕ್​ಗೆ ನೀರು ಮಿಕ್ಸ್ ಮಾಡಿದ್ದು ಯಾಕೆ ಅನ್ನೋ ಅನುಮಾನ ಹೆಚ್ಚಾಗಿದೆ. ಈ ರೀತಿಯ ರೀಲ್ಸ್​ನಿಂದ ಸಮಾಜಕ್ಕೆ, ಡ್ರೈವಿಂಗ್​ನಲ್ಲಿ ಎಣ್ಣೆ ಹೊಡಿಬಹುದು ಅನ್ನೋ ರಾಂಗ್​ ಮೆಸೇಜ್​​ ಕೊಟ್ಟಂತೆ ಆಗಿದ್ದು ಕಾನೂನಿನ ಪ್ರಕಾರ ಅಪರಾಧ.

ರಜತ್​​- ವಿನಯ್​​.. ದಚ್ಚು, ವಿಕ್ಕಿ ಪೀಡಿಯಾ.. ಹೀಗೆ ಅನೇಕ ಮಂದಿ ಸೋಷಿಯಲ್​ ಮೀಡಿಯಾದಲ್ಲಿ ಕೆಲವು ಆಕ್ಷೇಪಾರ್ಹ ರೀಲ್ಸ್​ಗಳನ್ನ ಮಾಡಿ ಪೋಲಿಸರಿಂದ ವಾರ್ನಿಂಗ್​ಗಳನ್ನ ತೆಗೆದುಕೊಂಡಿದ್ದಾರೆ. ಈ ಹಿಂದಿನ ಘಟನೆಗಳ ಬಳಿಕವೂ, ರೀಲ್ಸ್ ಮಾಡೋರು ಬುದ್ಧಿ ಕಲಿತಿಲ್ಲ. ಸದ್ಯಕ್ಕೆ ಈ ವಿಡಿಯೋಗೆ ಭಾರಿ ಆಕ್ಷೇಪಗಳು ಬರ್ತಿದ್ದಂತೆ, ಗೋಪಿಗೌಡ್ರು ಪೋಸ್ಟ್ ಮಾಡಿ ಡಿಲೀಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment