/newsfirstlive-kannada/media/post_attachments/wp-content/uploads/2024/09/varun-aradhya1.jpg)
ಸೋಷಿಯಲ್ ಮೀಡಿಯಾ ರೀಲ್ಸ್ ಸ್ಟಾರ್ ಎಂದೇ ಖ್ಯಾತಿ ಪಡೆದಿರೋ ಕಿರುತೆರೆ ನಟ ವರುಣ್ ಆರಾಧ್ಯ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಆದರೆ ಈ ಬಾರಿ ನಟ ವರುಣ್ ಆರಾಧ್ಯ ತಾಯಿ ಸಖತ್​ ಸುದ್ದಿಯಲ್ಲಿದ್ದಾರೆ. ಹೌದು, ನಟ ವರುಣ್ ಆರಾಧ್ಯ ರೀಲ್ಸ್​ ಮೂಲಕವೇ ಫೇಮಸ್ ಆಗಿರೋ ಹಾಗೇ ತಾಯಿ ಕೂಡ ಸ್ಟಾರ್​ ಆಗಿದ್ದಾರೆ.
ಇದನ್ನೂ ಓದಿ:ಮಗಳನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಮಿಲನಾ ನಾಗರಾಜ್ ದಂಪತಿ; ಮುದ್ದಾದ ಹೆಸರೇನು ಗೊತ್ತಾ?​
/newsfirstlive-kannada/media/post_attachments/wp-content/uploads/2024/09/varun-aradhya.jpg)
ಆಗಾಗ ವರುಣ್ ಆರಾಧ್ಯ ಅವರ ತಾಯಿ ಹಾಗೂ ಅಕ್ಕನ ಜೊತೆ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಆದರೆ ಇದೀಗ ನಟ ವರುಣ್ ಆರಾಧ್ಯ ತಾಯಿ ನೇತ್ರಾ ಬಾಹುಬಲಿ ಶಿವಗಾಮಿ ಲುಕ್​ ಅನ್ನು ರಿಕ್ರಿಯೇಟ್ ಮಾಡಿದ್ದಾರೆ. ಬಾಹುಬಲಿ ಸಿನಿಮಾದಲ್ಲಿ ರಮ್ಯಾ ಕೃಷ್ಣ ಅವರು ಶಿವಗಾಮಿ ಪಾತ್ರದಲ್ಲಿ ಅಭಿನಯಿಸಿದ್ದರು. ಅದೇ ಲುಕ್​ನಲ್ಲಿ ವರುಣ್ ಆರಾಧ್ಯ ತಾಯಿ ಕಾಣಿಸಿಕೊಂಡಿದ್ದಾರೆ.
View this post on Instagram
ಶಿವಗಾಮಿ ಹೇಳಿದ ಡೈಲಾಂಗ್​ ಹೇಳಿ ಅದೇ ಪೋಸ್​ ಕೊಟ್ಟಿದ್ದಾರೆ ವರುಣ್ ಆರಾಧ್ಯ ಅಮ್ಮ. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವರುಣ್ ಆರಾಧ್ಯ ತಾಯಿಯ ಗೆಟಪ್​ಗೆ ನೆಟ್ಟಿಗರು ಶಾಕ್​ ಆಗಿದ್ದಾರೆ. ವಾವ್​ ಸೂಪರ್ ಅಮ್ಮ, ಅದ್ಭುತ ಅಭಿನಯ ಅಂತ ಕಾಮೆಂಟ್ಸ್​ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us