ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ಕಿರುತೆರೆ ನಟ ಅರುಣ್​ ಕುಮಾರ್.. ಹುಡುಗಿ ಯಾರು?​

author-image
Veena Gangani
Updated On
ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ಕಿರುತೆರೆ ನಟ ಅರುಣ್​ ಕುಮಾರ್.. ಹುಡುಗಿ ಯಾರು?​
Advertisment
  • ನನ್ನರಸಿರಾಧೆ ಧಾರಾವಾಹಿಯ ಮೂಲಕ ಫೇಮಸ್​ ಆಗಿರೋ ನಟ
  • ನಾಗಿಣಿ, ನನ್ನರಸಿರಾಧೆ, ನೀನಾದೇನಾ ಧಾರಾವಾಹಿಯಲ್ಲಿ ನಟನೆ
  • ಗುರು ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಹೀರೋ

ಕನ್ನಡ ಕಿರುತೆರೆ ನಟ ಅರುಣ್​ ಕುಮಾರ್ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಾಗಿಣಿ, ನನ್ನರಸಿರಾಧೆ, ನೀನಾದೇನಾ ಧಾರಾವಾಹಿ ಮೂಲಕ ಫೇಮಸ್​ ಆಗಿದ್ದ ನಟ ಅರುಣ್​ ಕುಮಾರ್ ಅವರು ಗುರು ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:RCBಗೆ ಶುಭ ಹಾರೈಸಿದ ಕೇಂದ್ರ ಸಚಿವ ಹೆಚ್​​.ಡಿ ಕುಮಾರಸ್ವಾಮಿ.. ತಂಡದ ಬಗ್ಗೆ ಏನು ಹೇಳಿದರು?

publive-image

ಈ ಬಗ್ಗೆ ಖುದ್ದು ನಟ ಅರುಣ್​ ಕುಮಾರ್ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ನಿಶ್ಚಿತಾರ್ಥದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇನ್ನೂ ಕಳೆದ ತಿಂಗಳೂ ಅಂದರೆ ಮೇ 28ರಂದು ಬೆಂಗಳೂರಿನ ಸೌತ್​ ಗ್ರ್ಯಾಂಡ್​ ಹೋಟೆಲ್​ನಲ್ಲಿ ರೀತಿಕಾ ಅಶೋಕ್ ಎಂಬುವವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

publive-image

ನಟ ಅರುಣ್​ ಕುಮಾರ್ ಅವರಿ ನಿಶ್ಚಿತಾರ್ಥ ಮಾಡಿಕೊಂಡ ಹುಡುಗಿ ಹೆಸರು ರೀತಿಕಾ ಅಶೋಕ್. ಇವರು ಯಾವ ಊರಿನವರು, ಇಬ್ಬರದ್ದು ಲವ್​, ಅರೇಂಜ್ ಎಂಬುವುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ನಟ ಅರುಣ್​ ಕುಮಾರ್ ಅವರೇ ಮಾಹಿತಿ ನೀಡಬೇಕಿದೆ.

publive-image

ಸದ್ಯ ನಟ ಶೇರ್ ಮಾಡಿಕೊಂಡ ನಿಶ್ಚಿತಾರ್ಥ ಫೋಟೋ ನೋಡಿ ಅಭಿಮಾನಿಗಳು, ಸ್ನೇಹಿತರು, ಕಿರುತೆರೆ ನಟ ಹಾಗೂ ನಟಿಯರು ಕಾಮೆಂಟ್​​ ಮಾಡುವ ಮೂಲಕ ಶುಭ ಹಾರೈಸಿದ್ದಾರೆ. ನಟ ಅರುಣ್​ ಕುಮಾರ್​ ಅವರು ಸೀರಿಯಲ್​ ಅಷ್ಟೇ ಅಲ್ಲದೇ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಟೈಗರ್ ವಿನೋದ್ ಪ್ರಭಾಕರ್ ಹಾಗೂ ಪದ್ಮಾವತಿ ಫಿಲ್ಮ್ ಹೌಸ್ ಅಡಿಯಲ್ಲಿ ಬರುತ್ತಿರುವ ಬಲರಾಮನ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment