ಸಖತ್​ ಖುಷಿಯಲ್ಲಿದ್ದಾರೆ ಸರಿಗಮಪ ಖ್ಯಾತಿಯ ಲಹರಿ ಮಹೇಶ್​.. ಏನದು..?

author-image
Veena Gangani
Updated On
ಸಖತ್​ ಖುಷಿಯಲ್ಲಿದ್ದಾರೆ ಸರಿಗಮಪ ಖ್ಯಾತಿಯ ಲಹರಿ ಮಹೇಶ್​.. ಏನದು..?
Advertisment
  • ಸೋಷಿಯಲ್​ ಮೀಡಿಯಾದಲ್ಲಿ ಗುಡ್​ನ್ಯೂಸ್​ ಹಂಚಿಕೊಂಡ ಲಹರಿ
  • ಮತ್ತೆ ಲಹರಿ ಧ್ವನಿ ಕೇಳಿ ಅಭಿಮಾನಿಗಳೆಲ್ಲಾ ಆದ್ರೂ ಫುಲ್ ಖುಷ್
  • ಸರಿಗಮಪ ಫಿನಾಲೆಯಲ್ಲಿ ಚಾನ್ಸ್​ ಮಿಸ್​ ಮಾಡಿಕೊಂಡಿದ್ದ ಗಾಯಕಿ

ಸರಿಗಮಪ ಖ್ಯಾತಿಯ ಲಹರಿ ಮಹೇಶ್​ ಸಖತ್ ಖುಷಿಯಲ್ಲಿದ್ದಾರೆ. ಅತ್ಯುತ್ತಮ ಪ್ರತಿಭೆ ಮೈಸೂರಿನ ಲಹರಿ. ಕನ್ನಡದ ಭವಿಷ್ಯದ ಶ್ರೇಯಾ ಘೋಷಲ್ ಅಂತಲೇ ಫೇಮಸ್​ ಆಗಿರೋ​ ಲಹರಿ ತಮ್ಮ ಮೊದಲ ಸಿನಿಮಾದಲ್ಲಿ ಹಾಡು ಹಾಡಿದ್ದಾರೆ.

ಇದನ್ನೂ ಓದಿ:ವೀಕ್ಷಕರಿಗೆ ಇಷ್ಟವಾದ ಜೋಡಿ.. ಈ ಬಾರಿ ಭರ್ಜರಿ ಬ್ಯಾಚುಲರ್ಸ್ 2 ವಿನ್ನರ್​ ಇವರೇನಾ?

ಹೌದು, ಡಾರ್ಲಿಂಗ್​ ಕೃಷ್ಣ ಅಭಿನಯದ​ ಬ್ರ್ಯಾಟ್ ಸಿನಿಮಾದ ಒಂದು ಹಾಡಿಗೆ ಲಹರಿ ಮಹೇಶ್ ಅವರು ಧ್ವನಿ ನೀಡಿದ್ದಾರೆ. ಅದರಲ್ಲೂ ಸ್ಟಾರ್​ ಸಿಂಗರ್ ಸಿದ್ ಶ್ರೀರಾಮ್ ಜೊತೆಯಲ್ಲಿ ಲಹರಿ ಮಹೇಶ್ ಹಾಡಿದ್ದು ಹೆಮ್ಮೆಯ ವಿಚಾರ. ಮತ್ತೊಂದು ವಿಶೇಷ ಏನೆಂದರೆ ಈ ಹಾಡನ್ನು ಸ್ಟಾರ್​ ಸಿಂಗರ್​ ಶ್ರೇಯಾ ಘೋಷಾಲ್ ಅವರಿಂದ ಹಾಡಿಸಬೇಕು ಎಂದು ಚಿತ್ರತಂಡ ನಿರ್ಧರಿಸಿತ್ತಂತೆ. ಆದರೆ ಅರ್ಜುನ್ ಜನ್ಯ ಅವರ ಸಲಹೆ ಮೇರೆಗೆ ಸರಿಗಮಪ ಖ್ಯಾತಿಯ ಗಾಯಕಿ ಲಹರಿ ಮಹೇಶ್ ಅವರಿಗೆ ಈ ಅವಕಾಶ ಸಿಕ್ಕಿತು.

