ನಟ ಶಮಂತ್ ಗೌಡ ಮನೆಯಲ್ಲಿ ಮದುವೆ ಸಂಭ್ರಮ; ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ Bro..

author-image
Veena Gangani
Updated On
ನಟ ಶಮಂತ್ ಗೌಡ ಮನೆಯಲ್ಲಿ ಮದುವೆ ಸಂಭ್ರಮ; ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ Bro..
Advertisment
  • ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಶಮಂತ್ ಬ್ರೋ ಗೌಡ​, ಮೇಘನಾ
  • ಮದುವೆ ತಯಾರಿಯಲ್ಲಿ ಬ್ಯುಸಿಯಾದ ಶಮಂತ್ ಬ್ರೋ ಗೌಡ​, ಮೇಘನಾ
  • ಮೇಕಪ್​ ಆರ್ಟಿಸ್ಟ್​ ಆಗಿದ್ದಾರೆ ಶಮಂತ್ ಬ್ರೋ ಗೌಡ​ ಭಾವಿ ಪತ್ನಿ ಮೇಘನಾ

ಕನ್ನಡ ಬಿಗ್​ಬಾಸ್ ಸೀಸನ್​ 8ರ ಸ್ಪರ್ಧಿ, ಲಕ್ಷ್ಮೀ ಬಾರಮ್ಮ ಸೀರಿಯಲ್​ ಖ್ಯಾತಿಯ ಶಮಂತ್ ಬ್ರೋ ಗೌಡ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಹೌದು, ಇಷ್ಟು ದಿನ ಸಿಂಗಲ್​ ಆಗಿದ್ದ ಶಮಂತ್​ ಬ್ರೋ ಗೌಡ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸದ್ಯ ಶಮಂತ್​ ಬ್ರೋ ಗೌಡ ಅರಿಶಿಣ ಶಾಸ್ತ್ರ ಮಿಂದೆದ್ದಿದ್ದಾರೆ.

ಇದನ್ನೂ ಓದಿ: ಇದು ಸಿನಿಮಾ ಅಲ್ಲ, ಸತ್ಯ.. ವಿಶ್ವದ ದೈತ್ಯ ಯಕುಮಾಮಾ ಅನಕೊಂಡ

ತಮ್ಮ ಅದ್ಭುತ ಅಭಿನಯದ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿರೋ ಶಮಂತ್ ಬ್ರೋ ಗೌಡ ಮೊನ್ನೆಯಷ್ಟೇ ಪ್ರೀತಿಸಿದ ಹುಡುಗಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕುಟುಂಬಸ್ಥರು ಒಪ್ಪಿಗೆ ಮೇರೆಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

publive-image

ಶಮಂತ್​ ಹಾಗೂ ಮೇಘನಾ ಮಧ್ಯೆ ಲವ್​ ಆಗಿದ್ದು ಹೇಗೆ?

ಮೇಘನಾ ಗ್ರಾಮ್‌ ಅವರ ಕಾಲೇಜಿನ್‌ ಇವೆಂಟ್‌ವೊಂದರಲ್ಲಿ ಶಮಂತ್‌ ಬ್ರೊ ಗೌಡ ಆಗಮಿಸಿದ್ದರು. ಆ ವೇಳೆ ಶಮಂತ್‌ ಬ್ರೊ ಗೌಡ, ಮೇಘನಾಗೆ ಪರಿಚಯ ಆಗಿತ್ತಂತೆ. ಆಮೇಲೆ ಆ ಪರಿಚಯ ಸ್ನೇಹ ಆಯ್ತು, ಪ್ರೀತಿ ಹುಟ್ಟಿ ಈಗ ಕುಟುಂಬದವರ ಒಪ್ಪಿಗೆ ಪಡೆದು ಈ ಜೋಡಿ ಮದುವೆಯಾಗಲು ರೆಡಿ ಆಗಿದೆ.

ಮೊನ್ನೆಯಷ್ಟೇ ನಟ ಶಮಂತ್ ಭಾವಿ ಪತ್ನಿ ತಮ್ಮ ಬ್ಯಾಚುಲರ್ ಪಾರ್ಟಿ ಮಾಡಿಕೊಂಡಿದ್ದರು. ಮೇಘನಾ ಅವರ ಸ್ನೇಹಿತರು ಬ್ಯಾಚುಲರ್ ಪಾರ್ಟಿ ಆಯೋಜನೆ ಮಾಡಿದ್ದಾರೆ. ರೆಸಾರ್ಟ್​ವೊಂದಲ್ಲಿ ಮೇಘನಾ ಗೆಳತಿಯರು ಬ್ಯಾಚುಲರ್ ಪಾರ್ಟಿ ಹಮ್ಮಿಕೊಂಡಿದ್ದರು. ಈ ಪಾರ್ಟಿಯಲ್ಲಿ ಮೇಘನಾ ಅವರು ಮಸ್ತ್​ ಎಂಜಾಯ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಈ ಫೋಟೋಗಳನ್ನು ನಟಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು.

publive-image

ಇನ್ನೂ ಶಮಂತ್​ ಹಾಗೂ ಮೇಘನಾ ಮದುವೆ ಉತ್ತರ ಕರ್ನಾಟಕ ಶೈಲಿ ಹಾಗೂ ಮರಾಠಿ ಶೈಲಿಯಲ್ಲಿ ನಡೆಯಲಿದೆ. ಎಷ್ಟೋ ಜನಕ್ಕೆ ಶಮಂತ್ ಉತ್ತರ ಕರ್ನಾಟಕದ ಹುಡುಗ ಅಂತ ಗೊತ್ತಿಲ್ಲ. ಅವರ ಪೂರ್ತಿ ಹೆಸರು ಶಮಂತ್​ ಹಿರೇಮಠ. ಮೇಘನಾ ಕುಟುಂಬಸ್ಥರು ಮರಾಠಿಗರು. ಹೀಗಾಗಿ ಎರಡೂ ಶೈಲಿ ಕೊಂಚ ಸಾಮ್ಯತೆ ಇದ್ದು, ಸಂಪ್ರದಾಯಬದ್ಧವಾಗಿ, ಇದೇ ತಿಂಗಳು ಮೇ 21ರಂದು ಅದ್ಧೂರಿಯಾಗಿಯೇ ಮದುವೆ ನಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment