/newsfirstlive-kannada/media/post_attachments/wp-content/uploads/2025/05/Shridhar-Nayak1.jpg)
ಕನ್ನಡ ಕಿರುತೆರೆಯ ಸೂಪರ್​​ ಹಿಟ್​ ಧಾರಾವಾಹಿಗಳಲ್ಲಿ ಪಾರು ಕೂಡ ಒಂದಾಗಿದೆ. ಪಾರು, ವಧು ಸೀರಿಯಲ್‌ನಲ್ಲಿ ನಾಯಕಿ ಡಿವೋರ್ಸ್ ಲಾಯರ್ ವಧು ಚಿಕ್ಕಪ್ಪನ ಪಾತ್ರದಲ್ಲಿ ನಟ ಶ್ರೀಧರ್ ಅಭಿನಯಿಸುತ್ತಿದ್ದರು. ಆದ್ರೆ ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಶ್ರೀಧರ್ ನಾಯಕ್ ಮೇ 26ರ ರಾತ್ರಿ 10 ಗಂಟೆಗೆ ನಿಧನ ಹೊಂದಿದ್ದಾರೆ.
/newsfirstlive-kannada/media/post_attachments/wp-content/uploads/2025/04/sridhar1.jpg)
ಇತ್ತೀಚೆಗೆ ಕನ್ನಡ ಕಿರುತೆರೆಯಲ್ಲಿ ನಟಿಸಿ ಫೇಸಮ್ ಆಗಿದ್ದ ಶ್ರೀಧರ್ ಇನ್ಫೆಕ್ಷನ್​ನಿಂದ ಬಳಲುತ್ತಿದ್ದರು. ಹೀಗಾಗಿ ಅವರ ಚಿಕಿತ್ಸೆಗೆಂದು ಸಹಾಯ ಮಾಡುವಂತೆ ಅನೇಕರು ನಟ ನಟಿಯರು ಕೋರಿಕೊಂಡಿದ್ದರು. ಆದ್ರೆ ಗುರುತೇ ಸಿಗದಷ್ಟು ಬದಲಾಗಿ ಬೆಡ್ ಮೇಲೆ ಮಲಗಿಕೊಂಡಿದ್ದ ನಟನನ್ನು ನೋಡಿದ ಅಭಿಮಾನಿಗಳಿಗೆ ಶಾಕ್ ಎದುರಾಗಿತ್ತು. ಈಗ ಶ್ರೀಧರ್ ಅವರು ಚಿಕಿತ್ಸೆ ಫಲಕಾರಿ ಆಗದೆ ಕೊನೆಯುಸಿರು ಎಳೆದಿದ್ದಾರೆ.
/newsfirstlive-kannada/media/post_attachments/wp-content/uploads/2025/04/sridhar.jpg)
47 ವರ್ಷ ವಯಸ್ಸಿನ ನಟ ಬೆಂಗಳೂರಿನ ಹೆಬ್ಬಾಳದ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹೀಗಾಗಿ ಸದ್ಯ ಬ್ಯಾಪಿಸ್ಟ್ ಆಸ್ಪತ್ರೆಯಲ್ಲಿ ಬೆಳಿಗ್ಗೆ 11 ಗಂಟೆಯವರೆಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. 1978ರಲ್ಲಿ ಜನಿಸಿದ ಶ್ರೀಧರ್ ಅವರು ‘ಪಾರು’ ಧಾರಾವಾಹಿಯಲ್ಲಿ ಆದಿಯ ಚಿಕ್ಕಪ್ಪನ ಪಾತ್ರವನ್ನು ಶ್ರೀಧರ್ ಮಾಡಿದ್ದರು. ಅಷ್ಟೇ ಅಲ್ಲದೇ ಮಂಗಳ ಗೌರಿ ಸೇರಿದಂತೆ 40ಕ್ಕೂ ಅಧಿಕ ಸೀರಿಯಲ್​ನಲ್ಲಿ ಅಭಿನಯಿಸಿದ್ದರು. ಸುದೀಪ್ ನಟನೆಯ ‘ಮ್ಯಾಕ್ಸ್’ ಚಿತ್ರದಲ್ಲಿ ಅವರು ನಟಿಸಿದ್ದರು. ಈಗ ಅವರ ನಿಧನದ ಸುದ್ದಿ ಅಭಿಮಾನಿಗಳಿಗೆ ಅಪಾರ ನೋವು ತಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us