ಇನ್ನೂ, 14 ವರ್ಷದ ಲಹರಿ ಮಹೇಶ್​ ಮೈಸೂರಿನ ಪ್ರತಿಭೆ. ಸರಿಗಮಪದಲ್ಲಿ ನಾಗಾರಾಜ್​ ಟೀಮ್​ಗೆ ಆಯ್ಕೆ ಆಗಿದ್ದರು. ಸರಿಗಮಪ ಸೀಸನ್​ಗೆ ಗೆಸ್ಟ್​ ಆಗಿ ಬಂದಿರೋ ಇಂಡಸ್ಟ್ರಿಯ ದಿಗ್ಗಜರು ಲಹರಿಯನ್ನ ಹಾಡಿ ಹೊಗಳಿದ್ದರು. ಶೋ ಫಿನಾಲೆಗೆ ಬರದಿದ್ರು ದೇಶ ಮೆಚ್ಚುವಂತೆ ಸಾಧನೆ ಮಾಡು ಲಹರಿ ಭವಿಷ್ಯದ ಸೂಪರ್​ ಸ್ಟಾರ್​ ಶ್ರೇಯಾ ಘೋಷಾಲ್​ ಅಂತ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದರು. ಅಷ್ಟೇ ಅಲ್ಲದೇ ಸೆಮಿ ಫಿನಾಲೆಯಲ್ಲಿ ಅರ್ಜುನ್​ ಜನ್ಯ ಸಿನಿಮಾಗೆ ಹಾಡಲು ಲಹರಿಗೆ ಆಫರ್ ಕೊಟ್ಟಿದ್ದರು. ಕೊಟ್ಟ ಮಾತಿನಂತೆ ಲಹರಿಗೆ ಕನ್ನಡದ ಸಿನಿಮಾದಲ್ಲಿ ಹಾಡುವ ಅವಕಾಶವನ್ನು ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ನೀಡಿದ್ದಾರೆ. ಇದೀಗ ಕನ್ನಡ ಇಂಡ್ರಸ್ಟಿಗೆ ಭರವಸೆಯ ಹಾಡುಗಾರ್ತಿಯಾಗಿ ಹೊರ ಹಮ್ಮಿದ್ದಾರೆ.

ಅರ್ಜುನ್ ಜನ್ಯ ಧನ್ಯವಾದ ತಿಳಿಸಿದ ಲಹರಿ..

ಅರ್ಜುನ್ ಜನ್ಯ ಅವರು ತಮ್ಮ ಸಿನಿಮಾದಲ್ಲಿ ಪ್ರತಿಭಾನ್ವಿತ ಗಾಯಕಿ ಲಹರಿಗೆ ಅವಕಾಶ ಕೊಟ್ಟಿದ್ದಕ್ಕೆ ಲಹರಿ ಧನ್ಯವಾದ ತಿಳಿಸಿದ್ದಳು. ಈ ಬಗ್ಗೆ ಲಹರಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ‘ನಿಮ್ಮ ಜೊತೆ ಕೆಲಸ ಮಾಡಿದ್ದಕ್ಕೆ ತುಂಬಾ ಕೃತಜ್ಞಳಾಗಿದ್ದೇನೆ. ಈ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು ಸರ್’ ಎಂದು ಲಹರಿ ಬರೆದುಕೊಂಡು ಅರ್ಜುನ್ ಜನ್ಯ ಜೊತೆಗಿನ ಮತ್ತು ರೆಕಾರ್ಡ್ ಮಾಡುತ್ತಿರುವ ಫೋಟೋ ಶೇರ್ ಮಾಡಿಕೊಂಡಿದ್ದರು. ಈ ಫೋಟೋ ಅಭಿಮಾನಿಗಳು ಟ್ರೋಫಿ ಮುಖ್ಯ ಅಲ್ಲ, ಕಲೆ ಮುಖ್ಯ, ಸೋತು ಗೆದ್ದವಳು ನಮ್ಮ ಲಹರಿ, ತುಂಬಾ ಖುಷಿ ಆಯ್ತು ಅರ್ಜುನ್ ಜನ್ಯ ಸರ್ ಧನ್ಯವಾದಗಳು, ಸೋಲೆ ಗೆಲುವಿನ ಮೆಟ್ಟಿಲು ನಿನ್ನ ಗೆಲುವು ನೋಡಲು ಕಾಯುತ್ತಿದ್ದೇವೆ ಅಂತ ಕಾಮೆಂಟ್ಸ್​ ಹಾಕಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment