/newsfirstlive-kannada/media/post_attachments/wp-content/uploads/2025/04/Dileep-Khushi8.jpg)
ಮನೆ ಕಟ್ಟಬೇಕು. ಹಾಗೇ ಇರ್ಬೇಕು, ಹೇಗೆ ಇರ್ಬೇಕು ಅನ್ನೋದು ಪ್ರತಿಯೊಬ್ಬ ಕನಸು. ದೊಡ್ಡವರು ಹೇಳ್ತಿದ್ರು ಮನೆ ಕಟ್ಟಿ ನೋಡು.. ಮದುವೆ ಮಾಡಿ ನೋಡು ಅಂತ. ಈಗಿನ ಕಾಲದಲ್ಲಂತೂ ಮದುವೆ ಆಗೋದು ಕಷ್ಟನೇ... ಮನೆ ಕಟ್ಟೋದಂತೂ ಇನ್ನು ಕಷ್ಟ.. ಕಷ್ಟ.. ಹಾಗಂತ ಅಸಾಧ್ಯ ಏನೂ ಅಲ್ಲ. ಮನೆ ಬಗ್ಗೆ ಯಾಕಿಷ್ಟು ಮಾತು ಅಂದರೆ ನಟ ದಿಲೀಪ್ ಶೆಟ್ಟಿ ಕನಸಿನ ಅರಮನೆ ನನಸಾಗಿದೆ.
ಇದನ್ನೂ ಓದಿ:ವಿನಯ್ ಗೌಡ, ರಜತ್ ಪ್ರಕರಣ ಬೆನ್ನಲ್ಲೇ ಮತ್ತೊಂದು ಹುಚ್ಚಾಟ.. ಹೆಂಡ್ತಿಯನ್ನೇ ಅಡವಿಟ್ಟು ಜೂಜಾಡುವ ರೀಲ್ಸ್..!
ಸ್ಟಾರ್ ಸುವರ್ಣದ ಜನಪ್ರಿಯ ಧಾರಾವಾಹಿ ನಿನಾದೆ ನಾ ಖ್ಯಾತಿಯ ನಟ ದಿಲೀಪ್ ಶೆಟ್ಟಿ ಸಂಭ್ರಮದಲ್ಲಿದ್ದಾರೆ. ಕನ್ನಡ ಸೇರಿದಂತೆ ತೆಲುಗು ಭಾಷೆಯಲ್ಲೂ ಅಭಿನಯಿಸ್ತಿರೋ ದಿಲೀಪ್ ತಮ್ಮ ಕನಸಿನ ಗೂಡು ಕಟ್ಟಿಕೊಂಡಿದ್ದಾರೆ. ಮಂಗಳೂರು ಮೂಲದ ನಟ ದಿಲೀಪ್ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡ್ತಾ ಬಂದಿದ್ದಾರೆ.
ವಿದ್ಯಾ ವಿನಾಯಕ, ಕಸ್ತೂರಿ ನಿವಾಸ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಹಲವು ಡ್ಯಾನ್ಸಿಂಗ್ ರಿಯಾಲಿಟಿ ಶೋಗಳಲ್ಲೂ ಭಾಗಿಯಾಗಿದ್ದಾರೆ. ನಿನಾದೆ ನಾ ಮೊದಲ ಅಧ್ಯಾಯ ಇವರಿಗೆ ಹೆಚ್ಚು ಪಾಪ್ಯೂಲಾರಿಟಿ ತಂದು ಕೊಟ್ಟಿತು.
ಈಗ ಇದರ ಮುಂದುವರೆದ ಭಾಗ ನಿನಾದೆ ನಾ ಚಾಪ್ಟರ್ 2ನಲ್ಲಿ ನಾಯಕ ಪಾತ್ರ ನಿರ್ವಹಿಸುತ್ತಿದ್ದಾರೆ. ಇವರಿಗೆ ಜೋಡಿ ಆಗಿ ಖುಷಿ ಶಿವು ಬಣ್ಣ ಹಚ್ಚಿದ್ದಾರೆ. ಈ ಜೋಡಿಗೆ ಅಪಾರ ಅಭಿಮಾನಿ ಬಳಗ ಇದೆ. ಕಷ್ಟಪಟ್ಟು ಇಷ್ಟಪಟ್ಟು ಬೆಂಗಳೂರಿನಲ್ಲಿ ಚಂದದ ಮನೆ ಕಟ್ಟಿದ್ದಾರೆ ನಟ ದಿಲೀಪ್.
ಮೊನ್ನೆ ಸರಳವಾಗಿ ಶಾಸ್ತ್ರೋಕ್ತವಾಗಿ ಗೃಹಪ್ರವೇಶ ನೆರವೇರಿಸಿದ್ದಾರೆ. ಗೃಹಪ್ರವೇಶ ಕಾರ್ಯಕ್ರಮದಲ್ಲಿ ಆತ್ಮಿಯ ಗೆಳತಿ ಖಷಿ ಶಿವು, ಸಾಗರ್ ಬೀಳಿಗೌಡ ದಂಪತಿ, ಅಮೃತಾ ರಾಮಮೂರ್ತಿ ದಂಪತಿ, ಭವ್ಯಾ ಗೌಡ, ನಿಧಿ ಗೌಡ ಸೇರಿದಂತೆ ಹಲವು ಕಿರುತೆರೆ ಕಲಾವಿದರು ಭಾಗಿಯಾಗಿ ಸ್ನೇಹಿತನಿಗೆ ಶುಭ ಕೋರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